ರಕ್ಷಣಾ ಪಡೆಗಳಲ್ಲಿ ಸದ್ಯದಲ್ಲೇ “ಮಹಿಳಾ ಪರ್ವ’
ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ
Team Udayavani, Sep 8, 2021, 7:45 PM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಭಾರತೀಯ ರಕ್ಷಣಾ ಪಡೆಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವ ಐತಿಹಾಸಿಕ ನಿರ್ಧಾರವನ್ನು ಸೇನಾ ಪಡೆಗಳು ಕೈಗೊಂಡಿವೆ ಎಂದು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಸೂಕ್ತ ತರಬೇತಿ ಹೊಂದಿರುವ ಮಹಿಳೆಯರನ್ನು ರಕ್ಷಣಾ ಪಡೆಗಳಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ನ್ಯಾ.ಎಸ್.ಕೆ. ಕೌಲ್ ನೇತೃತ್ವದ ಪೀಠದ ಮುಂದೆ ವಿವರಣೆ ಸಲ್ಲಿಸಿದ ಅವರು, “ಸದ್ಯಕ್ಕೆ ಮಹಿಳೆಯರನ್ನು ಸೇನೆಯ 10 ಆರ್ಮ್ಸ್ ವಿಭಾಗಕ್ಕೆ ಮಾತ್ರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಆದರೆ, ಅವರನ್ನು ಸೇನೆಯ ಇನ್‌ಫ್ಯಾಂಟ್ರಿ ಅಥವಾ ಆರ್ಮರ್ಡ್-ಮೆಕ್ಯಾನೈಸ್ಡ್ ಪಡೆಗಳಲ್ಲಿ ಹಾಗೂ ಆರ್ಟಿಲರಿ ವಿಭಾಗಗಳಲ್ಲೂ ನೇಮಕ ಮಾಡಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ” ಎಂದು ತಿಳಿಸಿದರು.
ಜೊತೆಗೆ, “ಮಹಿಳೆಯರಿಗೆ ಸೇನೆಯಲ್ಲಿ ಸೇರಿಸಿಕೊಳ್ಳುವ ಕುರಿತ ಹಲವಾರು ನಿಯಮಾವಳಿಗಳನ್ನು ರೂಪಿಸಬೇಕು ಹಾಗೂ ಅದಕ್ಕೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿರುವುದರಿಂದ ರಕ್ಷಣಾ ಪಡೆಗಳ ನೇಮಕಾತಿ ಪ್ರಕ್ರಿಯೆಗಳು ಈ ವರ್ಷವೂ ಎಂದಿನಂತೆ ನಡೆಯಲಿವೆ” ಎಂದೂ ವಿವರಣೆ ನೀಡಿದರು.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1102 ಪಾಸಿಟಿವ್ ಪ್ರಕರಣ ಪತ್ತೆ|1458 ಸೋಂಕಿತರು ಗುಣಮುಖ
ಸಾರ್ಥಕವಾಯ್ತು ಮನವಿ
ಅರ್ಹತೆಯುಳ್ಳ ಮಹಿಳೆಯರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಹಿರಿಯ ವಕೀಲರಾದ ಕುಶ್ ಕಾರ್ಲಾ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವಿವಾಹಿತ ಹಾಗೂ 12ನೇ ತರಗತಿ ಉತ್ತೀರ್ಣರಾಗಿರುವ ಮಹಿಳೆಯರಿಗೆ ಎನ್‌ಡಿಎ ಹಾಗೂ ನೌಕಾಪಡೆಯ ಅಕಾಡೆಮಿ ಪರೀಕ್ಷೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಎನ್‌ಡಿಎನಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸೇನಾ ಪಡೆಗಳ ಆಯಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶವಿದ್ದರೂ ಅವರಿಗೆ ಅವರು ಮಹಿಳೆಯರು ಎಂಬ ಕಾರಣಕ್ಕಾಗಿ ಅವರ ನೇಮಕಾತಿ ನಡೆಸಲಾಗುತ್ತಿಲ್ಲ. ಈ ಮೂಲಕ, ಸಂವಿಧಾನವು ಮಹಿಳೆಯರಿಗೆ ಕೊಟ್ಟಿರುವ ಲಿಂಗ ಸಮಾನತೆಯ ಹಕ್ಕುಗಳಿಂದ ಅವರನ್ನು ವಂಚಿತರನ್ನಾಗಿಸಲಾಗುತ್ತಿದೆ ಎಂದು ವಕೀಲರು ತಮ್ಮ ಮನವಿಯಲ್ಲಿ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.