ಉಡುಪಿ: ಗಾಳಿ ಮಳೆ, ಕೆಲವೆಡೆ ಹಾನಿ; ಸಿಡಿಲು ಬಡಿದು ಯುವಕರಿಬ್ಬರು ಸಾವು
ಹೊಸಮಠ: ರಸ್ತೆಗೆ ಉರುಳಿದ ಮರ
Team Udayavani, Apr 26, 2022, 6:35 AM IST
ಉಡುಪಿ/ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸೋಮವಾರ ಸಂಜೆ ಬಿರುಸಾದ ಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಹಾನಿ ಉಂಟಾಗಿದೆ. ಅಜೆಕಾರಿನಲ್ಲಿ ಸಿಡಿಲು ಬಡಿದು ಯುವಕರೊಬ್ಬರು ಸಾವಿಗೀಡಾಗಿದ್ದಾರೆ.
ಕುಂದಾಪುರ ಭಾಗದ ಬಸ್ರೂರು, ತೆಕ್ಕಟ್ಟೆ, ಕೆದೂರು ಪರಿಸರದಲ್ಲಿ ಮಳೆ ಯಾಗಿದೆ. ಉಡುಪಿ, ಮಣಿಪಾಲ ಸುತ್ತ ಮುತ್ತ ಸಾಧಾರಣ ಮಳೆ ಸುರಿದಿದೆ.
ದ. ಕ. ಜಿಲ್ಲೆಯ ಕಡಬ, ಬಂಟ್ವಾಳ, ಸುಳ್ಯ ತಾ|ನ ವಿವಿಧೆಡೆ ಉತ್ತಮ ಮಳೆಯಾಗಿದೆ.
ಸಿಡಿಲು ಬಡಿದು ಮಹಿಳೆ ಸಾವು
ಕಾಸರಗೋಡು: ಸಿಡಿಲು ಬಡಿದು ಸಿಪಿಎಂ ವಲಿಯಪರಂಬ ಸೌತ್ ವಿಲೇಜ್ ಸಮಿತಿ ಸದಸ್ಯೆ ಮಾಡಕ್ಕಲ್‌ನ ತೆಟ್ಟನ್ ಕಲ್ಯಾಣಿ (69) ಸಾವಿಗೀಡಾದರು. ರವಿವಾರ ಸಂಜೆ ಮನೆ ಸಮೀಪ ತೆಂಗಿನ ಕಾಯಿ ಹೆಕ್ಕುತ್ತಿದ್ದಾಗ ಸಿಡಿಲು ಬಡಿದು ಸಾವು ಸಂಭವಿಸಿತ್ತು.
ಹೊಸಮಠ: ರಸ್ತೆಗೆ ಉರುಳಿದ ಮರ
ತೆಕ್ಕಟ್ಟೆ: ಕೆದೂರು ಗ್ರಾ.ಪಂ. ವ್ಯಾಪ್ತಿಯ ಹೊಸಮಠ ಪರಿಶಿಷ್ಟ ಕಾಲನಿಯ ಸಮೀಪ ಸೋಮವಾರ ಸಂಜೆ ಭಾರೀ ಗಾಳಿಯಿಂದ ಬೃಹತ್ ಮರವೊಂದು ತೆಕ್ಕಟ್ಟೆ – ದಬ್ಬೆಕಟ್ಟೆ ಪ್ರಮುಖ ಸಂಪರ್ಕ ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ತತ್‌ಕ್ಷಣ ಸ್ಥಳೀಯ ಯುವ ಮುಖಂಡ ನಿಶ್ಚಿತ್ ಶೆಟ್ಟಿ ಹೊಸಮಠ ಅವರು ಸಂಬಂಧಪಟ್ಟ ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.
ಅಜೆಕಾರು/ ಪುಂಜಾಲಕಟ್ಟೆ: ಕಾರ್ಕಳದ ಈದು ಮತ್ತು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.
ಸೋಮವಾರ ಸಂಜೆ ಸಿಡಿಲು ಬಡಿದು ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಲ್‌ಬೆಟ್ಟು ಗ್ರಾಮದ ಜಾಣ ಮನೆ ನಿವಾಸಿ ಜಿಗೀಶ್ ಜೈನ್ (38) ಮೃತ ಪಟ್ಟಿದ್ದಾರೆ. ಈ ಸಂದರ್ಭ ಮನೆಯಲ್ಲಿದ್ದ ವಯೋವೃದ್ಧ ತಂದೆ- ತಾಯಿ ಅಪಾಯದಿಂದ ಪಾರಾ ಗಿದ್ದಾರೆ.
ಶೀಟ್‌ಗೆ ಬಡಿದ ಸಿಡಿಲು
ಜಿಗೀಶ್ ಸೋಮವಾರ ಸಂಜೆ 3.45ರ ವೇಳೆ ಮಳೆ ಆರಂಭಗೊಂಡಾಗ ಮನೆಯ ಮೆಟ್ಟಿಲಿಗೆ ನೀರು ಬೀಳದಂತೆ ಹಾಕಿದ್ದ ಕಬ್ಬಿಣದ ಶೀಟ್ ಅನ್ನು ಸರಿಪಡಿಸುತ್ತಿದ್ದಾಗ ಸಿಡಿಲು ಬಡಿದಿತ್ತು. ಅವರ ಒಂದು ಕೈ ಕರಟಿ ಹೋಗಿತ್ತು. ಸಿಡಿಲು ಬಡಿದಾಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಪ್ರಗತಿಪರ ಕೃಷಿಕ
ಜಿಗೀಶ್ ಅವರು ಅವಿವಾಹಿತ ರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಕಂಬಳದ ಕೋಣಗಳನ್ನೂ ಸಾಕು ತ್ತಿದ್ದರು.
ಅಧಿಕಾರಿಗಳ ಭೇಟಿ
ಘಟನೆ ನಡೆದ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಕಂದಾಯ ಅಧಿಕಾರಿ ಶಿವಪ್ರಸಾದ್, ವಿ.ಎ. ಬಾಲಕೃಷ್ಣ, ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ಉಪಾಧ್ಯಕ್ಷ ವಿಜಯ್ ಕುಮಾರ್ ಭೇಟಿ ನೀಡಿದ್ದಾರೆ. ಶೀಘ್ರ ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಂಡವರಕಲ್ಲು: ಮಲಗಿದ್ದಾಗ
ಸಿಡಿಲು ಬಡಿದು ವ್ಯಕ್ತಿ ಸಾವು
ಪುಂಜಾಲಕಟ್ಟೆ: ಸಿಡಿಲು ಬಡಿದು ಯುವಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ವಿದ್ಯಾನಗರ ಕುತ್ತಾಡಿಯಲ್ಲಿ ನಡೆದಿದೆ.
ಕೃಷ್ಣಪ್ಪ ಪೂಜಾರಿ ಅವರ ಪುತ್ರ ಲೋಕೇಶ್ (35) ಮೃತ ಯುವಕ. ಲೋಕೇಶ್ ಕೂಲಿ ಕಾರ್ಮಿಕರಾಗಿದ್ದು, ಸೋಮವಾರ ರಜೆ ಮಾಡಿ ಮನೆಯಲ್ಲಿದ್ದರು. ಅಪರಾಹ್ನ 3 ಗಂಟೆಗೆ ಮಲಗಿದ್ದ ವೇಳೆ ಸಿಡಿಲಿನ ಆಘಾತದಿಂದ ಮೃತಪಟ್ಟಿರುವುದಾಗಿ ಅವರ ಪತ್ನಿ ಹೇಮಲತಾ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಅಂಡಾರು: ಗಾಳಿ ಮಳೆಗೆ ಹಾನಿ
ಅಜೆಕಾರು: ಅಂಡಾರು ಮತ್ತು ಸುತ್ತಮುತ್ತಲ ಪರಿಸರದಲ್ಲಿ ಸೋಮವಾರ ಸಂಜೆ ಗಾಳಿ ಮಳೆಗೆ ಹಲವರ ಅಡಿಕೆ ತೋಟ ಮತ್ತು ಮನೆ ಮೇಲ್ಛಾವಣಿಗಳಿಗೆ ಹಾನಿಯಾಗಿದೆ. ಅಂಡಾರು ಪೈತಾಳ ನಿವಾಸಿ ಸಂತೋಷ್ ಅವರ ಹಲವು ಅಡಿಕೆ ಮರಗಳು ನೆಲಕ್ಕುರುಳಿವೆ. ಕೊಟ್ಟಿಗೆ ಮೇಲ್ಛಾವಣಿಯ ತಗಡಿನ ಶೀಟುಗಳು ಗಾಳಿಗೆ ಹಾರಿ ಹೋಗಿವೆ.
ಗಂಟುಬೀಳು: ಬಿರುಗಾಳಿ, ಹಾನಿ
ಸಿದ್ದಾಪುರ: ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಕೊಂಜಾಡಿ ಗಂಟು ಬೀಳು ಪರಿಸರದಲ್ಲಿ ಸೋಮವಾರ ಸಂಜೆ ವೇಳೆ ಗಾಳಿಗೆ ಅಪಾರ ಹಾನಿ ಸಂಭವಿಸಿದೆ. ಬೆಳ್ಳಿ ಬಾೖ ಅವರ ಮನೆಯ ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಅಡಿಕೆ, ಬಾಳೆಗಿಡಗಳಿಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.