ಸಾಗರವನ್ನು ಶುದ್ಧವಾಗಿಡಲು ಸಾಗರದಷ್ಟೇ ದೊಡ್ಡ ಮನಸ್ಸು ಬೇಕು

ಇಂದು ಅಂತಾರಾಷ್ಟ್ರೀಯ ಸಾಗರಗಳ ದಿನ: "ಸುಸ್ಥಿರ ಸಾಗರಕ್ಕೆ ಆವಿಷ್ಕಾರ'

Team Udayavani, Jun 8, 2020, 9:30 AM IST

ಸಾಗರವನ್ನು ಶುದ್ಧವಾಗಿಡಲು ಸಾಗರದಷ್ಟೇ ದೊಡ್ಡ ಮನಸ್ಸು ಬೇಕು

ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಭವ್ಯವಾದ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದೇ ಸಮುದ್ರವನ್ನು ಪರಿಗಣಿಸಲಾಗುತ್ತದೆ. ಪ್ರಪಂಚದ ಸಂಯೋಜನೆಯು ನಾಲ್ಕು ಬೃಹತ್‌ ನೀರಿನ ಪ್ರದೇಶಗಳನ್ನು ಒಳಗೊಂಡಿದೆ; ಅಟ್ಲಾಂಟಿಕ್‌, ಪೆಸಿಫಿಕ್‌, ಆರ್ಕ್ಟಿಕ್‌ ಮತ್ತು ಭಾರತೀಯ ಸಾಗರಗಳು. ಆದರೆ ಮಾನವನ ಮಧ್ಯಸ್ಥಿಕೆಯು ನಿರಂತರವಾಗಿ ಹೆಚ್ಚಾದಾಗಿನಿಂದ ಇವುಗಳು ಈಗ ಸಂತ್ರಸ್ಥಗೊಂಡಿದೆ.

ಇಂದು (ಜೂ. 8) ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಸಮುದ್ರಗಳನ್ನು ಶುದ್ಧವಾಗಿರಿಸುವ ಮತ್ತು ಅವುಗಳನ್ನು ರಕ್ಷಿಸಲು ಪಣತೊಡುವ ದಿನ ಇದಾಗಿದೆ. ಸಮುದ್ರ ಮಾಲಿನ್ಯ ತಡೆಗಟ್ಟಲು ಮತ್ತು ಆ ಬಗ್ಗೆ ಜಾಗೃತಿ ಮೂಡಿಸಲೇಬೇಕಾಗಿದ್ದು ಇಂದಿನ ಅನಿವಾರ್ಯತೆಯಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ ಬಗ್ಗೆ ಸ್ಮರಿಸಿಕೊಳ್ಳಬೇಕಾಗಿದ್ದು, ಅವುಗಳನ್ನು ಸಂರಕ್ಷಿಸುವ ಬಹುದೊಡ್ಡ ಹೊಣೆಗಾರಿಯೂ ನಮ್ಮ ಮೇಲಿದೆ.

ವಿಶ್ವ ಸಾಗರ ದಿನವನ್ನು ಮೊದಲಿಗೆ 1992ರಲ್ಲಿ ಹಲವು ದೇಶಗಳ ಎನ್‌.ಜಿ.ಒ. ಹಾಗೂ ಸಂಘ ಸಂಸ್ಥೆಗಳ ಮುಖಾಂತರ ಅನಧಿಕೃತವಾಗಿ ಆಚರಿಸಲಾಯಿತು. ಅನಂತರ ವಿಶ್ವದಾದ್ಯಂತ ಸುಮಾರು 2,000 ಸಂಸ್ಥೆಗಳು ವಿಶ್ವ ಸಾಗರ ದಿನವನ್ನು ಪ್ರಚಾರ ಪಡಿಸುವ ಮೂಲಕ ವಿಶ್ವ ಸಂಸ್ಥೆಯ ಮನ್ನಣೆ ಪಡೆಯುವುದಕ್ಕೋಸ್ಕರ ಮೂರು ವರ್ಷಗಳ ಕಾಲ ಬೇಡಿಕೆ ಚಳುವಳಿಯ ರೀತಿಯಲ್ಲಿ ಈ ದಿನವನ್ನು ಆಚರಿಸಿದರು. ಇದರ ಫ‌ಲವಾಗಿ ವಿಶ್ವ ಸಂಸ್ಥೆ 2008ರಂದು ಇದಕ್ಕೆ ಅಂಗೀಕಾರವನ್ನಿಟ್ಟು ಜೂ. 8ರಂದು ವಿಶ್ವ ಸಾಗರ ದಿನವನ್ನಾಗಿ ಎಲ್ಲ ದೇಶಗಳಲ್ಲಿ ಆಚರಿಸುವ ಮೂಲಕ ಸಾಗರ ಸಂರಕ್ಷಣೆ ಕಾರ್ಯವನ್ನು ಮಾಡಲಾಗುತ್ತಿದೆ. ಈ ವರ್ಷ “ಸುಸ್ಥಿರ ಸಾಗರಕ್ಕೆ ಆವಿಷ್ಕಾರ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಳ್ಳಲಾಗಿದೆ.

ಇದು ಭೂಮಿ ಮತ್ತು ಸಮುದ್ರದ ಬ್ರಾತೃತ್ವ
ಸುಸ್ಥಿರ ಅಭಿವೃದ್ಧಿಗಾಗಿ ಸಮುದ್ರವನ್ನು, ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಸುಸ್ಥಿರವಾಗಿ ಅದನ್ನು ಬಳಕೆ ಮಾಡುವುದು ವಿಶ್ವಸಂಸ್ಥೆಯ 2030ರ ಅಜೆಂಡಾದ ಸುಸ್ಥಿರ ಅಭಿವೃದ್ಧಿ ಕಾರ್ಯಗಳ ಗುರಿಗಳಲ್ಲಿ ಒಂದಾಗಿದೆ. ಸಾಗರಗಳು ಭೂಮಿಯ ಮೇಲ್ಮೈಯ ಮುಕ್ಕಾಲು ಭಾಗ ಅಂದರೆ ಶೇ. 75ರಷ್ಟನ್ನು ಒಳಗೊಂಡಿದೆ. ಭೂಮಿಯ ನೀರಿನ ಶೇ. 97ರಷ್ಟು ಭಾಗವನ್ನು ಇದು ಹೊಂದಿದೆ ಮತ್ತು ಭೂಮಿಯ ಮೇಲೆ ವಾಸಿಸುವ ಶೇ.99 ರಷ್ಟು ಜಾಗವನ್ನು ಪ್ರತಿನಿಧಿಸುತ್ತವೆ. ಫೈಟೊಪ್ಲಾಂಕ್ಟನ್‌, ಹವಳದ ಬಂಡೆಗಳು ಮತ್ತು ಇತರ ಲಕ್ಷಾಂತರ ಸಮುದ್ರ ಸಸ್ಯಗಳು ಒಟ್ಟಾರೆ ಆಮ್ಲಜನಕದ ಶೇ. 50ರಷ್ಟನ್ನು ಒದಗಿಸುತ್ತದೆ.

ಮನುಷ್ಯನೊಂದಿಗಿನ ಅದರ ಸಂಬಂಧ
ಸಾಗರಗಳು ಮನುಷ್ಯರು ಉತ್ಪಾದಿಸುವ ಸುಮಾರು ಶೇ.30ರಷ್ಟು ಕಾರ್ಬನ್‌ ಡೈಆಕ್ಸೈಡ್‌ ಅನ್ನು ಹೀರಿಕೊಳ್ಳುತ್ತವೆ ಎಂಬುದು ವಿಶೇಷ. ಜಾಗತಿಕ ತಾಪಮಾನ ಏರಿಕೆಯ ಪ್ರಭಾವವನ್ನು ಕುಗ್ಗಿಸುತ್ತದೆ. 2.6 ಶತಕೋಟಿ ಜನರು ತಮ್ಮ ಪ್ರಾಥಮಿಕ ಪ್ರೋಟೀನ್‌ಗಾಗಿ ಸಮುದ್ರಗಳನ್ನು ಮೂಲವಾಗಿ ಅವಲಂಬಿಸಿರುತ್ತಾರೆ. ಸಾಗರ ಮೀನುಗಾರಿಕೆ ನೇರವಾಗಿ ಅಥವಾ ಪರೋಕ್ಷವಾಗಿ 200 ಮಿಲಿಯನ್‌ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ ಎಂಬುದು ಗಮನಾರ್ಹವಾದುದು. ಮಾತ್ರವಲ್ಲದೇ ಸಾಗರದ ಹೆಚ್ಚುಗಾರಿಕೆಯೂ ಹೌದು.

ಅಪಾಯದಲ್ಲಿದ್ದಾಳೆ ಅವಳು
ಆದರೆ ಇಂದು ನಮ್ಮ ಭೌಗೋಳಿಕ ವ್ಯವಸ್ಥೆಯನ್ನು ನಾವು ಚೆನ್ನಾಗಿ ಇಟ್ಟುಕೊಂಡಿಲ್ಲ. ಸಾಗರವನ್ನು ನಾವು ಅವಲಂಬಿಸಿದ್ದೇವೆ. ಆದರೆ ಅದನ್ನು ಮುಂದಿನ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾನೆ. ಇಂದು ಪ್ಲಾಸ್ಟಿಕ್‌ ಮಾಲಿನ್ಯ ಸಮುದ್ರಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯವನ್ನು ತಂದೊಡ್ಡಿದೆ. ಪ್ರತಿ ವರ್ಷ 13 ಮಿಲಿಯನ್‌ ಟನ್‌ ಪ್ಲಾಸ್ಟಿಕ್‌ ಸಮುದ್ರವನ್ನು ಸೇರುತ್ತಿದೆ ಎಂಬ ವರದಿಗಳನ್ನು ಪದೇ ಪದೇ ನಮ್ಮನ್ನು ಎಚ್ಚರಿಸುತ್ತಿದೆ. ಆದರೆ ಇದರಿಂದ ನಾವು ಪಾಠ ಕಲಿತಂತೆ ಕಾಣುತ್ತಿಲ್ಲ. ಇದರಿಂದ 1 ಲಕ್ಷ ಸಮುದ್ರ ಜೀವಿಗಳು ವಾರ್ಷಿಕವಾಗಿ ಸಾಯುತ್ತಿವೆ. ಮನುಷ್ಯನು ಆರೋಗ್ಯವಾಗಿರಬೇಕಾದರೆ ಭೂಮಿ ಸೇರಿದಂತೆ ನಮ್ಮ ಎಲ್ಲಾ ಜೈವಿಕ ವ್ಯವಸ್ಥೆಗಳು ಆರೋಗ್ಯವಾಗಿರಬೇಕು ಎಂಬ ಅರಿವು ನಮಗಿರಲೇ ಬೇಕು.

ಗ್ಲೋಬಲ್‌ ವಾರ್ಮಿಂಗ್‌ ಮತ್ತು ಸಾಗರ
ಸಮುದ್ರವು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸಹಾಯದಿಂದ, ಭೂಮಿಯ ಮೇಲಿನ ಹವಾಮಾನವು ನಿಯಂತ್ರಣಗೊಳ್ಳುತ್ತದೆ. ಸಾಗರ ಇಂಗಾಲ ಡೈಆಕ್ಸೆçಡ್‌ ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕವನ್ನು ನಮಗೆ ಒದಗಿಸುತ್ತದೆ. ವಿಶ್ವ ಸಾಗರ ದಿನವು ಪರಿಸರ ವಿಜ್ಞಾನದ ಅರ್ಥವನ್ನು ಹೊಂದಿದೆ. ಸಮುದ್ರವು ಜೈವಿಕ ಸಮತೋಲನವನ್ನು ಬೆಂಬಲಿಸುವ ವಿಶಿಷ್ಟವಾದ ಪರಿಸರ ವ್ಯವಸ್ಥೆ ಇದಾಗಿದೆ. ಆದರೆ ಮಾನವ ಹಸ್ತಕ್ಷೇಪವು ಈ ಸಮತೋಲನವು ನಿರಂತರವಾಗಿ ಉಲ್ಲಂಘನೆಯಾಗಿದೆ ಎಂಬುದೂ ಅಷ್ಟೇ ಸತ್ಯ.

ಮಾನವ ಸ್ನೇಹಿ ಸಮುದ್ರ
ಒಂದರ್ಥದಲ್ಲಿ ನೋಡಿದರೆ ಪ್ರಕೃತಿ ಎಂಬುದು ಮಾನವ ಸ್ನೇಹಿ. ಇಲ್ಲಿನ ಎಲ್ಲಾ ವ್ಯವಸ್ಥೆಗಳೂ ಮಾನವನ ಜೀವನೊಂದಿಗೆ ನಿಕಟವಾಗ ಸಂಪರ್ಕವನ್ನು ಹೊಂದಿದೆ. ಹಸಿರುಮನೆ ಅನಿಲಗಳೊಂದಿಗಿನ ವಾತಾವರಣದ ಮಾಲಿನ್ಯದ ಸಮಸ್ಯೆ ಇಂದು ತೀರಾ ತೀಕ್ಷ್ಣವಾಗಿದೆ. ಭೂಮಿಯ ಮೇಲೆ ಕುಡಿಯುವ ನೀರಿನ ಪ್ರಮಾಣ ಮತ್ತು ಅದರ ಗುಣಮಟ್ಟವು ಕ್ಷೀಣಿಸುತ್ತಿದೆ.

ಸ್ವತ್ಛತೆ ಆದ್ಯತೆಯಾಗಲಿ
ಸ್ವತ್ಛ ಕಡಲು ನಮ್ಮೆಲ್ಲರ ಆದ್ಯತೆಯಾಗಬೇಕು. ಕಡಲಿನ ದಡವೂ ಸ್ವತ್ಛವಾಗಬೇಕು. ಕಡಲಿನಲ್ಲಿ ಸಂಚರಿಸುವ ಮೀನುಗಾರಿಕಾ ದೋಣಿಗಳು, ಹಡಗುಗಳು ಸಮುದ್ರ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ನೀರಿನಲ್ಲಿ ಮುಳುಗುವ ದೋಣಿ, ಹಡಗು ತೆರವು ಮಾಡುವುದೂ ಅಷ್ಟೇ ಮುಖ್ಯವಾಗಿದೆ. ತಿಂಡಿ   ತಿನಿಸು ತಿಂದು ಸಮುದ್ರ ದಡದಲ್ಲಿ ಹಾಕಿ ಹೋಗುವ ಕೃತ್ಯಗಳಿಗೆ ಮೊದಲು ಕಡಿವಾಣ ಬೀಳಬೇಕಿದೆ. ಬೀಚ್‌ ಗಳನ್ನು ಸ್ವತ್ಛವಾಗಿಡುವ ಮೂಲಕ ಸಾಗರವನ್ನು ನಾವೇ ಸ್ವತ್ಛವಾಗಿಡಬಹುದು.

ಪ್ರವಾಸೋದ್ಯಮದ ಹೆಬ್ಟಾಗಿಲು
ಸಮುದ್ರ ತೀರಗಳು ಪ್ರವಾಸೋದ್ಯಮದ ಮುಖ್ಯ ತಾಣಗಳು. ನಾನಾ ಭಾಗಗಳಿಂದ ಜನರು ಇಲ್ಲಿ ಬಂದು ಇಳಿ ಸಂಜೆಯನ್ನು ಆಸ್ವಾಧಿಸುವುದಿದೆ. ತಾಸುಗಟ್ಟಲೆ ಸಮುದ್ರ ತೀರದಲ್ಲಿ ಕಾಲ ಕಳೆಯುವ ಜನರು ಸ್ಥಳೀಯ ಆರ್ಥಿಕತೆಗಳಿಗೆ ಪುಷ್ಠಿ ನೀಡುತ್ತಾರೆ. ನಮ್ಮ ಸಾಗರಗಳು, ನಮ್ಮ ಬೀಜ್‌ಗಳು ಶುದ್ಧವಾಗಿ ಇರದೇ ಇದ್ದರೆ ಪ್ರವಾಸಿಗರ ಭೇಟಿಯೂ ಕಡಿಮೆಯಾಗುತ್ತದೆ. ಹೀಗಾಗಿ, ವಿಶ್ವ ಸಾಗರ ದಿನವನ್ನು ಆಚರಿಸುವುದು, ಮಾನವಕುಲವು ಪ್ರಕೃತಿ, ಸಮುದ್ರ ಜೀವನ ಮತ್ತು ಪ್ರಾಣಿಗಳನ್ನು ರಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ಸಾಗರವನ್ನು ಮಲೀನದಿಂದ ರಕ್ಷಿಸುವ ಸಂಕಲ್ಪವನ್ನು ನಾವೆಲ್ಲರೂ ಕೈಗೊಳ್ಳೋಣ.

- ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.