ವಿಶ್ವ ಹಾಲು ದಿನ : ಕೋವಿಡ್ ನಿರೋಧಕ ಹೆಚ್ಚಿಸುವಲ್ಲಿ ಹಾಲು ಸಹಕಾರಿ
Team Udayavani, Jun 1, 2021, 6:50 AM IST
ಕೋವಿಡ್-19ರ ಮಹಾಮಾರಿ ವ್ಯಾಪಿಸಿರುವ ಈ ಸಂದರ್ಭದಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅರಿಶಿನ, ಲವಂಗ, ತುಳಸಿ, ಅಶ್ವಗಂಧ ಮುಂತಾದ ಆರ್ಯುವೇದದ ಸಾರ ಮಿಶ್ರಿತ ಹಾಲು ಕೂಡ ಉತ್ತಮವಾಗಿದೆ.
ಅಲ್ಲದೇ ಪ್ರತೀದಿನ ನಿರಂತರವಾಗಿ ಬೆಳಗ್ಗೆ ಮತ್ತು ಸಂಜೆ ಒಂದು ಕಪ್ಪು ಹಾಲನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಲ್ಲಿ ದೀರ್ಘಾಯುಷಿಗಳಾಗಲು ಸಹಾಯವಾಗುತ್ತದೆಂಬುದು ಸಾಭೀತಾದ ವಿಷಯವಾಗಿದೆ. ಹಾಲನ್ನು ಬಳಕೆ ಮಾಡಬೇಕಾದರೆ ಹಾಲಿನ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಬೇಕು ಪ್ರಸಿದ್ಧ ಬ್ರಾಂಡ್ ಹಾಲು ಮತ್ತು ಹಾಲಿನ ಉತ್ಪನ್ನ ಬಳಸುವುದು ನಿರಂತರ ಅಭ್ಯಾಸಿಕೊಳ್ಳುವುದು ಸೂಕ್ತವಾಗಿರುತ್ತದೆ.
ವಿಶ್ವ ಹಾಲು ದಿನಾಚರಣೆಯನ್ನು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ)ಯವರು ಹಾಲನ್ನು ಅಂತಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ಆಹಾರವನ್ನಾಗಿ ಗುರುತಿಸಿ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2001ರಿಂದ ಪ್ರತೀ ವರ್ಷ ಜೂ.1ರಂದು ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರತೀ ವರ್ಷ ಸಾಮಾನ್ಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವ ಬ್ಯಾನರ್‌ಗಳನ್ನು, ಬಿತ್ತಿ ಪತ್ರಗಳನ್ನು ವಿತರಿಸಿ, ಮಾರಾಥಾನ ಮುಖಾಂತರ ಶಾಲೆಗಳಲ್ಲಿ ಸೆಮಿನಾರ್ ಮಾಡುವ, ಮಹತ್ವ ತಿಳಿಸುವ ಕಾರ್ಯಕ್ರಮ, ವಿಚಾರ ಸಂಕೀರ್ಣಗೋಷ್ಟಿಗಳನ್ನು ಏರ್ಪಡಿಸುವುದು, ಡೇರಿ ಭೇಟಿ, ಆಸ್ಪತ್ರೆಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉಚಿತವಾಗಿ ವಿತರಿಸುವ ಹಾಗೂ ಇನ್ನು ಇತರೆ ಕಾರ್ಯಕ್ರಮಗಳ ಮೂಲಕ ವಿಶ್ವ ಹಾಲಿನ ದಿನಾಚರಣೆ ಆಚರಿಸಲಾಗುತ್ತಿದೆ.
ಹಾಲು ಒಂದು ಪರಿಪೂರ್ಣವಾದ ಆಹಾರ, ಮಾನವ ಶರೀರದ ಬೆಳವಣಿಗೆಗೆ ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಅವಶ್ಯವಿರುವ ಎಲ್ಲ ಪೋಷಕಾಂಶ ಗಳು ಹಾಲಿನಲ್ಲಿವೆ.
ಹಾಲಿನಲ್ಲಿ ಸಸಾರಜನಕ, ಪ್ರೋಟಿನ್, ಜಿಡ್ಡು-ಫ್ಯಾಟ್, ಸಕ್ಕರೆ ಮತ್ತು ಪಿಷ್ಟ-ಕಾಬೋìಹೈಡ್ರೇಟ್, ಲವಣಗಳು- ಮಿನರಲ್, ಜೀವಸತ್ವಗಳು-ವಿಟಮಿನ್ಸ್ ಹಾಗೂ ಇದರ ಜತೆಗೆ ನೀರಿನಾಂಶ ಒಳಗೊಂಡಿರುತ್ತದೆ.
ಹಾಲಿನಲ್ಲಿ ಇರುವ ಕ್ಯಾಲ್ಸಿಯಂ, ವಿಟಮಿನ್-ಡಿ ಮಕ್ಕಳಲ್ಲಿ ಮೂಳೆ ಮತ್ತು ಹಲ್ಲುಗಳು ಬೆಳೆಯಲು ಮತ್ತು ಆರೋಗ್ಯದಿಂದ ಇರಲು ಮೂಲ ಕಾರಣವಾಗಿದೆ.
ಮಕ್ಕಳಲ್ಲಿ ಮಾಂಸಖಂಡ ಬೆಳೆಯಲು ಹಾಲಿನಲ್ಲಿರುವ ಸಸಾರಜನಕ-ಪ್ರೋಟೀನ್ ಮೂಲ ಕಾರಣವಾಗಿದೆ. ಹಾಲಿನಲ್ಲಿರುವ Riboflavin & vitamin-B12 ಚರ್ಮ ಮತ್ತು ಕಣ್ಣುಗಳು ಆರೋಗ್ಯವಾಗಿರಲು ಕಾರಣವಾಗಿದೆ. ಹಾಲಿನಲ್ಲಿರುವ ಲವಣಗಳು ಮತ್ತು ಜೀವಸತ್ವಗಳು ದೇಹದಲ್ಲಿನ ರೋಗ ನಿರೋಧಕ ಶಕ್ತಿ ತರಲು ಮುಖ್ಯ ಅಂಶಗಳಾಗಿವೆ.
ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯವರು 1-3 ವರ್ಷದ ಮಕ್ಕಳಿಗೆ ಪ್ರತೀ ದಿನ ಕನಿಷ್ಠ 300 ಗ್ರಾಂ ಹಾಲು ಮತ್ತು 10-12 ವರ್ಷದರಿಗೆ ಕನಿಷ್ಠ 250 ಗ್ರಾಂ. ಹಾಲು ಸೇವಿಸಬೇಕೆಂದು ತಿಳಿಸಿರುತ್ತಾರೆ, ಹಾಲಿನಲ್ಲಿರುವ ಕೇಸಿನ್‌ನಲ್ಲಿ ಎಲ್ಲ ರೀತಿಯ ಅಮೆನೋ ಆಸಿಡ್ ಇದ್ದು, ಇವುಗಳು ರೋಗ ನಿರೋಧಕ ಶಕ್ತಿ ಬರಲು ಕಾರಣವಾಗಿದೆ.
ಹಾಲಿನಲ್ಲಿರುವ ಲವಣಗಳು ಮತ್ತು ಜೀವಸತ್ವಗಳ ಸೇವನೆಯಿಂದ ಮಾನವನ ಶರೀರದಲ್ಲಿ ಅನೇಕ ಕಾರಣ ಗಳಿಂದ ಉಂಟಾಗುವ ಒತ್ತಡ (stress) ನಿಯಂತ್ರಿಸುವ ಶಕ್ತಿ ಇದೆ ಎಂದು ವೈಜ್ಞಾನಿಕವಾಗಿ ತಿಳಿಸಲಾಗಿದೆ. ಹಾಲಿನಲ್ಲಿರುವ ಎ-2 ಪ್ರೋಟಿನ್‌ಗಳ ಸೇವನೆಯಿಂದ ಶರೀರದಲ್ಲಿ ಕ್ಯಾನ್ಸರ್ ಕಣಗಳು ಬೆಳೆಯುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
ಹಾಲಿನಲ್ಲಿರುವ lactoseನಿಂದ ಯಕೃತ್ – ಲಿವರ್‌ನಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆ ನಿಯಂತ್ರಣವಾಗುತ್ತದೆ. An apple a day keeps doctor away ಅನ್ನುವ ರೀತಿಯಲ್ಲಿ ಪ್ರತೀ ದಿನ Glass of milk reduce the risk of contacting diseses ಎನ್ನಲಾಗಿದೆ.
ಭಾರತವು ಜಗತ್ತಿನಲ್ಲೇ ಅತೀ ಹೆಚ್ಚು ಹಾಲನ್ನು ಉತ್ಪಾದನೆ ಮಾಡುವ ದೇಶವೆಂಬುದು ನಮಗೆ ಹೆಮ್ಮೆಯ ವಿಷಯವಾಗಿದ್ದು, ಪ್ರಸ್ತುತ 190ರಿಂದ 200 ಮಿಲಿಯನ್ ಟನ್ ಹಾಲು ಉತ್ಪಾದಿಸಲಾಗುತ್ತಿದೆ. ಹಾಗೂ ಪ್ರತಿ ವ್ಯಕ್ತಿಗೆ ಪ್ರತಿ ದಿನ 394 ಎಂ.ಎಲ್. ಹಾಲು ಲಭಿಸುತ್ತಿದೆ. ಹಾಲು ಸುಲಭವಾಗಿ ಜೀರ್ಣವಾಗುವ ಆಹಾರ ಪದಾರ್ಥ ವಾಗಿದ್ದು, ಎಲ್ಲ ವಯಸ್ಸಿನವರು ಹಾಗೂ ಯಾವುದೇ ರೋಗಿಗಳು ಬಳಸಲು ಯೋಗ್ಯವಾಗಿರುತ್ತದೆ.
ರಾಜ್ಯದಲ್ಲಿ 1975 ರಿಂದ ಸಹಕಾರ ಹೈನೋದ್ಯವು ಪ್ರಾರಂಭವಾಗಿ ದೇಶದಲ್ಲೇ 2ನೇ ಅತೀ ದೊಡ್ಡ ಸಹಕಾರ ಹೈನೋದ್ಯ ರಾಜ್ಯವೆಂಬುದು ಕೂಡ ಶ್ಲಾಘನೀಯ ವಿಚಾರವಾಗಿರುತ್ತದೆ. ಗುಣಮಟ್ಟಕ್ಕೆ ಮನೆ ಮಾತಾಗಿರುವ ನಂದಿನಿ ಹಾಲು ಸುಲಭವಾಗಿ ಕೈಗೆಟಕುವ ದರದಲ್ಲಿ (ಉಳಿದ ರಾಜ್ಯಗಳಿಗೆ ಹೋಲಿಸಿದಾಗ) ಗ್ರಾಹಕರಿಗೆ ಸದಾ ಲಭ್ಯವಿರುತ್ತದೆ.
ಹಾಲಿನಿಂದ ಅನೇಕ ಬಗೆಯ ಉತ್ಪನ್ನಗಳನ್ನು ತಯಾ ರಿಸಲಾಗುತ್ತಿದ್ದು, ಮುಖ್ಯವಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಚೀಸ್, ಪನ್ನೀರ್, ಪೇಡ, ಕುಂದ, ಮೈಸೂರ್ ಪಾಕ್, ಐಸ್‌ಕ್ರೀಮ್ ಇತರೆ ಸಿಹಿ ಪದಾ ರ್ಥಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಗುಣಮಟ್ಟದ ಉತ್ಪನ್ನ ಗಳು ಆರೋಗ್ಯಕ್ಕೆ ಪೂರಕವಾಗಿರುತ್ತದೆ.
ವಿಶ್ವ ಹಾಲು ದಿನಾಚರಣೆ ಅಲ್ಲದೆ, ಭಾರತದಲ್ಲಿ ಪ್ರತೀ ವರ್ಷ 2014ರಿಂದ ನ.26 ರಂದು ಡಾ| ವರ್ಗೀಸ್ ಕುರಿಯನ್ ರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಹಾಲು ದಿನಾಚರಣೆಯನ್ನು ಸಹಾ ಆಚರಿಸಲಾಗುತ್ತಿದೆ.
- ಡಾ|ಡಿ.ಎನ್.ಹೆಗ್ಡೆ, ಕೆಎಂಎಫ್ ಸಲಹೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.