ಆಗಸದೆತ್ತರದ ಅಪ್ಪನಿಗೆ ಇನ್ನಷ್ಟು ನಿಕಟರಾಗೋಣ
Team Udayavani, Jun 20, 2021, 6:30 AM IST
ಆತ ಎಂದು ತನ್ನ ನೋವನ್ನು ಹೇಳಿಕೊಂಡ ವನಲ್ಲ. ನಮ್ಮ ಜತೆಗಿದ್ದೂ ತನ್ನದೇ ಲೋಕದಲ್ಲಿ ರುವವ. ನಾವು ಬೆಳೆದಂತೆ ನಮ್ಮಿಂದ ದೂರ ದೂರ ಸಾಗುವವ. ಇಷ್ಟಾದರೂ ನಾವು ಅತ್ತಾಗ ಕಣ್ಣೀರೊರೆಸುವ ಕೈ, ಬಿ¨ªಾಗ ಎದೆಗಪ್ಪಿ ಸಂತೈಸುವ ನಿಷ್ಕಲ್ಮಶ ಪ್ರೀತಿ, ಜೀವನದ ನಡೆಯನ್ನು, ದುಡಿ ಮೆಯ ಬೆಲೆಯನ್ನು ತಿಳಿಸಿದವರು ಯಾರೆಂದಾಗ ನೆನಪಾಗುವುದು ಅಪ್ಪ.
ತಾಯಿ ಕರುಣಾಮಯಿ, ಕ್ಷಮಾದಾತೆ ಅನ್ನು ವುದು ರೂಢಿ. ಆದರೆ ನಮ್ಮ ಏಳಿಗೆ, ಯಶಸ್ಸನ್ನೇ ಬಯಸುವ ಅಪ್ಪನ ಉಪಸ್ಥಿತಿ ನೆನಪಾಗುವುದು ಕಡಿಮೆ. ತಂದೆ-ತಾಯಿ ಇಬ್ಬರೂ ಒಂದೇ ನಾಣ್ಯದ 2 ಮುಖಗಳಿದ್ದಂತೆ. ಕವಿಗಳು ತಾಯಿಯನ್ನು ಕಾಮಧೇನುವಿಗೂ ತಂದೆಯನ್ನು ಕಲ್ಪವೃಕ್ಷಕ್ಕೂ ಹೋಲಿಸುತ್ತಾರೆ. ಮಕ್ಕಳ ಬದುಕಿಗೆ ಇವರ ನಿಸ್ವಾರ್ಥ ಕಾಣಿಕೆ ಮಹತ್ವದ್ದು.
ಅಮ್ಮನಷ್ಟೇ ಅಪ್ಪನೂ ಪ್ರತಿಯೊಬ್ಬರ ಜೀವನ ರೂಪಿಸುವ ಮಹತ್ವದ ವ್ಯಕ್ತಿ. ಅಪ್ಪನಿಗೂ ಅಮ್ಮ ನಂಥ ಮನಸ್ಸು, ಹೆಂಗರುಳು ಇದ್ದೇ ಇರು ತ್ತದೆ. ಅಪ್ಪ ಮಕ್ಕಳ ಮೇಲಣ ತನ್ನ ಪ್ರೀತಿಯನ್ನು ಬಹಿ ರಂಗವಾಗಿ ತೋರ್ಪಡಿಸಿಕೊಳ್ಳದಿರಬಹುದು. ಆದರೆ ಅಪ್ಪನಾದವನಿಗೆ ತನ್ನ ಮಗ ಅಥವಾ ಮಗಳನ್ನು ತನಗಿಂತ ಎತ್ತರದ ಸ್ಥಾನದಲ್ಲಿ ನೋಡುವ ತವಕ. ಈ ಕಾರಣದಿಂದಲೇ ಆತ ಮಕ್ಕಳ ಪಾಲಿಗೆ ಶಿಸ್ತಿನ ಸಿಪಾಯಿ. ಹಾಗೆಂದು ಮಕ್ಕಳನ್ನು ಎಂದೂ ತನ್ನಿಂದ ದೂರ ಮಾಡಲು ಬಯಸಲಾರ. ಕುಟುಂಬದ ಒಳಿತಿಗಾಗಿ ಅಪ್ಪ ತನ್ನ ಇಡೀ ಜೀವನ ವನ್ನೇ ಸವೆಸುತ್ತಾನೆ. ಇಂಥ ಅಪ್ಪಂದಿರಿಗೆ ಗೌರವ, ಅಭಿನಂದನೆ ಸಲ್ಲಿಸುವ ಉದ್ದೇಶದೊಂದಿಗೆ ಪ್ರತೀ ವರ್ಷದ ಜೂನ್ ತಿಂಗಳ ಮೂರನೇ ರವಿವಾರ ದಂದು “ವಿಶ್ವ ಅಪ್ಪಂದಿರ ದಿನ’ ಆಚರಿಸಲಾಗುತ್ತದೆ.
ಹಿನ್ನೆಲೆ: ಅಪ್ಪಂದಿರ ದಿನವು ನಮ್ಮ ಭಾರತೀಯರಿಗೆ ಸ್ವಲ್ಪ ಅಪರಿಚಿತ. ಇದು ಪಾಶ್ಚಾತ್ಯರ ಬಳುವಳಿ. ಅಪ್ಪಂದಿರ ದಿನದ ಈ ಪರಿಕಲ್ಪನೆ ಮೊದಲು ಹುಟ್ಟಿ ಆಚರಿಸಲ್ಪಟ್ಟದ್ದು ದೂರದ ಅಮೆರಿಕದ ವಾಷಿಂಗ್ಟನ್‌ನಲ್ಲಿ. 1909ರಲ್ಲಿ ವಾಷಿಂಗ್ಟನ್‌ನ “ಎಪಿಸ್ಕೊಪಲ್ ಚರ್ಚ್’ನಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ತಾಯಿಯನ್ನು ಅಭಿನಂದಿಸುವ ಸ್ಫೂರ್ತಿದಾಯಕ ಧರ್ಮೋಪದೇಶ ಭಾಷಣವನ್ನು ಆಲಿಸುತ್ತಿದ್ದ ಸೊನೋರಾ ಸ್ಮಾರ್ಟ್ ಡಾಡ್ ಎಂಬಾಕೆಗೆ ತನ್ನ ತಂದೆಯ ನೆನಪಾಯಿತಂತೆ.
ತಂದೆಗೇಕೆ ಕೃತಜ್ಞತೆಯ ದಿನವಿಲ್ಲ ಎಂದುಕೊಂಡು ಆಕೆ ಮರುಗುತ್ತಾಳೆ. 1910ರ ಜೂನ್‌ನ ಮೂರನೇ ರವಿವಾರದಂದು ತನ್ನ ತಂದೆಗೆ ಗೌರವ ಅರ್ಪಿಸುವ ಮೂಲಕ ಇಡೀ ವಿಶ್ವದಲ್ಲಿ ತಂದೆಯಂದಿರ ದಿನ ಆಚರಿಸಿದ ಮೊದಲಿಗಳಾಗಿ ಗುರುತಿಸಿಕೊಂಡಳು. ಹೀಗೆ ಆಚರಿಸಲ್ಪಟ್ಟ ಅಪ್ಪಂದಿರ ದಿನವನ್ನು ಇಂದಿಗೂ ಸುಮಾರು 52 ದೇಶಗಳು ಜೂನ್ ತಿಂಗಳ ಮೂರನೇ ರವಿವಾರದಂದು ಆಚರಿಸಿದರೆ, ಉಳಿದ ದೇಶಗಳು ವರ್ಷದ ಬೇರೆ ಬೇರೆ ದಿನಗಳಂದು ಆಚರಿಸುತ್ತಿವೆ.
ಅಪ್ಪನೊಬ್ಬ ಕುಟುಂಬದ ನಿರ್ವಾಹಕನಾಗಿ, ಮಕ್ಕಳ ಪಾಲಿನ ಪೋಷಕನಾಗಿ ನಿರ್ವಹಿಸುವ ಜವಾಬ್ದಾರಿ ನಮ್ಮ ಅರಿವಿಗೆ ಬರುವುದು ತೀರಾ ವಿರಳ. ಮಕ್ಕಳ ಸಣ್ಣ ಪುಟ್ಟ ಬೇಡಿಕೆಗಳನ್ನು ಕೆಲವೊಮ್ಮೆ ಗದರಿ, ಕೆಲವೊಮ್ಮೆ ಪ್ರೀತಿಯಿಂದ ಈಡೇರಿಸುವ ಅವರ ಪ್ರೀತಿ ಆಕಾಶದಷ್ಟು ಎತ್ತರದ್ದು. ತಂದೆ ಆಕಾಶಕ್ಕೆ ಹೋಲಿಸುವಷ್ಟು ದೊಡ್ಡ ವ್ಯಕ್ತಿತ್ವ ಉಳ್ಳ ವನು. ಆಕಾಶದಲ್ಲಿ ಎಷ್ಟೆಲ್ಲ ವಿಭಿನ್ನತೆಗಳಿವೆಯೋ ಅಪ್ಪನ ಗುಣ, ವ್ಯಕ್ತಿತ್ವದಲ್ಲಿಯೂ ನಮಗೆ ಮೇಲ್ನೋ ಟಕ್ಕೆ ಕಾಣದ ಹಲವು ವಿಶೇಷಗಳಿವೆ.
ಮಕ್ಕಳು ಯೌವ್ವನಕ್ಕೆ ಬರುವ ಕಾಲಕ್ಕೆ ತಂದೆ- ತಾಯಿ ವಾರ್ಧಕ್ಯದ ಬಾಗಿಲಲ್ಲಿರುತ್ತಾರೆ. ತಂದೆ ಯಂತೂ ಹೆಚ್ಚೇ ದಣಿದಿರುತ್ತಾನೆ. ದುರ ದೃಷ್ಟವಶಾತ್ ಪತ್ನಿ ಅಗಲಿದರಂತೂ ತಂದೆ ಮತ್ತೆ ಜೀವನ್ಮುಖೀಯಾಗುವುದಿಲ್ಲ. ಈ ಎಲ್ಲ ಸಮಯ ಗಳಲ್ಲಿಯೂ ಅವರಿಗೆ ನಮ್ಮ ಕಾಳಜಿಯ ಅಗತ್ಯ ವಿದೆ. ತಾಯಿಯಂತೆ ತಂದೆಗೂ ನಾವು ನಿಕಟ ವಾಗಬೇಕಿದೆ. ಒಟ್ಟಾರೆ ಅಪ್ಪನಿಗೆ ಅಪ್ಪನೆ ಸಾಟಿ, ಅವರಿಗೆ ಪರ್ಯಾಯವೆಂಬುದಿಲ್ಲ. ನಮ್ಮ ಏಳಿ ಗೆಯ ಹಿಂದಿನ ಕೈಯನು ಗೌರವಿಸುವ, ಕೃತಜ್ಞತೆ ಸಲ್ಲಿಸುವ ಈ ದಿನದಂದು ನಮ್ಮೆಲ್ಲರಿಗೆ ಅಪ್ಪ ಇನ್ನೂ ಹತ್ತಿರವಾಗಲಿ. ಆ ಮೂಲಕ ಅವರ ಮೊಗದಲ್ಲಿ ಸಂತಸದ ಕಿರುನಗೆ ಮೂಡಿಸುವ ಜತೆಯಲ್ಲಿ ನಾವೂ ಅವರ ಕನಸನ್ನು ನನಸಾಗಿಸುವ ಹಾದಿಯಲ್ಲಿ ಹೆಜ್ಜೆ ಇಡೋಣ.
– ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.