World Cup: 4 ಶತಕಗಳನ್ನು ಕಂಡ ವಿಶ್ವಕಪ್ ಮುಖಾಮುಖಿ- ಲಂಕೆಯನ್ನು ಬಗ್ಗುಬಡಿದ ಪಾಕಿಸ್ಥಾನ
Team Udayavani, Oct 10, 2023, 11:19 PM IST
ಹೈದರಾಬಾದ್: ಪ್ರಚಂಡ ಪರಾಕ್ರಮ ಮೆರೆದ ಪಾಕಿಸ್ಥಾನ ಏಷ್ಯನ್ ಕ್ರಿಕೆಟ್ ದಿಗ್ಗಜರ ಬ್ಯಾಟಿಂಗ್ ಮಹಾಸಮರದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ. ಲಂಕಾ 344 ರನ್ ಪೇರಿಸಿಯೂ ಸೋಲಿನ ಸುಳಿಗೆ ಸಿಲುಕಿದ್ದೊಂದು ವಿಪರ್ಯಾಸ.
ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ನಲ್ಲಿ ಸಾಗಿದ ಈ ಮುಖಾಮುಖೀಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 344 ರನ್ ಪೇರಿಸಿದರೆ, ಪಾಕಿಸ್ಥಾನ ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿ 48.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 348 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಮಂಗಳವಾರದ ಈ ಪಂದ್ಯದಲ್ಲಿ ಒಟ್ಟು 4 ಶತಕಗಳು ಸಿಡಿದವು. ಶ್ರೀಲಂಕಾದ ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ; ಪಾಕಿಸ್ಥಾನದ ಅಬ್ದುಲ್ಲ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಸೆಂಚುರಿ ಸಂಭ್ರಮ ಆಚರಿಸಿದರು. ಇದರಲ್ಲಿ ಮೆಂಡಿಸ್, ಸಮರವಿಕ್ರಮ ಶತಕ ವ್ಯರ್ಥವಾದವು.
ಆರಂಭಕಾರ ಅಬ್ದುಲ್ಲ ಶಫೀಕ್ ಕೊಡುಗೆ 113 ರನ್. ಇದು ಅವರ ಚೊಚ್ಚಲ ಏಕದಿನ ಶತಕ (103 ಎಸೆತ, 10 ಬೌಂಡರಿ, 3 ಸಿಕ್ಸರ್). ಕೀಪರ್ ರಿಜ್ವಾನ್ 121 ಎಸೆತಗಳಿಂದ ಅಜೇಯ 134 ರನ್ ಬಾರಿಸಿದರು (9 ಬೌಂಡರಿ, 3 ಸಿಕ್ಸರ್). ಈ ಜೋಡಿಯಿಂದ 3ನೇ ವಿಕೆಟಿಗೆ 156 ಎಸೆತಗಳಿಂದ 176 ರನ್ ಹರಿದು ಬಂತು. ಲಂಕಾ ಬೌಲಿಂಗ್ ಹಳಿ ತಪ್ಪಿತು.
ಜೋಡಿ ಶತಕದ ಆಕರ್ಷಣೆ
ಶ್ರೀಲಂಕಾ ಇನ್ನಿಂಗ್ಸ್ ಜೋಡಿ ಶತಕದೊಂದಿಗೆ ರಂಗೇರಿಸಿಕೊಂಡಿತು. ಸತತ 2 ಪಂದ್ಯಗಳಲ್ಲೂ ಮುನ್ನೂರರ ಗಡಿ ದಾಟಿತು. ಕುಸಲ್ ಮೆಂಡಿಸ್ 122 ಮತ್ತು ಸದೀರ ಸಮರವಿಕ್ರಮ 108 ರನ್ ಬಾರಿಸಿ ಲಂಕೆಯ ಬೃಹತ್ ಮೊತ್ತಕ್ಕೆ ಕಾರಣರಾದರು. 344 ರನ್ ಎನ್ನುವುದು ವಿಶ್ವಕಪ್‌ನಲ್ಲಿ ಪೂರ್ಣ ಪ್ರಮಾಣ ಸದಸ್ಯ ರಾಷ್ಟ್ರದ ವಿರುದ್ಧ ಲಂಕಾ ಪೇರಿಸಿದ ಅತ್ಯಧಿಕ ಗಳಿಕೆ ಆಗಿದೆ.
ಇವರಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕುಸಲ್ ಮೆಂಡಿಸ್ ಆಟ ಆತ್ಯಂತ ಆಕ್ರಮಣಕಾರಿಯಾಗಿತ್ತು. ವನ್‌ಡೌನ್ ಬ್ಯಾಟರ್ ಕೇವಲ 77 ಎಸೆತಗಳಿಂದ 122 ರನ್ ಚಚ್ಚಿದರು. ಸಿಡಿಸಿದ್ದು 14 ಬೌಂಡರಿ ಮತ್ತು 6 ಸಿಕ್ಸರ್. ಈ ಆರ್ಭಟದ ವೇಳೆ ಅಫ್ರಿದಿಗೆ ಸತತ 4 ಬೌಂಡರಿಗಳ ರುಚಿ ತೋರಿಸಿದರು. ಇದು ವಿಶ್ವಕಪ್‌ನಲ್ಲಿ ಶ್ರೀಲಂಕಾ ಆಟಗಾರನಿಂದ ದಾಖಲಾದ ಅತೀ ವೇಗದ ಶತಕ. ಇದು ಮೆಂಡಿಸ್ ಅವರ 3ನೇ ಸೆಂಚುರಿ. ವಿಶ್ವಕಪ್‌ನಲ್ಲಿ ಮೊದಲನೆಯದು. ಜತೆಗೆ ಜೀವನಶ್ರೇಷ್ಠ ಬ್ಯಾಟಿಂಗ್ ಕೂಡ ಆಗಿದೆ.
ಪ್ರಚಂಡ ಫಾರ್ಮ್ನಲ್ಲಿರುವ ಮೆಂಡಿಸ್ 2 ಶತಕಗಳ ಜತೆಯಾಟದಲ್ಲಿ ಪಾಲ್ಗೊಂಡರು. ಪಥುಮ್ ನಿಸ್ಸಂಕ ಜತೆ ದ್ವಿತೀಯ ವಿಕೆಟಿಗೆ 102 ರನ್ ಹಾಗೂ ಸಮರವಿಕ್ರಮ ಅವರೊಂದಿಗೆ 3ನೇ ವಿಕೆಟಿಗೆ 111 ರನ್ ಪೇರಿಸಿದರು. ಮೆಂಡಿಸ್ ಈ ವರ್ಷದ ಏಕದಿನದಲ್ಲಿ ಲಂಕಾ ಪರ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಇನ್ನೊಂದೆಡೆ ಸದೀರ ಸಮರವಿಕ್ರಮ 89 ಎಸೆತಗಳಿಂದ 108 ರನ್ ಬಾರಿಸಿ ಚೊಚ್ಚಲ ಶತಕ ಸಂಭ್ರಮ ಆಚರಿಸಿದರು. ಇವರ ಬ್ಯಾಟಿಂಗ್ ಅಬ್ಬರದ ವೇಳೆ 11 ಬೌಂಡರಿ, 2 ಸಿಕ್ಸರ್ ಸಿಡಿಯಿತು. ಮೆಂಡಿಸ್-ಸಮರವಿಕ್ರಮ ಸಾಹಸದಿಂದ ಲಂಕಾ 28ನೇ ಓವರ್‌ನಲ್ಲೇ 200 ರನ್ ಗಡಿ ದಾಟಿ ಮುನ್ನುಗ್ಗಿತು.
ಕುಸಲ್ ಪೆರೆರ (0) ಅವರನ್ನು ದ್ವಿತೀಯ ಓವರ್‌ನಲ್ಲೇ ಕೆಡವಿದರೂ ಪಾಕಿಸ್ಥಾನಕ್ಕೆ ಈ ಮೇಲುಗೈ ಉಳಿಸಿಕೊಳ್ಳಲಾಗಲಿಲ್ಲ. ಮತ್ತೋರ್ವ ಆರಂಭಕಾರ ಪಥುಮ್ ನಿಸ್ಸಂಕ ಮತ್ತು ಮೆಂಡಿಸ್ ಸೇರಿಕೊಂಡು ಲಂಕಾ ಸರದಿಯನ್ನು ಬೆಳೆಸಿದರು. ನಿಸ್ಸಂಕ 61 ಎಸೆತಗಳಿಂದ 51 ರನ್ ಹೊಡೆದರು (7 ಬೌಂಡರಿ, 1 ಸಿಕ್ಸರ್). 4 ವಿಕೆಟ್ ಕಿತ್ತ ಮಧ್ಯಮ ವೇಗಿ ಹಸನ್ ಅಲಿ ಪಾಕಿಸ್ಥಾನದ ಯಶಸ್ವಿ ಬೌಲರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.