ಜಾಗೃತಿಗಾಗಿ ರಾತ್ರಿ ವೇಳೆ ಮಹಿಳೆಯರ ಬೈಕ್‌ ಸವಾರಿ

Team Udayavani, May 4, 2022, 10:24 AM IST

4bike

ರಾಯಚೂರು: ಮಹಿಳೆಯರ ಭಯ ಮುಕ್ತ ಕರ್ನಾಟಕ ಅಭಿಯಾನದಡಿ ನಾಲ್ಕು ಮಹಿಳೆಯರು ಬೈಕ್‌ನಲ್ಲೇ ರಾಜ್ಯ ಪ್ರವಾಸ ಕೈಗೊಂಡಿದ್ದು, ಸೋಮವಾರ ರಾತ್ರಿ ಬೈಕ್‌ ಸವಾರರ ತಂಡ ನಗರಕ್ಕೆ ಆಗಮಿಸಿತ್ತು.

ಅಭಿಯಾನ ಹಮ್ಮಿಕೊಂಡಿದ್ದು, ಅಂಬೇಡ್ಕರ್‌ ವೃತ್ತದಿಂದ ಬಸವ ಕೇಂದ್ರದವರೆಗೆ ಬೈಕ್‌ ರೈಡ್‌ ಮೂಲಕ ಜಾಗೃತಿ ಮೂಡಿಸಲಾಯಿತು. ನಾನು ಮಧ್ಯರಾತ್ರಿಯಲ್ಲಿ ಭಯವಿಲ್ಲದೇ ನಡೆಯಬಲ್ಲೆ ಎಂಬ ಘೋಷವಾಕ್ಯದಡಿ ನಾಲ್ವರು ಮಹಿಳೆಯರು ಬೈಕ್‌ಗಳನ್ನು ತೆಗೆದುಕೊಂಡು ರಾಜ್ಯ ಸಂಚಾರ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯಾದ್ಯಂತ ಸುಮಾರು 3,500 ಕಿ.ಮೀ. ದೂರ ಕ್ರಮಿಸುವ ಗುರಿ ಹೊಂದಿದ್ದು, ಜಿಲ್ಲೆಗೂ ತಂಡ ಆಗಮಿಸಿತ್ತು. ಬೈಕ್‌ ಸವಾರ ಮಹಿಳೆಯರನ್ನು ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು.

30 ದಿನಗಳಲ್ಲಿ 30 ಜಿಲ್ಲೆಗಳಿಗೆ ಮೆಗಾ ರೈಡ್‌ ನಡೆಸಲಾಗುತ್ತಿದೆ. ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಲು ರಾಜ ಲಕ್ಷ್ಮೀ, ಕೀರ್ತಿನಿ, ಸ್ವಾತಿ ಆರ್‌ ಮತ್ತು ಅನಿತಾ ಗ್ರಾಮೀಣ ಮಹಿಳೆಯರನ್ನು ಭೇಟಿ ಮಾಡಿ ಮಹಿಳೆಯರ ಸುರಕ್ಷತೆ, ಅವರ ಸಮಸ್ಯೆಗಳು ಮತ್ತು ಆತ್ಮರಕ್ಷಣೆಯ ಪ್ರಾಮುಖ್ಯತೆ ಕುರಿತು ಚರ್ಚಿಸಲಾಗುತ್ತಿದೆ.

ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗುಲ್ಬರ್ಗ, ಬೀದರ, ಯಾದಗಿರಿ ಜಿಲ್ಲೆ ಮುಗಿಸಿಕೊಂಡು ರಾಯಚೂರಿಗೂ ಆಗಮಿಸಿದ್ದರು.

ರೋಟರಿ ಕ್ಲಬ್‌, ರೋಟರಿ ಸೆಂಟ್ರಲ್‌, ರೋಟರಿ ಈಸ್ಟ್‌, ರೋಟರಿ ಕಾಟನ್‌ ಸಿಟಿ, ಹಾಗೂ ಇನ್ನರವೀಲ್‌ ಕ್ಲಬ್‌ ರಾಯಚೂರು ಸಹಯೋಗದಲ್ಲಿ ಕಾರ್ಯಕ್ರಮ ಕೈಗೊಂಡಿದ್ದರು. ಇನ್ನರ್‌ ವ್ಹೀಲ್‌ ಜಿಲ್ಲಾ ಖಜಾಂಚಿ ಸುಷ್ಮಾ ಪತಂಗೆ, ಪಿಡಿಸಿ ಇಂದಿರಾ ಕಲ್ಯಾಣಕರ, ಮಹಾದೇವಿ ಹೊಸಮನಿ, ರೇಖಾ ಕೇಶವರೆಡ್ಡಿ, ಕವಿತಾ, ಶ್ರೀದೇವಿ, ಸೌಮ್ಯ, ರೂಪಾ ಧೋತರಬಂಡಿ, ಕವಿತಾ ಕಾಂಬ್ಳೆ, ಡಾ| ನಾಗವೇಣಿ, ನಗರಸಭೆ ಸದಸ್ಯೆ ರತ್ನ ಪ್ರಶಾಂತಿ, ಮಾಲನಾ, ರಂಗಲಿಂಗನ ಗೌಡ, ವಿಜಯ ಕುಮಾರ್‌ ಸಜ್ಜನ್‌ ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Sindhanur: ಬೈಕ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ

Sindhanur: ಬೈಕ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

1-weqew-e

Raichur; ಒಳ ಮೀಸಲಾತಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.