Mangaluru: ಅಲ್ಲಲ್ಲಿ ನೀರು ನಿಂತು ಡೆಂಗ್ಯೂ ಏರಿಕೆ ಆತಂಕ !
ನಿರ್ಮಾಣ ಹಂತದ ಕಟ್ಟಡ, ಖಾಲಿಜಾಗಗಳು ಆಗದಿರಲಿ ಸೊಳ್ಳೆ ಉತ್ಪಾದನ ತಾಣ
Team Udayavani, Aug 8, 2024, 2:50 PM IST
ಮಹಾನಗರ: ನಗರದಲ್ಲಿ ಡೆಂಗ್ಯೂ ಪ್ರಕರಣ ಆತಂಕ ಸೃಷ್ಟಿಸುತ್ತಿದೆ. ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳು ನಗರದ ವಿವಿಧ ಕಡೆಗಳಲ್ಲಿ ಅಧಿಕವಾಗುತ್ತಲೇ ಇದೆ.
ಡೆಂಗ್ಯೂ ಹರ ಡುವ ಈಡಿಸ್ ಸೊಳ್ಳೆ ಸ್ವತ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. 2 ದಿನಗಳಿಂದ ಮಳೆ ಕೂಡ ಬಿಡುವು ನೀಡಿ ಆಗಾಗ್ಗೆ ಬಿಟ್ಟು ಬಿಟ್ಟು ಸುರಿ ಯುತ್ತಿದೆ. ಇದೀಗ ಸೊಳ್ಳೆ ಉತ್ಪತ್ತಿಗೆ ಅನುಕೂಲಕರವಾದ ವಾತಾ ವರಣ ನಗರದಲ್ಲಿದೆ. ಈ ನಡುವೆ ನಗರದ ಅಲ್ಲಲ್ಲಿ ನೀರು ನಿಂತಿರುವುದು ಡೆಂಗ್ಯೂ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ಪಾಲಿಕೆ ಗಮನಕ್ಕೆ ತರಬೇಕು ಎಂದು ಪಾಲಿಕೆ ಹೇಳಿ ವಾರ ಕಳೆದಿದೆ. ಆದರೆ, ಸರಕಾರಿ ಕಚೇರಿ, ಕಾಮಗಾರಿ ಸ್ಥಳದಲ್ಲಿ ನೀರು ನಿಂತಿದ್ದು, ಅವರಿಗೆ ದಂಡ ಹಾಕುವವರು ಯಾರು? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಈ ಮಧ್ಯೆ ಹಂಪನಕಟ್ಟೆ ಹಳೆ ಬಸ್ ನಿಲ್ದಾಣ ಬಳಿ ನಡೆಯುತ್ತಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಪ್ರದೇಶವೂ ಈಗ ಮಳೆ ನೀರು ನಿಂತು ಕೆರೆಯಂತಾಗಿದೆ. ಪಿಪಿಪಿ ಮಾದರಿಯಲ್ಲಿ 1.55 ಎಕರೆ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಈ ಹಿಂದೆ ಭೂಕುಸಿತ ಉಂಟಾಗುವ ಭೀತಿ ಇತ್ತು. ಇದೀಗ ಗೋಣಿ ಚೀಲ ಇಡಲಾ ಗಿದೆ. ಕಾಮಗಾರಿ ಉದ್ದೇಶಕ್ಕೆ ಗುಂಡಿ ಮಾಡಲಾಗಿದ್ದು, ನೀರು ತುಂಬಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಭಾರೀ ಮಳೆಯಾ ದರೆ ರೈಲು ನಿಲ್ದಾಣದ ಮುಂಭಾಗವೂ ನೀರು ಸರಾಗ ವಾಗಿ ಹರಿಯುತ್ತಿಲ್ಲ. ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ದಕ್ಕೆಯ ವಸತಿ ರಹಿತರ ಆಶ್ರಯ ಕೇಂದ್ರದ ಮುಂಭಾಗವೂ ಇದೇ ಸ್ಥಿತಿಯಿದೆ. ಇನ್ನು, ಪಾಲಿಕೆಯ ಪ್ರವೇಶ ದ್ವಾರ, ವಿವಿಧ ಮಾರು ಕಟ್ಟೆಯಲ್ಲಿಯೂ ನೀರು ನಿಲ್ಲುತ್ತಿದೆ.
ಸೊಳ್ಳೆ ನಿರ್ಮೂಲನ ದಿನ
ದ. ಕ. ಜಿಲ್ಲೆಗೆ ಹೋಲಿಸಿದರೆ ಮಂಗಳೂರು ನಗರ ದಲ್ಲಿಯೇ ಡೆಂಗ್ಯೂ ಆತಂಕ ಹೆಚ್ಚಿದೆ. ಡೆಂಗ್ಯೂ ಜ್ವರ ನಿಯಂತ್ರ ಣಕ್ಕೆ ಪ್ರತೀ ಶುಕ್ರವಾರ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯಜಿಲ್ಲೆಯಾದ್ಯಂತ ನಡೆಯುತ್ತಿದೆ. ಸಾರ್ವ ಜನಿಕರು ತಮ್ಮ ಮನೆಗಳು, ಸರಕಾರಿ ಕಚೇರಿ, ಶಾಲಾ- ಕಾಲೇಜು ಗಳಲ್ಲಿ ಸಿಬಂದಿ ವರ್ಗದವರು ನೀರು ತುಂಬಿರುವ ಡ್ರಮ್, ಟ್ಯಾಂಕಿ, ಬ್ಯಾರಲ್ ಇತ್ಯಾದಿಗಳನ್ನು ಸ್ವತ್ಛಗೊಳಿಸಬೇಕು. ಅದೇ ರೀತಿ ಮಳೆ ನೀರು ನಿಲ್ಲುವ ತೊಟ್ಟಿ, ಹಳೆ ಟಯರ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಇದರಿಂದ ಸೊಳ್ಳೆಗಳ ಉತ್ಪತ್ತಿ ತಾಣ ನಾಶವಾಗಿ ಡೆಂಗ್ಯೂ ಜ್ವರವನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.