ಉಪಸಮರದಲ್ಲಿ ಗೆದ್ದ- ಸೋತವರಿಂದ ಸಚಿವಗಿರಿಗೆ ಒತ್ತಡ
Team Udayavani, Feb 3, 2020, 3:07 AM IST
ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಉಪಚುನಾವಣೆ ಯಲಿ ಸೋತ- ಗೆದ್ದವರಿಂದ ಸಚಿವಗಿರಿಗಾಗಿ ಒತ್ತಡ ತೀವ್ರವಾಗಿದೆ. ಸಚಿವ ಸ್ಥಾನ ನೀಡದಿದ್ದರೆ ಕ್ಷೇತ್ರದ ಜನರಿಗೆ ಮುಖ ತೋರಿಸುವುದು ಹೇಗೆ ಎಂಬುದಾಗಿ ಶಾಸಕ ಮಹೇಶ್ ಕುಮಟಳ್ಳಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಬಳಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಶಾಸಕ ಶ್ರೀಮಂತ ಪಾಟೀಲ್ ಎಲ್ಲ 11 ಶಾಸಕರು ಹಾಗೂ ಸೋತವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಎಂ.ಟಿ.ಬಿ.ನಾಗರಾಜ್ ತಮಗೆ ಸಚಿವ ಸ್ಥಾನ ನೀಡಿ ಇಲ್ಲವೇ ತಮ್ಮ ಸೋಲಿಗೆ ಕಾರಣರಾದ ಅಪ್ಪ- ಮಗನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಡ ಹೇರಲಾರಂಭಿಸಿದ್ದಾರೆ. ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಮಹೇಶ್ ಕುಮಟಳ್ಳಿ, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
ಉಪಚುನಾವಣೆ ನಡೆದು ಎರಡು ತಿಂಗಳಾಗು ತ್ತಿದ್ದು, ನಾವು ತಾಳ್ಮೆಯಿಂದ ಇದ್ದೇವೆ. ಇತ್ತೀಚಿನ ಬೆಳವ ಣಿಗೆಗಳು ಬೇಸರ ಮೂಡಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ರಮೇಶ್ ಜಾರಕಿಹೊಳಿ ಮೇಲೆ ನಂಬಿಕೆ ಇದೆ ಎಂದು ಹೇಳಿದರು. ಹುಲಿ ಬಾಯಿಗೆ ತಲೆ ಕೊಟ್ಟಂತೆ ರಾಜೀನಾಮೆ ಕೊಟ್ಟು ಬಂದೆ. ಟಿಕೆಟ್ ನೀಡುವಾಗಲೂ ಸ್ವಲ್ಪ ಗೊಂದಲವಾಗಿತ್ತು. ಆದರೆ ನಾನು ಗೆದ್ದು ರಾಜಕೀಯ ಮರುಹುಟ್ಟು ಪಡೆದೆ.
ನನ್ನನ್ನು ಸಚಿವರನ್ನಾಗಿ ಮಾಡುವುದಾಗಿ ಯಡಿಯೂರಪ್ಪ ಜನರ ಮುಂದೆ ಹೇಳಿದ್ದರು. ಆದರೆ ಈಗ ಯಾವ ಕಾರಣಕ್ಕೆ ಚರ್ಚೆಯಾಗುತ್ತಿದೆಯೋ ಗೊತ್ತಿಲ್ಲ. ಎಲ್ಲವನ್ನು ನಿಭಾಯಿಸಿಕೊಂಡು, ಕಷ್ಟ ಅನುಭವಿಸಿ ಕೊಂಡು ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದೇವೆ. “ಪಕ್ಷಕ್ಕೆ ಬಂದರೆ ಸಚಿವರನ್ನಾಗಿ ಮಾಡಲಾಗುವುದು’ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಸುಮ್ಮನೆ ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಈಗಲೂ ತ್ಯಾಗ ಮಾಡು ಅಂದರೆ ಮಾಡು ತ್ತೇನೆ. ಆದರೆ ವಿಶ್ವನಾಥ್ ಅವರನ್ನು ಸಚಿವರನ್ನಾಗಿ ಮಾಡಬೇಕು. ಮುಖ್ಯಮಂತ್ರಿಗಳನ್ನು ಸದ್ಯದಲ್ಲೇ ಭೇಟಿಯಾಗಿ ಮಾತನಾ ಡುತ್ತೇನೆ. ಒಂದೊಮ್ಮೆ ಮಂತ್ರಿ ಸ್ಥಾನ ಕೊಡದಿದ್ದರೂ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆಯಲು ಸಿದ್ಧ, ಪಕ್ಷ ಕಟ್ಟಲೂ ಸಿದ್ಧ ಎಂದು ಹೇಳಿದ್ದಾರೆ.
ಬರಬೇಡಿ ಎಂದು ಹೇಳಬೇಕಿತ್ತು: ಅವರಿಗೆ ಕಷ್ಟವಾ ಗಿದ್ದರೆ ಅಂದೇ ಪಕ್ಷಕ್ಕೆ ಬರಬೇಡಿ ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ಹೀಗೆ ಚರ್ಚಿಸುವುದು ಸರಿಯಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದೇ ಹೋದರೆ ಜನ ನೋಡುತ್ತಾರೆ. ಜನರಿಗೂ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಸೋತ ಲಕ್ಷ್ಮ ಣ ಸವದಿಯವರನ್ನು ಉಪಮುಖ್ಯ ಮಂತ್ರಿ ಮಾಡಲಾಗಿದೆ. ಹಾಗೆಯೇ ವಿಶ್ವನಾಥ್ ಅವ ರನ್ನು ಸಚಿವರನ್ನಾಗಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಕುಮಟಳ್ಳಿ ಕಣ್ಣೀರು: ಪಕ್ಷ ಬಿಟ್ಟು ಪಕ್ಷಕ್ಕೆ ಬಂದು ಗೆದ್ದರೂ ಏನು ಪ್ರಯೋಜನ. ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದಾರೆ. ಆದರೂ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂದಿದ್ದಾರೆ. ಬಿಜೆಪಿ ಸರ್ಕಾರ ಬರಲು ಯಾರ ಪಾಲು ಎಷ್ಟಿದೆಯೋ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಮೊದಲಿದ್ದರೆ, ಅವರ ಹಿಂದೆ ಎರಡನೆಯವನಾಗಿ ನಾನಿದ್ದೆ. ಇದೀಗ ನಾನೇ ಸಂಪುಟದಲ್ಲಿ ಇಲ್ಲ ಅಂದರೆ ಹೇಗೆ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಬಳಿ ಮಹೇಶ್ ಕುಮಟಳ್ಳಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಸಚಿವನಾಗದಿದ್ದರೆ ಕ್ಷೇತ್ರದ ಜನತೆಗೆ ಮುಖ ತೋರಿಸುವುದು ಹೇಗೆ. ಸಚಿವನನ್ನಾಗಿ ಮಾಡದಿದ್ದರೆ ಈ ಹಿಂದೆ ಮಾತು ಕೊಟ್ಟಿದ್ದೇಕೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೇ ಧಾಟಿಯಲ್ಲಿ ಮಾತನಾಡಿರುವ ಶಾಸಕ ಶ್ರೀಮಂತ ಪಾಟೀಲ್, ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು.
11 ಶಾಸಕರನ್ನು ಮಂತ್ರಿ ಮಾಡುವ ವಿಶ್ವಾಸವಿದೆ. ಸಚಿವ ಸ್ಥಾನ ನೀಡದಿದ್ದರೆ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ. ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೈತಪ್ಪುವ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಎಂ.ಟಿ.ಬಿ. ನಾಗರಾಜ್, ಎಚ್.ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಎಂ.ಟಿ.ಬಿ.ನಾಗರಾಜ್ ಬಳಿಕ ಪ್ರತಿಕ್ರಿಯಿಸಿ, ಸಂಪುಟಕ್ಕೆ ಸೇರ್ಪಡೆಯಾಗದಿರು ವುದಕ್ಕೆ ಯಾವುದೇ ಬೇಸರ, ಅಸಮಾಧಾನವಿಲ್ಲ ಎಂದು ಹೇಳಿದರು. ಪಕ್ಷಕ್ಕೆ ಬಂದ ಎಲ್ಲರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾಗಿ ಆರ್.ಶಂಕರ್ ಅವರನ್ನು ಮಂತ್ರಿ ಮಾಡುತ್ತಾರೆ. ಈ ಸಂಬಂಧ ನಾನು ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳ ಮಾತಿನ ಮೇಲೆ ನಂಬಿಕೆ ಇದೆ. ನನ್ನ ಪರವಾಗಿ ಮಾತನಾಡಿರುವ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು 17 ಮಂದಿ ಒಗ್ಗಟ್ಟಾಗಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.