ವನಿತಾ ಹಾಕಿ: ಭಾರತಕ್ಕೆ 1-2 ಸೋಲು
ಸರಣಿಯನ್ನು ಸಮಬಲಕ್ಕೆ ತಂದ ನ್ಯೂಜಿಲ್ಯಾಂಡ್
Team Udayavani, Jan 27, 2020, 11:57 PM IST
ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಹಾಕಿ ಸರಣಿಯ 2ನೇ ಪಂದ್ಯದಲ್ಲಿ ಭಾರತ 1-2 ಗೋಲುಗಳ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ರಾಣಿ ರಾಮ್‌ಪಾಲ್ ಪಡೆ 4-0 ಅಂತರದಿಂದ ಭರ್ಜರಿಯಾಗಿ ಗೆದ್ದಿತ್ತು. ಆದರೆ ಸೋಮವಾರದ ಪಂದ್ಯದಲ್ಲಿ ಇದೇ ಲಯವನ್ನು ಕಾಯ್ದು ಕೊಳ್ಳುವಲ್ಲಿ ವಿಫಲವಾಯಿತು. 4 ಪಂದ್ಯಗಳ ಸರಣಿ ಈಗ 1-1 ಸಮ ಬಲಕ್ಕೆ ಬಂದಿದೆ.
ನ್ಯೂಜಿಲ್ಯಾಂಡ್ ಆಕ್ರಮಣಕಾರಿ ಯಾಗಿಯೇ ಆಟ ಆರಂಭಿಸಿತು. ಮೊದಲ ಕ್ವಾರ್ಟರ್‌ನ 3ನೇ ನಿಮಿಷ ದಲ್ಲೇ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಯಶಸ್ವಿಯಾಗಿ ಬಳಸಿ ಕೊಂಡ ಮೆಗಾನ್ ಹುಲ್ ಕಿವೀಸ್ ಖಾತೆ ತೆರೆದರು. ಆದರೆ ಇದೇ ಕ್ಟಾರ್ಟರ್‌ನ ಕೊನೆಯ ಕ್ಷಣದಲ್ಲಿ ಭಾರತದ ಸಲೀಮಾ ಟೇಟೆ ತಿರುಗಿ ಬಿದ್ದರು. ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.
ಮುಂದಿನೆರಡು ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ರಕ್ಷಣಾ ವಿಭಾಗದಲ್ಲಿ ಮಾಡಿದ ತಪ್ಪಿಗೆ ಬೆಲೆ ತೆರಬೇಕಾಯಿತು. ಹುಲ್ ಪೆನಾಲ್ಟಿ ಸ್ಟ್ರೋಕ್ ಮೂಲಕ 2ನೇ ಗೋಲು ಬಾರಿಸಿ ಕಿವೀಸ್‌ಗೆ ಮೇಲುಗೈ ಒದಗಿಸಿದರು.
ಕಳಪೆ ಪ್ರದರ್ಶನ: ಕೋಚ್
“ಈ ಸೋಲಿನಿಂದ ಬೇಸರವಾಗಿದೆ. ಇಂದು ನಮ್ಮವರ ಆಟ ಬಹಳ ಕಳಪೆಯಾಗಿತ್ತು. ನ್ಯೂಜಿಲ್ಯಾಂಡ್‌ಗಿಂತ ನಮಗೇ ಹೆಚ್ಚು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದ್ದವು. ಆದರೆ ನಮ್ಮವರು ಇದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಫಾರ್ವರ್ಡ್ ಆಟಗಾರರ ವೈಫಲ್ಯ ಎದ್ದು ಕಂಡಿತು’ ಎಂದು ಕೋಚ್ ಸೋರ್ಡ್ ಮರಿನ್ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಪಂದ್ಯ ಬುಧವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.