ವಿಶ್ವ ಕೊಂಕಣಿ ಕೇಂದ್ರ: ಅಧ್ಯಕ್ಷರಾಗಿ ನಂದಗೋಪಾಲ ಶೆಣೈ
Team Udayavani, Nov 27, 2021, 5:16 AM IST
ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ನೂತನ ಅಧ್ಯಕ್ಷರಾಗಿ ಲೆಕ್ಕ ಪರಿಶೋಧಕ ನಂದಗೋಪಾಲ ಶೆಣೈ ಅವರು ಆಯ್ಕೆಯಾಗಿದ್ದಾರೆ.
ಕೇಂದ್ರದ ವಾರ್ಷಿಕ ಮಹಾಸಭೆ ನ. 24ರಂದು ಜರಗಿದ್ದು 2021-24ರ ಅವಧಿಗೆ ನೂತನ ವಿಶ್ವಸ್ಥ ಮಂಡಳಿಯನ್ನು (ಬೋರ್ಡ್ ಆಫ್ ಟ್ರಸ್ಟೀಸ್) ಚುನಾಯಿಸಲಾಯಿತು.
ನೂತನ ಅಧ್ಯಕ್ಷರ ಸಹಿತ ಎಲ್ಲಾ ಪದಾಧಿಕಾರಿಗಳು ಆವಿರೋಧವಾಗಿ ಆಯ್ಕೆಯಾದರು.
ಇತರ ಪದಾಧಿಕಾರಿಗಳು: ಜಗದೀಶ್ ಶೆಣೈ (ಉಪಾಧ್ಯಕ್ಷ), ಗಿಲ್ಬರ್ಟ್ ಡಿ’ಸೋಜಾ (ಉಪಾಧ್ಯಕ್ಷ), ಡಾ| ಶ್ರೀಮತಿ ಕಿರಣ್ ಬುಡ್ಕುಳೆ, ಬಿ. ಆರ್. ಭಟ್ (ಕೋಶಾಧಿಕಾರಿಗಳು), ಗಿರಿಧರ ಕಾಮತ್ (ಕಾರ್ಯದರ್ಶಿ), ಸ್ನೇಹಾ ವಿ. ಶೆಣೈ (ಜತೆ ಕಾರ್ಯದರ್ಶಿ).
ಚುನಾಯಿತರಾದ ಇತರ ಟ್ರಸ್ಟಿಗಳು: ಡಾ| ಕಸ್ತೂರಿ ಮೋಹನ್ ಪೈ, ಕೆ.ಬಿ. ಖಾರ್ವಿ, ಮುರಲೀಧರ ವಿ. ಪ್ರಭು,ಯು. ಶಕುಂತಲಾ ಆರ್. ಕಿಣಿ, ರಮೇಶ್ ಪೈ ಕಣ್ಣಾನೂರು, ಮೆಲ್ವಿನ್ ಯುಜಿನ್ ರಾಡ್ರಿಗಸ್, ಡಿ. ರಮೇಶ ನಾಯ್ಕ, ನಾರಾಯಣ ನಾಯ್ಕ, ಸಿ. ವತಿಕಾ ಕಾಮತ್, ವೆಂಕಟೇಶ ಪ್ರಭು.
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ ಶೆಣೈ ಅವರ ಸುದೀರ್ಘ ಸೇವೆಯನ್ನು ಗೌರವಿಸಿ ಸಹ ಗೌರವಾಧ್ಯಕ್ಷರಾಗಿ ಮುಂದುವರಿಯಲು ವಿನಂತಿಸಲಾಯಿತು. ಗೌರವಾಧ್ಯಕ್ಷ ಆರ್. ವಿ. ದೇಶಪಾಂಡೆ ಮತ್ತು ಚೇರ್‌ಮನ್ ಡಾ| ಪಿ. ದಯಾನಂದ ಪೈ ಅವರನ್ನು ತಮ್ಮ ಪ್ರಸಕ್ತ ಪದವಿಗಳಲ್ಲಿ ಮುಂದುವರಿಯಲು ವಿಶ್ವಸ್ಥ ಮಂಡಳಿಯು ವಿನಂತಿಸಿತು.
ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ತ ಮಂಡಳಿಯಲ್ಲಿ ಡಾ| ಪಿ. ದಯಾನಂದ ಪೈ, ಪಿ. ಸತೀಶ್ ಪೈ , ಟಿ.ವಿ. ಮೋಹನದಾಸ್ ಪೈ, ಡಾ| ರಂಜನ್ ಪೈ, ಕೆ.ವಿ. ಕಾಮತ್, ಮೇಡಂ ಗ್ರೇಸ್ ಪಿಂಟೊ, ರಾಮದಾಸ್ ಕಾಮತ್ ಯು., ಪ್ರದೀಪ್ ಜಿ. ಪೈ, ಜಿಸೆಲ್ ಡಿ. ಮೆಹತಾ, ವಿಲಿಯಂ ಡಿ’ಸೋಜಾ, ಗೋಕುಲ್‌ನಾಥ್ ಪ್ರಭು, ಉಲ್ಲಾಸ್ ಕಾಮತ್, ರೊನಾಲ್ಡ್ ಕುಲಾಸೊ ಮೊದಲಾದ ಗಣ್ಯರು ಖಾಯಂ ಪೋಷಕ ಟ್ರಸ್ಟಿಗಳಾಗಿದ್ದಾರೆ. ಹೊಸದಾಗಿ ಆಯ್ಕೆಯಾದ 16 ಟ್ರಸ್ಟಿಗಳು 2021-24 ರ ಅವಧಿಗೆ ವಿಶ್ವ ಕೊಂಕಣಿ ಕೇಂದ್ರವನ್ನು ಮುನ್ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.