ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ  ಸಾಟಿಯಾದೀತೇ ವೆಸ್ಟ್‌ ಇಂಡೀಸ್‌?


Team Udayavani, Feb 15, 2023, 8:15 AM IST

ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ  ಸಾಟಿಯಾದೀತೇ ವೆಸ್ಟ್‌ ಇಂಡೀಸ್‌?

ಕೇಪ್‌ ಟೌನ್‌: ಬದ್ಧ ಎದುರಾಳಿ ಪಾಕಿಸ್ಥಾನವನ್ನು ಮಣಿ ಸಿದ ಅತ್ಯುತ್ಸಾಹದಲ್ಲಿರುವ ಭಾರತ ತಂಡ, ಬುಧವಾರದ ವನಿತಾ ಟಿ20 ವಿಶ್ವಕಪ್‌ ಹಣಾಹಣಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕಣಕ್ಕಿಳಿಯಲಿದೆ.

ಈ ಪಂದ್ಯವನ್ನೂ ಗೆದ್ದು ಮುಂದಿನ ಹಾದಿಯನ್ನು ಸುಗಮಗೊಳಿಸುವುದು ಹರ್ಮನ್‌ಪ್ರೀತ್‌ ಕೌರ್‌ ಬಳಗದ ಯೋಜನೆ.

ಮುಂದೆ ಪ್ರಬಲ ಇಂಗ್ಲೆಂಡ್‌ ತಂಡದ ಸವಾಲು ಎದುರಾಗುವುದರಿಂದ ಕೆರಿಬಿಯನ್‌ ಪಡೆಯ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ಭಾರತದ್ದು.

ಇಂಗ್ಲೆಂಡ್‌ ಈಗಾಗಲೇ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದರಲ್ಲೊಂದು ಗೆಲುವು ವೆಸ್ಟ್‌ ಇಂಡೀಸ್‌ ವಿರುದ್ಧವೇ ಬಂದಿದೆ. ಹೀಗಾಗಿ ವಿಂಡೀಸ್‌ಗೆ ಭಾರತದೆದುರಿನ ಪಂದ್ಯ ನಿರ್ಣಾಯಕ. ಸೋತರೆ ನಾಕೌಟ್‌ ಪ್ರವೇಶದ ಆಸೆಯನ್ನು ಬಿಡಬೇಕಾಗುತ್ತದೆ.

ಮಂಧನಾ ಮರಳುವ ಸಾಧ್ಯತೆ
ಪಾಕಿಸ್ಥಾನದ ವಿರುದ್ಧ ಸ್ಟಾರ್‌ ಓಪನರ್‌, ಉಪನಾಯಕಿ ಸ್ಮತಿ ಮಂಧನಾ ಗೈರಲ್ಲೂ ಭಾರತ ಗೆದ್ದು ಬಂದದ್ದೊಂದು ಹೆಚ್ಚುಗಾರಿಕೆ. ಇದೀಗ ವೆಸ್ಟ್‌ ಇಂಡೀಸ್‌ ವಿರುದ್ಧ ಮಂಧನಾ ಆಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದರಿಂದ ಭಾರತಕ್ಕೆ ಹೆಚ್ಚಿನ ಬಲ ಲಭಿಸಲಿದೆ. ಸೋಮವಾರದ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ 3.4 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟ ವಾದ ಖುಷಿಯನ್ನು ಅವರು ವಿಶ್ವಕಪ್‌ ಪಂದ್ಯಾ ವಳಿಯುದ್ದಕ್ಕೂ ಪಸರಿಸಬೇಕಿದೆ.

ಪಾಕ್‌ ಎದುರಿನ ಪಂದ್ಯವನ್ನು ಪರಿಗ ಣಿಸುವುದಾದರೆ, ಭಾರತ ಬ್ಯಾಟಿಂಗ್‌ ಸುಧಾರಿಸಬೇಕು; ಬೌಲಿಂಗ್‌ ಇನ್ನೂ ಹೆಚ್ಚು ಸುಧಾರಣೆಗೊಳ್ಳಬೇಕು. ಮಂಧನಾ ಬದಲು ಇನ್ನಿಂಗ್ಸ್‌ ಆರಂಭಿ ಸಿದ ಯಾಸ್ತಿಕಾ ಭಾಟಿಯಾ ಮುನ್ನುಗ್ಗಿ ಬಾರಿಸಲು ವಿಫ‌ಲರಾಗಿದ್ದರು (20 ಎಸೆತ, 17 ರನ್‌). ಶಫಾಲಿ ವರ್ಮ ಎಂದಿನ ಹೊಡಿಬಡಿ ಆಟಕ್ಕಿಂತ ತುಸು ಹಿಂದುಳಿದಿದ್ದರು (25 ಎಸೆತ, 33 ರನ್‌). ನಾಯಕಿ ಕೌರ್‌ ಕೂಡ ಬಿರುಸಿನ ಆಟವಾಡಲು ವಿಫ‌ಲರಾಗಿದ್ದರು.
ಜೆಮಿಮಾ ರೋಡ್ರಿಗಸ್‌ “ಮ್ಯಾಚ್‌ ವಿನ್ನರ್‌’ ಎನಿಸಿದ್ದು ಶುಭ ಸೂಚನೆ. ಅವರು ಅಜೇಯ ಅರ್ಧ ಶತಕ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನ ರಾದರು. ಯುವ ಆಟಗಾರ್ತಿ ರಿಚಾ ಘೋಷ್‌ 18ನೇ ಓವರ್‌ನಲ್ಲಿ 3 ಬೌಂಡರಿ ಬಾರಿಸದೇ ಇದ್ದಲ್ಲಿ ಭಾರತಕ್ಕೆ ಗೆಲುವು ಕಷ್ಟವಾಗುತ್ತಿತ್ತು ಎಂಬುದನ್ನು ಮರೆಯಬಾರದು.

ಭಾರತದ ಬೌಲಿಂಗ್‌ ಇನ್ನಷ್ಟು ನಿಯಂತ್ರಣಕ್ಕೆ ಬರಲೇಬೇಕಿದೆ. ಪಾಕ್‌ ವಿರುದ್ಧ ದ್ವಿತೀಯಾರ್ಧದ 10 ಓವರ್‌ಗಳಲ್ಲಿ 91 ರನ್‌ ಬಿಟ್ಟುಕೊಟ್ಟದ್ದು ಬಹಳ ದುಬಾರಿ ಎನಿಸಿದೆ. ರೇಣುಕಾ ಸಿಂಗ್‌, ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಾಕರ್‌… ಎಲ್ಲರೂ ತಮ್ಮ ತಂತ್ರಗಾರಿಕೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ಇಳಿಸಬೇಕಿದೆ. ಪಾಕಿಸ್ಥಾನಕ್ಕೆ ಕಡಿವಾಣ ಹಾಕಿದ್ದು ರಾಧಾ ಯಾದವ್‌ ಮಾತ್ರ.

ಸತತ 14 ಸೋಲು
ಪಾಕಿಸ್ಥಾನಕ್ಕೆ ಹೋಲಿಸಿದರೆ ಹ್ಯಾಲಿ ಮ್ಯಾಥ್ಯೂಸ್‌ ನೇತೃತ್ವದ ವೆಸ್ಟ್‌ ಇಂಡೀಸ್‌ ಬಲಾಡ್ಯ ತಂಡವೇನಲ್ಲ. ಅದು ಸತತ 14 ಪಂದ್ಯಗಳನ್ನು ಸೋತ ಸಂಕಟದಲ್ಲಿದೆ. ಸೋಲಿನ ಈ ಸರಮಾಲೆ ಯನ್ನು ಕಡಿದುಕೊಳ್ಳುವುದು ಅಷ್ಟು ಸುಲಭವಲ್ಲ. ಅಂದಮಾತ್ರಕ್ಕೆ ಕೆರಿಬಿಯನ್ನರನ್ನು ಲಘುವಾಗಿ ಪರಿಗಣಿಸುವುದು ಅಪಾ ಯಕ್ಕೆ ಎಡೆಮಾಡಿದಂತಾಗುತ್ತದೆ.

ಇಂಗ್ಲೆಂಡ್‌ ವಿರುದ್ಧ ಹ್ಯಾಲಿ ಮ್ಯಾಥ್ಯೂಸ್‌, ಶಿಮೇನ್‌ ಕ್ಯಾಂಬೆಲ್‌ ಮಾತ್ರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಬೌಲಿಂಗ್‌ ವಿಭಾಗದಲ್ಲಿ ಎಲ್ಲರೂ ದುಬಾರಿಯಾಗಿದ್ದರು.

ಸಂಭಾವ್ಯ ತಂಡಗಳು
ಭಾರತ: ಶಫಾಲಿ ವರ್ಮ, ಸ್ಮತಿ ಮಂಧನಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ರಿಚಾ ಘೋಷ್‌, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್‌/ಶಿಖಾ ಪಾಂಡೆ, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ರೇಣುಕಾ ಠಾಕೂರ್‌.

ವೆಸ್ಟ್‌ ಇಂಡೀಸ್‌: ಹ್ಯಾಲಿ ಮ್ಯಾಥ್ಯೂಸ್‌ (ನಾಯಕಿ), ರಶಾದಾ ವಿಲಿಯಮ್ಸ್‌, ಶಿಮೇನ್‌ ಕ್ಯಾಂಬೆಲ್‌, ಸ್ಟಫಾನಿ ಟೇಲರ್‌, ಶಬಿಕಾ , ಶಿನೆಲ್‌ ಹೆನ್ರಿ, ಶೆಡೀನ್‌ ನೇಶನ್‌, ಝೈದಾ ಜೇಮ್ಸ್‌, ಅಫಿ ಫ್ಲೆಚರ್‌, ಶಮಿಲಿಯಾ ಕಾನೆಲ್‌, ಶಕಿರಾ ಸೆಲ್ಮನ್‌.

ಸ್ಥಳ: ಕೇಪ್‌ ಟೌನ್‌
ಆರಂಭ: ಸಂಜೆ. 6.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

 

ಟಾಪ್ ನ್ಯೂಸ್

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Sureje-CM-DCM

ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು

Election-Com-State-Chief

Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asddads

India Open Badminton ಇಂದಿನಿಂದ:ಭಾರತದ ದೊಡ್ಡ ತಂಡದಿಂದ ದೊಡ್ಡ ನಿರೀಕ್ಷೆ

1-eewqeqw

Australian Open-2025: ದ್ವಿತೀಯ ಸುತ್ತಿಗೆ ಜೊಕೋ, ಸಿನ್ನರ್‌

1-wewew

Under-19 Women’s; ವಿಶ್ವಕಪ್‌ ಅಭ್ಯಾಸ ಪಂದ್ಯ:ಭಾರತ 119 ರನ್‌ ಜಯಭೇರಿ

1-bb-alvas

Ball Badminton: ಆಳ್ವಾಸ್‌ ಚಾಂಪಿಯನ್‌

1-kho-kho

ಚೊಚ್ಚಲ ಖೋ ಖೋ ವಿಶ್ವಕಪ್‌ ಆರಂಭ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.