ವುಹಾನ್: ಲಾಕ್‌ಡೌನ್ ತೆರವಾದರೂ ರಸ್ತೆಯಲ್ಲಿ ಜನರಿಲ್ಲ
Team Udayavani, May 1, 2020, 12:05 PM IST
ಶಾಂಘೈ: ಪ್ರಪಂಚದಾದ್ಯಂತ ಜನರು ಕೋವಿಡ್-19 ಸಾಂಕ್ರಾಮಿಕ ತುಂಬಾ ಬಳಲಿದ್ದಾರೆ. ಸಾಮಾನ್ಯ ಜೀವನಕ್ಕೆ ಮರಳಲು ಜನರು ತುಂಬಾ ಉತ್ಸುಕರಾಗಿದ್ದಾರೆ. ಸರಕಾರದ ಲಾಕ್‌ಡೌನ್ ಹಿಂಪಡೆಯಲು ಕಾಯುತ್ತಿದ್ದಾರೆ. ಆದರೆ ಚೀನದಲ್ಲಿ ಲಾಕ್‌ಡೌನ್ ತೆರವಾದರೂ ರಸ್ತೆಯಲ್ಲಿ ಜನರಿಲ್ಲ.
ಕೋವಿಡ್ ಉಗಮ ಸ್ಥಾನ ಚೀನದ ವುಹಾನ್‌ನಲ್ಲಿ ಎಪ್ರಿಲ್ ಮೊದಲ ವಾರದಲ್ಲೇ ಲಾಕ್‌ಡೌನ್‌ಗಳನ್ನು ಸಡಿಲಿಸಲಾಗಿದೆ. ವುಹಾನ್‌ನಿಂದ ಹೊರಹೋಗುವ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಲಾಗಿದೆ. 76 ದಿನಗಳ ಲಾಕ್‌ಡೌನ್‌ನಲ್ಲಿದ್ದ ನಗರ ಯಥಾಸ್ಥಿತಿಗೆ ಇನ್ನೂ ಬಂದಿಲ್ಲ. ಲಾಕ್‌ಡೌನ್ ತೆರವಾಗಿದ್ದರೂ, ಜನರು ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಜಗತ್ತಿನ ಇತರ ಕಡೆಗಳಲ್ಲಿ ಲಾಕ್‌ಡೌನ್ ತೆರವಿಗಾಗಿ ಕಾಯುತ್ತಿದ್ದರೂ ವುಹಾನ್‌ನ ನಿವಾಸಿಗಳು ಮತ್ತು ಸ್ಥಳೀಯ ವ್ಯಾಪಾರಿಗಳು ನಿಧಾನವಾಗಿ ನಗರದತ್ತ ಬರುತ್ತಿದ್ದಾರೆ.
ಅನೇಕ ಮಳಿಗೆಗಳು ಇನ್ನೂ ಮುಚ್ಚಲ್ಪಟ್ಟಿವೆ. ರೆಸ್ಟೋರೆಂಟ್‌ಗಳು ಈಗಲೂ ಟೇಕ್‌ಅವೇಗೆ ಸೀಮಿತ. ಜನರು ನಗರಗಳಿಗೆ ಹೀಗುವ ಸಂದರ್ಭ ಸುರಕ್ಷಾ ಸಾಧನಗಳನ್ನು ಧರಿಸುತ್ತಿದ್ದಾರೆ ಮಾತ್ರವಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ.
ವುಹಾನ್ ಈಗ ಸಂಪೂರ್ಣ ತೆರೆದುಕೊಂಡಿಲ್ಲ. ತಜ್ಞರ ಪ್ರಕಾರ ನಗರದ ಆರ್ಥಿಕತೆಯು ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗಬಹುದು. ಏಕೆಂದರೆ ಬಹಳಷ್ಟು ಜನರು ಮನೆಯಿಂದ ಹೊರಬರಲು ಇನ್ನೂ ಹಿಂಜರಿಯುತ್ತಿದ್ದಾರೆ. 11 ಮಿಲಿಯನ್‌ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ವುಹಾನ್ ಹೊಂದಿದೆ.
ಆನ್‌ಲೈನ್‌ನ ಆಶ್ರಯ
ಲಾಕ್‌ಡೌನ್ ಮುಗಿದ ಅನಂತರವೂ ಸ್ಥಳೀಯರು ಆನ್‌ಲೈನ್ ಸೇವೆಯನ್ನೇ ಆಶ್ರಯಿಸಿದ್ದಾರೆ. ಫಿಟೆ°ಸ್ ಕೇಂದ್ರಗಳು ಮತ್ತು ಚಿತ್ರಮಂದಿರಗಳು ತೆರೆದಿಲ್ಲ. ತೆರೆಯಲಾಗಿರುವ ಹೆಚ್ಚಿನ ಮಳಿಗೆಗಳು ತಮ್ಮ ವ್ಯವಹಾರ ಮಾದರಿಗಳನ್ನು ಬದಲಾಯಿಸಿವೆ. ಬಹುತೇಕ ಆಹಾರ ತಯಾರಿಕ ಕೇಂದ್ರಗಳು ಪಾರ್ಸೆಲ್ ಅನ್ನು ಮಾತ್ರ ನೀಡುತ್ತಿವೆ. ಸ್ಟಾರ್ಬರ್ಕ್ಸ್, ಮೆಕೊxನಾಲ್ಡ್$Õ, ಬರ್ಗರ್‌ಕಿಂಗ್, ಕೆಎಫ್ಸಿ ಮತ್ತು ಪಿಜ್ಜಾ ಹಟ್‌ಗಳಲ್ಲಿ ಗ್ರಾಹಕರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ.
ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್‌ನಲ್ಲಿನ ಆರ್ಥಿಕತೆಗೆ ವೇಗ ಲಭಿಸಿದರೆ ಇತರ ದೇಶಗಳಿಗೂ ಅದರಿಂದ ಲಾಭವಾಗಲಿದೆ. ಏಕೆಂದರೆ ವುಹಾನ್ ಕೈಗಾರಿಕೆ, ಉದ್ಯಮ ಚಟುವಟಿಕೆಗಳ ಕೇಂದ್ರ ಸ್ಥಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.