ವಿಶ್ವ ಪರಿಸರ ದಿನಕ್ಕೊಂದು ಜಾಗೃತಿ ಗೀತೆ
ಸಿಎಂ ಬಿಡುಗಡೆ, ವಿಜಯಪ್ರಕಾಶ್-ಅನನ್ಯಾಭಟ್ ಹಾಡಿಗೆ ಮೆಚ್ಚುಗೆ
Team Udayavani, Jun 8, 2020, 4:23 AM IST
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ಪರಿಸರ ಕುರಿತು ಜಾಗೃತಿ ಮೂಡಿಸುವ ಹಾಡನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ ಬಳಿಕ ಹಾಡು ಕೇಳಿ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ವಹಿಸೋಣ ಎಂದಿದ್ದಾರೆ.
ಅಂದಹಾಗೆ, ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರು ರಾಗ ಸಂಯೋಜಿಸಿರುವ “ಜಡದಿಂದ ತಳೆದ ಜೀವ, ಜಡವಾಗದಿರಲಿ, ಕಾಲದೊಡನೆ ಬೆಳೆದ ಜೀವ, ಕಾಲವಾಗದಿರಲಿ ವಿಕಾಸದ ಹಾದಿಯಲ್ಲಿ ಅರಳೀತೀ ಜಗತ್ತು… ಎಚ್ಚರ ಆಗದಿದ್ದರೆ ಈಗ ಭುವಿಗೆ ಆಪತ್ತು…’ ಎಂಬ ಗೀತೆಗೆ ಭರಪೂರ ಮೆಚ್ಚುಗೆಯೂ ಸಿಕ್ಕಿದೆ. ಇನ್ನು ಈ ಜಾಗೃತಿ ಗೀತೆಗೆ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್ ಮತ್ತು ಅನನ್ಯಾಭಟ್ ಧ್ವನಿಯಾಗಿದ್ದಾರೆ.
ವೀರ್‌ಸಮರ್ಥ್ ಅವರೂ ಸಹ ಧ್ವನಿಗೂಡಿಸಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆಯಾಗಿದ್ದು, ಉತ್ತಮ ಮೆಚ್ಚುಗೆ ಸಿಗುತ್ತಿದೆ. ಹಾಡಿಗೆ ಡಾ.ಪ್ರಸನ್ನಕುಮಾರ್ ಅವರ ಸಾಹಿತ್ಯವಿದೆ. ಐಎಎಸ್ ಅಧಿಕಾರಿ ಶ್ರೀನಿವಾಸಲು ಈ ಜಾಗೃತಿ ಮೂಡಿಸುವ ಹಾಡಿಗೆ ಮಾರ್ಗದರ್ಶನ ಬೆಂಬಲ ನೀಡಿದ್ದಾರೆ. ಸಂತೋಷ್ ಸುತಾರ್ ಅವರ ಪರಿಕಲ್ಪನೆಯೊಂದಿಗೆ ಹಾಡು ಮೂಡಿಬಂದಿದೆ.
ಈ ಹಾಡಿಗೆ ಸಂಜೀವ ಬೆಳವಲ್, ಮಂಜುನಾಥ್ ಇತರರು ಸಹಕಾರ ನೀಡಿದ್ದಾರೆ. ಸದ್ಯಕ್ಕೆ ವಿಜಯಪ್ರಕಾಶ್ ಮತ್ತು ಅನನ್ಯಾಭಟ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡಿಗೆ ಎಲ್ಲೆಡೆಯಿಂದಲೂ ಸಿಕ್ಕಾಪಟ್ಟೆ ಮೆಚ್ಚುಗೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.