ನ.4ಕ್ಕೆ ರಿಲೀಸ್: ಬನಾರಸ್ ಸಿನಿಮಾದ ವಿತರಣೆ ಹಕ್ಕು ಪನೋರಮಾ ಸ್ಟುಡಿಯೋ ತೆಕ್ಕೆಗೆ
ಬನಾರಸ್ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡಲಿದೆ.
Team Udayavani, Oct 10, 2022, 1:15 PM IST
ಬೆಂಗಳೂರು: ಸಾಮಾನ್ಯವಾಗಿ ಹಾಡುಗಳು ಹಾಗೂ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಚಿತ್ರ ಸಹ ದೊಡ್ಡ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಬನಾರಸ್ ಸಿನಿಮಾದ ವಿಚಾರದಲ್ಲಿ ಅದು ನಿಜವಾಗುವ ಲಕ್ಷಣಗಳು ದಟ್ಟವಾಗಿವೆ. ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಬನಾರಸ್ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಸಿನಿರಸಿಕರ ಮೆಚ್ಚುಗೆ ಗಳಿಸಿದೆ. ಸಣ್ಣ ಝಲಕ್ ಮೂಲಕ ನಿರೀಕ್ಷೆ ಗರಿಗೆದರುವಂತೆ ಮಾಡಿರುವ ಈ ಚಿತ್ರ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇದೆ. ಈ ನಿಟ್ಟಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಡವರಂತೆ ಬನಾರಸ್ ಟೀಂ ರಾಜ್ಯ ರಾಜ್ಯ ಸುತ್ತಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ಇದನ್ನೂ ಓದಿ:ರಾಜ ರಾಜ ಚೋಳ ದ್ರಾವಿಡ ಅರಸನಾಗಲು ಹೇಗೆ ಸಾಧ್ಯ?ಕಮಲ ಹಾಸನ್ ಗೆ ಸಂತೋಷ್ ತಿರುಗೇಟು
ವಿತರಣೆ ಹಕ್ಕಿನ ವಿಚಾರವಾಗಿ ಭಾರೀ ಸದ್ದು ಮಾಡ್ತಿರುವ ಬನಾರಸ್ ಚಿತ್ರದ ಕೇರಳ ಹಾಗೂ ಕರುನಾಡಿನ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಹೀಗಾಗಿ ಸಹಜವಾಗಿ ಉತ್ತರ ಭಾರತದ ವಿತರಣೆ ಹಕ್ಕನ್ನು ಯಾವ ಸಂಸ್ಥೆ ತನ್ನದಾಗಿಸಿಕೊಳ್ಳಲಿದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಲ್ಲಿತ್ತು. ಅದಕ್ಕೀಗ ಉತ್ತರ ದೊರೆತಿದೆ. ಬನಾರಸ್ ಚಿತ್ರದ ಉತ್ತರ ಭಾರತದ ಹಕ್ಕನ್ನು ಖ್ಯಾತ ವಿತರಣೆ ಸಂಸ್ಥೆ ಪನೋರಮಾ ಸ್ಟುಡಿಯೋ ಖರೀದಿ ಮಾಡಿದೆ.
ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಈ ಸಂಸ್ಥೆಯ ಪಾಲುದಾರರಾಗಿರುವುದು ಬನಾರಸ್ ಗೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ. ಇದು ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಲು ಕಾರಣವಾಗಿದೆ. ಉತ್ತರ ಭಾರತದಲ್ಲಿ ಬನಾರಸ್ ಸಿನಿಮಾವನ್ನು ಎಲ್ಲೆಡೆ ಪಸರಿಸುವ ಕೆಲಸವನ್ನು ಪನೋರಮಾ ಸ್ಟುಡಿಯೋಸ್ ವ್ಯವಸ್ಥಿತವಾಗಿ ಮಾಡಲು ಅಣಿಯಾಗ್ತಿದೆ.
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬನಾರಸ್’ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂಲಕ ಕನ್ನಡದ ಕೀರ್ತಿಪತಾಕೆ ರಾಷ್ಟ್ರಮಟ್ಟದಲ್ಲಿ ಹಾರುತ್ತಿದೆ. ಬನಾರಸ್ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡಲಿದೆ. ತಿಲಕ್ ರಾಜ್ ಬಲ್ಲಾಳ್ ಪ್ರೀತಿಯಿಂದ, ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದರೊಳಗಿನ ಕಥೆ ಎಷ್ಟು ಕಾಡಲಿದೆಯೋ, ಚಿತ್ರ ತನ್ನ ಅದ್ದೂರಿತನದಿಂದ ಸಹ ಗಮನಸೆಳೆಯಲಿದೆ. ಇದೊಂದು ವಿಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದೆ.
ಝೈದ್ ಖಾನ್ ಹಾಗೂ ಸೋನಲ್ ಮೊಂಥೆರೋ ನಾಯಕ, ನಾಯಕಿಯಾಗಿ ನಟಿಸಿದ್ದು, ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಚಿತ್ರದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ , ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ನವೆಂಬರ್ 4ರಂದು ಬನಾರಸ್ ಸಿನಿಮಾ ಪಂಚ ಭಾಷೆಯಲ್ಲಿ ದೇಶ-ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.