ವುಹಾನ್ ಮಾರುಕಟ್ಟೆ ಮೇಲೆ ಅನುಮಾನದ ಹುತ್ತ
Team Udayavani, May 9, 2020, 12:54 PM IST
ಮಣಿಪಾಲ: ಕೋವಿಡ್ ವೈರಸ್ ಹರಡುವಲ್ಲಿ ಚೀನದ ವುಹಾನ್ ನಗರದ ಸಗಟು ಮಾರುಕಟ್ಟೆಯ ಪಾತ್ರ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ವೈರಸ್ ಹರಡುವಲ್ಲಿ ಈ ಮಾರುಕಟ್ಟೆ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆ ಇದೆ. ವೈರಸ್ ಹರಡಲು ಮಾರುಕಟ್ಟೆ ಮೂಲವೇ ಕಾರಣವಾಗಿರಬಹುದು. ಈ ಕುರಿತಂತೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕಳೆದ ಜನವರಿಯಲ್ಲಿ ವುಹಾನ್‌ನಲ್ಲಿ ಕೋವಿಡ್ ಪ್ರಕರಣ ಹೆಚ್ಚಾದ ಕಾರಣ ಚೀನ ಸರಕಾರ ಆ ಮಾರುಕಟ್ಟೆಯನ್ನು ಮುಚ್ಚುವ ಮೂಲಕ ವೈರಸ್ ಹರಡುವ ವೇಗಕ್ಕೆ ಕಡಿವಾಣ ಹಾಕಿತ್ತು. ವನ್ಯಜೀವಿ ಮಾಂಸ ಮಾರಾಟ ಮತ್ತು ಖರೀದಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಚೀನದ ಈ ಮಾರುಕಟ್ಟೆಯ ಪಾತ್ರವಿದೆಯೆಂಬ ಆರೋಪಕ್ಕೆ ಇದೀಗ ಜೀವ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಇಂಥದೊಂದು ಅನುಮಾನ ವ್ಯಕ್ತಪಡಿಸಿರುವುದು ಆ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.
ಜೀವಂತ ಪ್ರಾಣಿಗಳಿಂದ ಅಥವಾ ವ್ಯಾಪಾರಿಗಳು, ಅಂಗಡಿಗಳವರಿಂದ ವೈರಸ್ ಬಂದ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ. ಈ ಹಿಂದೆ ಕೋವಿಡ್ ವೈರಸ್ ವುಹಾನ್‌ನ ಪ್ರಯೋಗಾಲಯದಿಂದಲೇ ಹರಡಿದೆ ಎಂಬುದಕ್ಕೆ ಮಹತ್ವದ ಪುರಾವೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಬಾರಿ ಪುನರುಚ್ಚರಿಸಿದ್ದರು. ಆದರೆ ತಮ್ಮ ಅರೋಪಕ್ಕೆ ಸರಿಯಾಗಿ ವಿಶ್ವಸಂಸ್ಥೆಗೆ ಅವರು ಸಾಕ್ಷಿ ನೀಡಲು ವಿಫಲರಾಗಿದ್ದರು.
ವುಹಾನ್‌ನಲ್ಲಿರುವ ಈ ಮಾಂಸ ಮಾರುಕಟ್ಟೆಯಲ್ಲಿ ಮುಳ್ಳುಹಂದಿಗಳು ಮತ್ತು ಜಿಂಕೆಗಳಂತಹ ಕಾಡು ಪ್ರಾಣಿಗಳನ್ನು ಆಹಾರ ಮತ್ತು ಔಷಧಕ್ಕಾಗಿ ಮಾರಲಾಗುತ್ತಿತ್ತು. ಈ ವೆಟ್ ಮಾರ್ಕೆಟ್‌ಗಳಲ್ಲಿ ಪ್ರಾಣಿಗಳನ್ನೂ ತರಕಾರಿಗಳು, ಧಾನ್ಯ ಹಾಗೂ ಇತರೆ ಗೃಹೋಪಯೋಗಿ ಉತ್ಪನ್ನಗಳೊಂದಿಗೆ ಮಾರಲಾಗುತ್ತದೆ. ಜೀವಂತ ಪ್ರಾಣಿಗಳನ್ನು ಮಾರುವುದೇ ಇಲ್ಲಿಯ ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.