![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 23, 2024, 1:09 AM IST
ಕೋಟ: ಟ್ರಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ನಡೆದು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಯಡ್ತಾಡಿ ಸೇತುವೆ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಬಿದ್ಕಲ್‌ಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಿಸುತ್ತಿದ್ದ ಟ್ರಕ್ ಹಾಗೂ ಬ್ರಹ್ಮಾವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಚಲಿಸುತ್ತಿದ್ದ ಟ್ರಕ್ ನಡುವೆ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಸಂಭವಿಸಿದ್ದು, ಟ್ರಕ್‌ಗಳು ಜಖಂಗೊಂಡಿವೆ. ಚಾಲಕರು ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ.
ಸಂಚಾರ ಅಸ್ತವ್ಯಸ್ತ
ಸೇತುವೆಯ ಮೇಲೆ ಅಪಘಾತ ನಡೆದದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬ್ರಹ್ಮಾವರ-ಸಾೖಬ್ರಕಟ್ಟೆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಸಮಸ್ಯೆಯಾಯಿತು. ಅನಂತರ ಕ್ರೇನ್, ಜೆಸಿಬಿ ಬಳಸಿ ಟ್ರಕ್‌ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಸ್ಥಳೀಯರು ಹಾಗೂ ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದರು.
ಇಕ್ಕಟ್ಟಾದ ರಸ್ತೆ; ಅಧಿಕ ಭಾರದ ವಾಹನ
ಇಲ್ಲಿನ ಸೇತುವೆ ಸಮೀಪ ರಸ್ತೆ ತುಂಬಾ ಇಕ್ಕಟ್ಟಾಗಿದ್ದು, ಹಲವಾರು ಅಪಘಾತಗಳು ಹಿಂದೆ ನಡೆದಿವೆ. ಸೇತುವೆಗಳು ಶಿಥಿಲಗೊಂಡಿರುವುದರಿಂದ ಈ ರಸ್ತೆಯಲ್ಲಿ 20 ಮೆಟ್ರಿಕ್ ಟನ್‌ಗಿಂತ ಅಧಿಕ ಭಾರದ ವಾಹನಗಳು ಸಂಚರಿಸಬಾರದು ಎನ್ನುವ ನಿಷೇಧವಿದೆ. ಆದರೂ ಟೋಲ್ ತಪ್ಪಿಸುವುದು ಮತ್ತಿತರ ಕಾರಣಗಳಿಗಾಗಿ ಟ್ರಕ್‌ಗಳು ನಿಯಮ ಉಲ್ಲಂಘಿಸಿ ಈ ರಸ್ತೆಯನ್ನು ಬಳಸುತ್ತಿವೆ.
You seem to have an Ad Blocker on.
To continue reading, please turn it off or whitelist Udayavani.