ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ
ಪಟ್ಲ ಫೌಂಡೇಶನ್ ಯುಎಸ್‌ಎ ಇದರ ಸಾಧನೆಯ ಹಿರಿಮೆಯಲ್ಲಿ ಮತ್ತೊಂದು ಗರಿ
Team Udayavani, Sep 28, 2024, 1:02 PM IST
ಕಳೆದ 75 ದಿನಗಳಿಂದ ಉತ್ತರ ಅಮೆರಿಕದ ಮೂಲೆಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್‌ನಲ್ಲಿ ಸೆ.22ರಂದು ಯಶಸ್ವಿಯಾಗಿ ಮುಗಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್‌ಎ ಸಂಘಟನೆಯ ನೇತೃತ್ವದಲ್ಲಿ ಈ ಬಾರಿ ಸುಮಾರು 21 ಕಡೆಗಳಲ್ಲಿ ಸಮರೋಪಾದಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದದ್ದು ಒಂದು ದಾಖಲೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್‌ಎ ಅಧ್ಯಕ್ಷರಾದ ಡಾ| ಅರವಿಂದ ಉಪಾಧ್ಯಾಯರು. ಯಕ್ಷಗಾನ ತಂಡದ ಪ್ರಯಾಣ, ಪ್ರದರ್ಶನವನ್ನು ಏರ್ಪಡಿಸಲು ಆಯಾಯ ರಾಜ್ಯದ ಸಂಘಟಕರನ್ನು ಸಂಪರ್ಕಿಸುವುದು, ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸಿವುದು ಹೀಗೆ ಹಲವಾರು ಕೆಲಸಗಳನ್ನು ಬಹಳ ತಾಳ್ಮೆಯಿಂದ ಮಾಡಿದವರಿಗೆ ಧನ್ಯವಾದ ಹೇಳಿದರು ಕಡಿಮೆಯೇ. ಹಾಗೆಯೇ ಫೌಂಡೇಶನ್‌ನ ಇನ್ನಿತರ ಪದಾಧಿಕಾರಿಗಳಿಗೂ ನನ್ನ ಧನ್ಯವಾದಗಳು.
“ಯಕ್ಷಧ್ರುವ ಪಟ್ಲ ಫೌಂಡೇಶನ್’ನ ಪರೋಪಕಾರಿ ಸೇವಾ ಚಟುವಟಿಕೆಗಳನ್ನು ಗಮನಿಸಿ ಫೀನಿಕ್ಸ್ ನಗರದ ಮೇಯರ್ ಜು.27ನ್ನು ಹಾಗೂ ವಿಸ್ಕಾನ್ಸಿನ್ ನಗರದ ಮೇಯರ್ ಆ.18ನ್ನು “ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ’ ಎಂದು ಘೋಷಿಸಿದ್ದು ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್‌ಎ ಇದರ ಸಾಧನೆಯ ಹಿರಿಮೆಯಲ್ಲಿ ಮತ್ತೊಂದು ಗರಿ.
ಈ ವರ್ಷದ ಪ್ರಮುಖ ಪ್ರಸಂಗ “ಶಾಂಭವಿ ವಿಜಯ, ಸುಮಾರು ಹನ್ನೆರಡು ಕಡೆಗಳಲ್ಲಿ ಪ್ರದರ್ಶನಗೊಂಡಿದ್ದು ಕೂಡ ಒಂದು ದಾಖಲೆಯೇ. ಹಲವಾರು ಕಡೆಯಲ್ಲಿ ನಮ್ಮೂರಿನ ಪ್ರೇಕ್ಷಕರಲ್ಲದೇ ಕನ್ನಡ ಗೊತ್ತಿಲ್ಲದ ಬಹಳ ಮಂದಿಯ ಜತೆಗೆ ಅಮೆರಿಕದವರು ಕೂಡ ಯಕ್ಷಗಾನವನ್ನು ನೋಡಿ ಪ್ರಶಂಶಿಸಿದ್ದು ವಿಶೇಷವೇ.
ಸತೀಶ್ ಪಟ್ಲರ ಸಾರಥ್ಯದಲ್ಲಿ ಒಟ್ಟಾರೆಯಾಗಿ ಈ ಬಾರಿಯ ಅಮೆರಿಕದ ತಿರುಗಾಟ ಹಲವಾರು ಸಾಧನೆಯನ್ನು ಮಾಡಿದ್ದೂ ಎಲ್ಲ ಕಲಾವಿದರಿಗೂ, ಫೌಂಡೇಶನ್‌ನ ಪದಾಧಿಕಾರಿಗಳಿಗೂ, ಸಂಘಟಕರಿಗೂ ಮುಖ್ಯವಾಗಿ ನಮ್ಮೂರಿನ ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಸಂದ ಜಯ. ಮುಂಬರುವ ವರ್ಷಗಳಲ್ಲಿ ಇನ್ನೂ ಹಲವಾರು ಗರಿಮೆಗಳನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡವು ಗಳಿಸಲಿ ಎಂದು ಆಶಿಸುತಾ, ಪಟ್ಲರಿಂದ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
*ಪ್ರಶಾಂತ ಕುಮಾರ್ ಮಟ್ಟು, ಮಿಚಿಗನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.