ವಯರ್‌ಲೆಸ್ ಕಾರ್ ಚಾರ್ಜಿಂಗ್
Team Udayavani, May 18, 2020, 4:09 AM IST
ನಮ್ಮ ಮನೆಗಳಲ್ಲಿರುವ ಯಾವುದೇ ಉಪಕರಣ ಗಳನ್ನು ನೋಡಿ. ಅವುಗಳಲ್ಲಿ ಕಂಡುಬರುವ ಸಾಮಾನ್ಯ ಬಿಡಿಭಾಗ ವಯರು. ಗೋಜಲು ಗೋಜಲಾಗಿರುವ ವಯರನ್ನು ಕಂಡರೆ, ನಮ್ಮೆಲ್ಲರಿಗೂ ಅಷ್ಟಕ್ಕಷ್ಟೆ. ಈ ವಯರನ್ನು ಅವಾಯ್ಡ್ ಮಾಡಲು ಇರುವ ನಾವು ಏನೆಲ್ಲಾ ಪ್ರಯತ್ನ ಮಾಡುತ್ತೇವೆ. ಮನುಷ್ಯನ ಈ ಅಗತ್ಯವನ್ನು ಪೂರೈಸಲೆಂದೇ ವಯರ್‌ಲೆಸ್ ಉಪಕರಣಗಳ ಆವಿಷ್ಕಾರವಾಗಿದೆ. ಈಗಿರುವ ಮಿತಿಯಲ್ಲಿ ನಮ್ಮ ವಯರ್‌ಲೆಸ್ ತಂತ್ರಜ್ಞಾನ ತುಂಬಾ ಸೀಮಿತ, ಎಂದೇ ಹೇಳಬಹುದು, ಬ್ಲೂಟೂತ್ ಮೂಲಕ ಡಾಟಾ ಟ್ರಾನ್ಸ್‌ಫರ್, ವಯರ್‌ಲೆಸ್ ಸ್ಪೀಕರ್, ಹೆಡ್‌ಫೋನ್- ಇವಿಷ್ಟೇ ನಮ್ಮ ದೈನಂದಿನ ಬಳಕೆಯಲ್ಲಿರುವುದು.
ಇತ್ತೀಚಿಗೆ ಸ್ಮಾರ್ಟ್‌ಫೋನನ್ನು ವಯರ್ ಲೆಸ್ ಚಾರ್ಜಿಂಗ್ ಮಾಡುವ ತಂತ್ರಜ್ಞಾನ ಜನಪ್ರಿಯಗೊಂಡಿತ್ತು. ಈ ಸೌಲಭ್ಯವನ್ನು ಹೈ ಎಂಡ್ ಫೋನ್‌ಗಳಲ್ಲಿ ಮಾತ್ರವೇ ನೀಡಲಾಗಿತ್ತು. ಹೀಗಿರುವಾಗ, ಈ ಕ್ಷೇತ್ರದಲ್ಲಿ ಹೊಸದೊಂದು ತಂತ್ರಜ್ಞಾನ ನಿಜವಾಗುವ ಸಮಯ ಸನ್ನಿಹಿತವಾಗಿದೆ. ಎಲೆಕ್ಟ್ರಿಕ್ ಕಾರುಗಳನ್ನು, ವಯರ್‌ಲೆಸ್ ಆಗಿ ಚಾರ್ಜ್ ಮಾಡುವ ತಂತ್ರಜ್ಞಾನವದು. ವೈಟ್ರಿಸಿಟಿ ಎನ್ನುವ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಈ ತಂತ್ರಜ್ಞಾನ, ವಯಾಗ್ನೆಟಿಕ್ ರೆಸೊನೆನ್ಸ್ ತತ್ವವನ್ನು ಆಧರಿಸಿದೆ.
ಬದಲಾವಣೆಗಳಿಗೆ ಹಾದಿ ಸುಗಮ: ಎಲೆಕ್ಟ್ರಿಕ್ ವಾಹನಗಳ ಭವಿಷ್ಯ ಉಜ್ವಲವಾಗಿ ಗೋಚರಿಸುತ್ತಿರುವ ಈ ದಿನಗಳಲ್ಲಿ, ಈ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿರುವುದು ಒಳ್ಳೆಯ ಸುದ್ದಿ. ಮಾರಾಟವಿಲ್ಲದ ಕಾರಣಕ್ಕೆ ಆಟೊಮೊಬೈಲ್ ಸಂಸ್ಥೆಗಳು ನಷ್ಟದಲ್ಲಿರುವ ಈ ಸಂದರ್ಭದಲ್ಲಿ, ವಯರ್‌ಲೆಸ್ ತಂತ್ರಜ್ಞಾನಗಳಂಥ ಸವಲತ್ತುಗಳಿಂದ, ಆಟೋ ಮಾರುಕಟ್ಟೆಗೆ ಚೈತನ್ಯ ದೊರೆಯಲಿದೆ ಎನ್ನಬಹುದು. “ವೈಟ್ರಿಸಿಟಿ’ ಚೀನಾ ಮೂಲದ ಸಂಸ್ಥೆ. ಅದು ತನ್ನ ಆವಿಷ್ಕಾರವನ್ನು ಇತ್ತೀಚಿಗಷ್ಟೆ ಕಾರಿಗೆ ಅಳವಡಿಸಿ ಜಗತ್ತಿನ ಮುಂದೆ ಪ್ರಸ್ತುತ ಪಡಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಇನ್ನೂ ಚಾರ್ಜಿಂಗ್ ಪಾಯಿಂಟುಗಳೇ ನಿರ್ಮಾಣವಾಗಿಲ್ಲ. ಹೀಗಿರುವಾಗ, ಅದಕ್ಕೂ ಮೊದಲೇ, ಅದಕ್ಕಿಂತ ಅಡ್ವಾನ್ಸ್ಡ್ ಆಗಿರುವ ವಯರ್‌ಲೆಸ್ ತಂತ್ರಜ್ಞಾನ ದಾಪುಗಾಲಿಕ್ಕಿದರೆ, ಅಚ್ಚರಿ ಪಡಬೇಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.