Ind V/s Aus: ನಾಲ್ವರಿಂದ ಅರ್ಧ ಶತಕ ವನಿತಾ ಟೆಸ್ಟ್ : ಭಾರತದ ಬಿಗಿ ಹಿಡಿತ
Team Udayavani, Dec 22, 2023, 11:54 PM IST
ಮುಂಬಯಿ: ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ವನಿತೆಯರು ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮೇಲೆ ಭಾರೀ ಹಿಡಿತ ಸಾಧಿಸಿದ್ದಾರೆ. ಪ್ರವಾಸಿಗರ 219ಕ್ಕೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 376 ರನ್ ಸಂಗ್ರಹಗೊಂಡಿದೆ. 157 ರನ್ ಮುನ್ನಡೆ ಹೊಂದಿದ್ದು, ಆಸೀಸ್ ವಿರುದ್ಧ ಜಯದ ನಿರೀಕ್ಷೆಯಲ್ಲಿದೆ.
ಭಾರತದ ಸರದಿಯಲ್ಲಿ ಸ್ಮತಿ ಮಂಧನಾ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮ ಅರ್ಧ ಶತಕ ಬಾರಿಸಿ ಮಿಂಚಿದರು.
ಆಲ್‌ರಂಡರ್ ದೀಪ್ತಿ ಶರ್ಮ ಮತ್ತೂಮ್ಮೆ ಅಮೋಘ ಪ್ರದರ್ಶನ ನೀಡಿದ್ದು, 70 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (147 ಎಸೆತ, 9 ಬೌಂಡರಿ). ಇದು ಅವರ ಜೀವನಶ್ರೇಷ್ಠ ಬ್ಯಾಟಿಂಗ್. ಪೂಜಾ ವಸ್ತ್ರಾಕರ್ ಮತ್ತೋರ್ವ ನಾಟೌಟ್ ಆಟಗಾರ್ತಿ (33). ಇವ ರಿಬ್ಬರು ಮುರಿಯದ 8ನೇ ವಿಕೆಟಿಗೆ ಈಗಾಗಲೇ 102 ರನ್ ಪೇರಿಸಿದ್ದಾರೆ.
ಓಪನರ್ ಸ್ಮತಿ ಮಂಧನಾ 74 ರನ್ (106 ಎಸೆತ, 12 ಬೌಂಡರಿ), ರಿಚಾ ಘೋಷ್ 52 ರನ್ (104 ಎಸೆತ, 7 ಬೌಂಡರಿ) ಹಾಗೂ ಜೆಮಿಮಾ ರೋಡ್ರಿಗಸ್ 73 ರನ್ (121 ರನ್, 9 ಬೌಂಡರಿ) ಹೊಡೆದು ಆಸೀಸ್ ಬೌಲರ್‌ಗಳಿಗೆ ಬೆವರಿಳಿಸಿದರು. ಸ್ನೇಹ್ ರಾಣಾ (9) ಮತ್ತು ನಾಯಕಿ ಕೌರ್ (0) ಬ್ಯಾಟಿಂಗ್ ವೈಫಲ್ಯ ಕಂಡರು. ಭಾರತ ಮೊದಲ ದಿನದ ಆಟದ ಅಂತ್ಯಕ್ಕೆ ಒಂದು ವಿಕೆಟಿಗೆ 98 ರನ್ ಮಾಡಿತ್ತು. ಆಸ್ಟ್ರೇಲಿಯದ ಸ್ಪಿನ್ನರ್ ಆ್ಯಶ್ಲಿ ಗಾರ್ಡನರ್ 100 ರನ್ನಿಗೆ 4 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ 219. ಭಾರತ-7 ವಿಕೆಟಿಗೆ 376 (ಶಫಾಲಿ 40, ಮಂಧನಾ 74, ರಿಚಾ 52, ಜೆಮಿಮಾ 73, ದೀಪ್ತಿ ಬ್ಯಾಟಿಂಗ್ 70, ಪೂಜಾ ಬ್ಯಾಟಿಂಗ್ 33, ಗಾರ್ಡನರ್ 100ಕ್ಕೆ 4).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.