ಒಂದು ಬಾರಿಯೂ ಆಯೋಜನೆಗೊಳ್ಳದ ಜಿಲ್ಲೆಗಳಲ್ಲಿ ವೈನ್ ಮೇಳ
Team Udayavani, Jan 20, 2020, 3:07 AM IST
ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ವೈನ್ ವಹಿವಾಟು ಹಾಗೂ ದ್ರಾಕ್ಷಿ ಬೆಳೆಯುವ ಪ್ರದೇಶವು ಹೆಚ್ಚಳವಾಗುತ್ತಿದೆ. ಇದೇ ಸಂದರ್ಭದಲ್ಲಿ ದ್ರಾಕ್ಷಾರಸ ಮಂಡಳಿಯು ವೈನ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ವೈನ್ ವಹಿವಾಟು ಹೆಚ್ಚಿಸಲು ಈ ಬಾರಿ ಒಮ್ಮೆಯೂ ವೈನ್ ಮೇಳ ನಡೆಯದ ಜಿಲ್ಲಾ ಕೇಂದ್ರಗಳಲ್ಲಿ “ಅಂತಾರಾಷ್ಟ್ರೀಯ ವೈನ್ ಮೇಳ’ ಹಮ್ಮಿಕೊಳ್ಳುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ವೈನ್ ವಹಿವಾಟು 9 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯ ಮಿತ ಮಾಹಿತಿ ಪ್ರಕಾರ 2018 ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 201 ಕೋಟಿ ರೂ ವಹಿ ವಾಟು ನಡೆದಿತ್ತು. ಈ ಬಾರಿ 2019 ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 210 ಕೋಟಿ ರೂ. ಷ್ಟು ವಹಿವಾಟಾಗಿದ್ದು, 5.42 ಲಕ್ಷ ಬಾಕ್ಸ್ ವೈನ್ ಮಾರಾಟವಾಗಿದೆ. ವಿವಿಧ ವೈನ್‌ಗಳ ಪೈಕಿ ಫ್ರೂಟ್ ವೈನ್‌ನ ಬೇಡಿಕೆ ಹೆಚ್ಚಿದೆ. ಆರ್ಥಿಕ ವರ್ಷಾಂತ್ಯಕ್ಕೆ 270 ಕೋಟಿ ರೂ.ತಲುಪುವ ನಿರೀಕ್ಷೆಯನ್ನು ದ್ರಾಕ್ಷಾರಸ ಮಂಡಳಿ ಹೊಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ವೈನ್ ವಹಿ ವಾಟು 9 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ರಾಜ್ಯ ಪಾನೀಯ ನಿಗಮ ನಿಯಮಿತ ಮಾಹಿತಿ ಪ್ರಕಾರ 2018 ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 201 ಕೋಟಿ ರೂ., ವಹಿವಾಟು ನಡೆದಿತ್ತು. ಈ ಬಾರಿ 2019 ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 210 ಕೋಟಿ ರೂ. ವಹಿವಾಟಾಗಿದ್ದು, 5.42 ಲಕ್ಷ ಬಾಕ್ಸ್ ವೈನ್ ಮಾರಾಟವಾಗಿದೆ. ವಿವಿಧ ವೈನ್‌ಗಳ ಪೈಕಿ ಫ್ರೂಟ್ ವೈನ್ ಬೇಡಿಕೆ ಹೆಚ್ಚಿದೆ. ಆರ್ಥಿಕ ವರ್ಷಾಂತ್ಯಕ್ಕೆ 270 ಕೋಟಿ ರೂ. ತಲುಪುವ ನಿರೀಕ್ಷೆಯನ್ನು ದ್ರಾಕ್ಷಾ ರಸ ಮಂಡಳಿ ಹೊಂದಿದೆ.
ವೈನ್ ದ್ರಾಕ್ಷಿ ಬೆಳೆ ಪ್ರದೇಶ ಹೆಚ್ಚಳ: ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ವೈನ್ ದ್ರಾಕ್ಷಿ ಬೆಳೆಯುವ ಭೂಮಿ 1,352 ಹೆಕ್ಟೇರ್‌ನಿಂದ 1500 ಹೆಕ್ಟೇರ್‌ಗೆ ಹೆಚ್ಚಳ ವಾಗಿದೆ. ಪ್ರಮುಖವಾಗಿ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೆಂಗಳೂರು ಗ್ರಾಮಾಂತರ ಪ್ರದೇಶದ ರೈತರು ವೈನ್ ದ್ರಾಕ್ಷಿ ಬೆಳೆಯಲು ಆಸಕ್ತಿ ತೋರಿದ್ದಾರೆ. ವಾರ್ಷಿಕ 7 ಸಾವಿರ ಟನ್ ವೈನ್ ದ್ರಾಕ್ಷಿ ಹಾಗೂ 6.500 ಟನ್ ವೈನ್ ತಯಾರಿ ವೇಳೆ ಮಿಶ್ರಣ ಮಾಡುವ ನೀಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಬಾರಿ ಉತ್ಪಾದ ನೆಯೂ 500 ಟನ್ ಹೆಚ್ಚಳವಾಗಲಿದೆ ಎಂದು ದ್ರಾಕ್ಷಾರಸ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಭಾಗದಲ್ಲಿ ವೈನ್ ಮೇಳ: ವೈನ್ ಆರೋಗ್ಯಕ್ಕೂ ಹಿತಕರ. ಹೀಗಾಗಿ, ರಾಜ್ಯ ದ್ರಾಕ್ಷಾರಸ ಮಂಡಳಿ ದ್ರಾಕ್ಷಿ ಬೆಳೆಯುವ ರೈತರು, ರಾಜ್ಯದ 17 ವೈನ್ ಕಾರ್ಖಾನೆ ಹಾಗೂ ಮಾರಾಟಗಾರರಿಗೆ ವೇದಿಕೆ ಕಲ್ಪಿಸುವ ಜತೆಗೆ ವೈನ್ ಪ್ರಿಯರಿಗೆ ಸ್ಥಳೀಯ ಹಾಗೂ ವಿದೇಶಿ ಬ್ರಾಂಡ್ ವೈನ್ ರುಚಿ ಪರಿಚಯಿಸಲು 6-7 ವರ್ಷದಿಂದ ರಾಜ್ಯದ ವಿವಿಧೆಡೆ ವೈನ್ ಮೇಳ ಆಯೋಜಿಸುತ್ತಿದೆ. ಒಟ್ಟು 15 ಮೇಳಗಳನ್ನು ನಡೆಸಲಾಗಿದೆ.
ಈ ವಹಿವಾಟನ್ನು 300 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದು, ಅದರ ಭಾಗವಾಗಿ ಈ ಬಾರಿ ಹೊಸ ಭಾಗಗಳಲ್ಲಿ ವೈನ್ ಮೇಳ ನಡೆಸಿ ಅಲ್ಲಿನ ಜನರಿಗೆ ತರಹೇವಾರಿ ವೈನ್‌ಗಳ ರುಚಿ ತೋರಿಸಲು ಮಂಡಳಿ ತೀರ್ಮಾನಿಸಿದೆ. ಹೀಗಾಗಿ, ಒಮ್ಮೆಯೂ ಮೇಳ ನಡೆಯದ ದಾವಣ ಗೆರೆ, ಕಲಬುರಗಿ, ತುಮಕೂರು, ಧಾರವಾಡದಲ್ಲಿ 3 ದಿನಗಳ ಅಂತಾರಾಷ್ಟ್ರೀಯ ಮೇಳ ಹಮ್ಮಿಕೊಳ್ಳಲಿದೆ. ಮೇಳಗಳ ಆಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿಯಿಂದ ಡಿಸೆಂಬರ್ ಒಳಗೆ 4 ಕಡೆ ಮೇಳ ನಡೆಯಲಿದೆ. ಈ ವರ್ಷದ ಮೊದಲ ಮೇಳ ಫೆಬ್ರವರಿ 3ನೇ ವಾರದಲ್ಲಿ ದಾವಣಗೆರೆಯುಲ್ಲಿ ಆರಂಭವಾಗಲಿದೆ.
ಮೇಳದಲ್ಲಿ ಏನೇನಿರುತ್ತೆ?: ಮೇಳದಲ್ಲಿ ರಾಜ್ಯದ 17 ವೈನರಿಗಳು, ಅಮೇರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ವಿವಿಧ ದೇಶಗಳ 12 ಕಂಪನಿಗಳು ತಮ್ಮ ಉತ್ಪನ್ನಗಳೊಂದಿಗೆ ಭಾಗವಹಿಸಲಿವೆ. ನಿತ್ಯ ಬೆಳಗ್ಗೆ 11 ಗಂಟೆ ಯಿಂದ ರಾತ್ರಿ 9 ಗಂಟೆವರೆಗೆ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ವಿದೆ. ದಿನದ ಪ್ರವೇಶ ಶುಲ್ಕ 20 ರೂ. ನಿಗದಿ ಪಡಿಸಲಾಗಿದೆ. ಸಾಮೂಹಿಕವಾಗಿ ದ್ರಾಕ್ಷಿ ತುಳಿಯುವ ಆಟ(ವೈನ್ ಸ್ಟಾಂಪಿಂಗ್), ನಿರಂತರ ಸಾಂಸ್ಕೃ ತಿಕ ಕಾರ್ಯಕ್ರಮಗಳು, ಕುರು ಕಲು ತಿಂಡಿ, ಆಹಾರ ಮಳಿಗೆ ಗಳೂ ಇರಲಿದ್ದು, ವಿವಿಧ ಕಂಪನಿಗಳಿಂದ ತಮ್ಮ ಬ್ರಾಂಡ್ ನ ರುಚಿ ನೋಡಲು ಕೊಡುವ ಉಚಿತ ವೈನ್ ಮೇಳದ ಮಜಾ ವನ್ನು ಹೆಚ್ಚಿಸಲಿವೆ. ಜತೆಗೆ ಮನೆಯ ಲ್ಲಿಯೇ ವೈನ್ ಹೇಗೆ ತಯಾರಿಸಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಲಿದೆ.
ವೈನ್ ವಹಿವಾಟು ಹಾಗೂ ವೈನ್ ದ್ರಾಕ್ಷಿ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ವೈನ್ ಜಾಗೃತಿ ಜತೆಗೆ ವಹಿವಾಟು ಹೆಚ್ಚಿಸಲು ಈ ಬಾರಿ ಹೊಸ ಪ್ರದೇಶಗಳಲ್ಲಿ ಮೇಳ ಆಯೋಜಿಸಲಾಗುತ್ತಿದೆ. ಮೇಳದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದಿನಾಂಕ ಸದ್ಯದಲ್ಲಿಯೇ ನಿಗದಿ ಮಾಡಲಾಗುತ್ತದೆ.
-ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ದ್ರಾಕ್ಷಾರಸ ಮಂಡಳಿ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.