ರಾಜಸ್ಥಾನ: ರಾಜಕಾರಣಿಗಳಿಂದ ಗ್ಯಾಂಗ್ ರೇಪ್ ;ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪ !
Team Udayavani, Jan 31, 2022, 1:59 PM IST
ಜೈಪುರ: ರಾಜಸ್ಥಾನದ ಭಿಲ್ವಾಡ ಜಿಲ್ಲೆಯಲ್ಲಿ ಮಹಿಳಾ ಪೋಲೀಸ್ ಒಬ್ಬರು ರಾಜಕೀಯ ಮುಖಂಡ ಮತ್ತು ಇತರರ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದಾರೆ.
ಭಿಲ್ವಾರಾ ಜಿಲ್ಲೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ರಾಜಕೀಯ ನಾಯಕ ಮತ್ತು ಇತರರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಆಕೆಯ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮಹಿಳಾ ಎಸ್‌ಐ ಶನಿವಾರ ತನ್ನ ದೂರನ್ನು ದಾಖಲಿಸಿದ ನಂತರ ಪ್ರಮುಖ ಆರೋಪಿ ಭನ್ವರ್ ಸಿಂಗ್ ಪಲರಾ ಮತ್ತು ಆತನ ಸಿಬ್ಬಂದಿ ಸೇರಿದಂತೆ ಇತರ ಕೆಲವು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ 376-ಡಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಭಿಲ್ವಾರಾ ಎಸ್‌ಪಿ ಆದರ್ಶ್ ಸಿಧು ತಿಳಿಸಿದ್ದು, ಪ್ರಕರಣದ ತನಿಖೆಯನ್ನು ಹೆಚ್ಚುವರಿ ಎಸ್ಪಿ ಶಹಾಪುರ ಅವರಿಗೆ ವಹಿಸಲಾಗಿದೆ ಎಂದಿದ್ದಾರೆ.
ಭಿಲ್ವಾರಾದಲ್ಲಿ ಹೆಚ್ಚುವರಿ ಎಸ್‌ಪಿಯಾಗಿ ನೇಮಕಗೊಂಡ ರಾಜಸ್ಥಾನ ಪೊಲೀಸ್ ಸೇವಾ ಅಧಿಕಾರಿಯನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಅಂದಿನ ಹೆಚ್ಚುವರಿ ಎಸ್ಪಿ ಕೇಳಿದ ಮೇರೆಗೆ, ತನ್ನ ವರ್ಗಾವಣೆಗಾಗಿ 2018 ರಲ್ಲಿ ಪಲರಾ ಅವರನ್ನು ಭೇಟಿಯಾಗಿದ್ದೆ ಎಂದು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪಿಸಿದ್ದಾರೆ. ಬಳಿಕ, ಪಾಲರ ಪೊಲೀಸ್ ಲೈನ್‌ನಲ್ಲಿರುವ ತನ್ನ ಅಧಿಕೃತ ನಿವಾಸದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
2018 ಮತ್ತು 2021 ರ ನಡುವೆ ಪಲರಾ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಭನ್ವರ್ ಸಿಂಗ್ ಪಲರಾನ ಪತ್ನಿ ಸುಶೀಲ್ ಕನ್ವರ್ ಪಲಾರ, ಮಾಜಿ ಬಿಜೆಪಿ ಶಾಸಕಿಯಾಗಿದ್ದರು, ಡಿಸೆಂಬರ್ 2020 ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಅಜ್ಮೀರ್ ಜಿಲಾ ಪ್ರಮುಖ್ ಆದರು, ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.