ಜನವರಿಯಲ್ಲಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್
Team Udayavani, May 30, 2020, 5:15 AM IST
ಹೊಸದಿಲ್ಲಿ: ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಂದಿನ ವರ್ಷದ ಜನವರಿಯಲ್ಲಿ ಆಕ್ಲೆಂಡ್‌ನಲ್ಲಿ ನಡೆಯ ಲಿದೆ. ಬಿಡಬ್ಲ್ಯುಎಫ್ ಶುಕ್ರವಾರ ಪರಿಷ್ಕೃತ ವೇಳಾಪಟ್ಟಿ° ಪ್ರಕಟಿಸಿತು.
ಈ ಪಂದ್ಯಾವಳಿಗೂ ಸ್ವಲ್ಪ ದಿನ ಮೊದಲು “ವಿಶ್ವ ಜೂನಿಯರ್ ಮಿಕ್ಸೆಡ್ ಚಾಂಪಿಯನ್‌ಶಿಪ್’ ನಡೆಯಲಿದೆ. ಈ ಕೂಟ ಜ. 11ರಿಂದ 16ರ ತನಕ ಸಾಗಲಿದೆ. ಅನಂತರ ಜ. 18ರಿಂದ 24ರ ತನಕ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತದೆ.
ಬಾರ್‌ಫೂಟ್ ಆ್ಯಂಡ್ ಥಾಮ್ಸನ್ ಬಿಡಬ್ಲ್ಯುಎಫ್ ವಿಶ್ವ ಜೂ. ಚಾಂಪಿ ಯನ್‌ಶಿಪ್‌ಗೆ ನೂತನ ದಿನಾಂಕ ವನ್ನು ಪ್ರಕಟಿಸಲಾಗಿದೆ. ಮೂಲ ವೇಳಾಪಟ್ಟಿ ಪ್ರಕಾರ ಇದು ಈ ವರ್ಷದ ಸೆಪ್ಟಂಬರ್‌ನಲ್ಲಿ ನಡೆಯಬೇಕಿತ್ತು. ಇಲ್ಲಿ ಆಯ್ಕೆಯಾದವರಷ್ಟೇ ಜನವರಿಯ ಕೂಟದಲ್ಲಿ ಭಾಗವಹಿಸುವ ಅರ್ಹತೆ ಹೊಂದಿರುತ್ತಾರೆ’ ಎಂದು ಬಿಡಬ್ಲ್ಯು ಎಫ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಈ ಕೂಟವನ್ನು ಸ್ಮರಣೀಯಗೊಳಿ ಸುವ ಗುರಿ ತಮ್ಮದು ಎಂಬುದಾಗಿ ನ್ಯೂಜಿಲ್ಯಾಂಡ್ ಬ್ಯಾಡ್ಮಿಂಟನ್ ಸಿಎಒ ಜೋ ಹಿಚ್‌ಕಾಕ್ ಹೇಳಿದ್ದಾರೆ.
ಭಾರತದ ಸಾಧನೆ
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿದ ಭಾರತದ ಏಕೈಕ ಆಟಗಾರ್ತಿ ಸೈನಾ ನೆಹ್ವಾಲ್ (2008). ಬಾಲಕರ ವಿಭಾಗದಲ್ಲಿ ಸಿರಿಲ್ ವರ್ಮ 2015ರಲ್ಲಿ ಬೆಳ್ಳಿ, ಬಿ. ಸಾಯಿಪ್ರಣೀತ್-ಎಚ್.ಎಸ್. ಪ್ರಣಯ್ 2010ರಲ್ಲಿ ಕಂಚು ಜಯಿಸಿದ್ದರು. ಗುರುಸಾಯಿದತ್, ಸಮೀರ್ ವರ್ಮ, ಲಕ್ಷ್ಯ ಸೇನ್ ಕೂಡ ಇಲ್ಲಿ ಕಂಚಿನ ಸಾಧನೆಗೈದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.