Yakshagana: ಬದಲಾವಣೆ ಜಗದ ನಿಯಮ…

Team Udayavani, Oct 14, 2023, 11:44 PM IST

YAKSHAGANAA

ಯಕ್ಷಗಾನ ಎನ್ನುವುದು ಸರ್ವಾಂಗ ಸುಂದರ ಕಲೆ ಯಾಗಿದೆ. ಅಭಿನಯ, ಮಾತುಗಾರಿಕೆ, ಕುಣಿತ, ಹಾಡು ಗಾರಿಕೆ, ನೃತ್ಯ, ವೇಷಭೂಷಣ, ರಂಗಸಜ್ಜಿಕೆ… ಹೀಗೆ ಅಪಾರ ಅಂತಃಸತ್ವಗಳು ಈ ಕಲೆಯಲ್ಲಿ ಅಂತರ್ಗತವಾಗಿವೆ. ಮನೋರಂಜನ ಮಾಧ್ಯಮಗಳು ಬೆರಳೆಣಿಕೆಯಷ್ಟು ಇದ್ದ ಆ ದಿನಗಳಿಂದ ಹಿಡಿದು, ಎಣಿಕೆಗೆ ಸಿಗದಷ್ಟು ಮನೋರಂಜನ ಮಾಧ್ಯಮಗಳು ಹುಟ್ಟಿಕೊಂಡಿರುವ ಈ ದಿನ ಮಾನಗಳವರೆಗೆ ಯಕ್ಷಗಾನ ಕಲಾ ಮಾಧ್ಯಮ ಹರಿದು ಬಂದ ಪರಿ ಮಾತ್ರ ಬಹಳ ಆಸಕ್ತಿದಾಯಕ. ರಾತ್ರಿ ಬೆಳಗಾಗುವುದರೊಳಗೆ ಹಲವಾರು ಪೌರಾಣಿಕ ಪಾತ್ರಗಳು ಯಕ್ಷಮಂಟಪದಲ್ಲಿ ರಾರಾಜಿಸಿ ಜೀವ, ಜೀವನದ ಮೌಲ್ಯಗಳನ್ನು ಸಾರಿ ಹೋಗುವ ಯಕ್ಷಗಾನ ಕಲೆ ಅನರ್ಘ್ಯ ರತ್ನವಿದ್ದಂತೆ.

ಯಕ್ಷಗಾನದ ಹುಟ್ಟು ಪ್ರಾಚೀನ ಎನ್ನುವುದು ಪ್ರಾಜ್ಞರ ಅಭಿಮ ತವಾಗಿದೆ. ಸಾಂಪ್ರದಾಯಿಕ, ಸುಸಂಸ್ಕೃತ, ಸುಸಂಬದ್ಧವಾದ ಯಕ್ಷಗಾನ ಕಲೆ ಆಧುನಿಕತೆಯ ಬಿರುಗಾಳಿಗೆ ಸಿಕ್ಕಿಯೂ ತನ್ನತನ ವನ್ನು ಎಳ್ಳಿನಿತೂ ಕಳೆದುಕೊಳ್ಳದೆ, ಕಳೆಗುಂದದೆ ಕಂಗೊಳಿಸುತ್ತಿರುವುದು ನಗ್ನ ಸತ್ಯವಾಗಿದೆ.

ಹೊಸತನದಿಂದ ಹೊರತಾಗಿಲ್ಲ ಯಕ್ಷಗಾನ
ಇಂದು ಎಲ್ಲ ಕ್ಷೇತ್ರಗಳಲ್ಲೂ ಹೊಸತನವನ್ನು ಕಾಣಬಹುದು. ಹಾಗೆಯೇ ಯಕ್ಷಗಾನದ ಆಟ ಕೂಟಗಳಲ್ಲಿಯೂ ಒಂದಿಷ್ಟು ಬದಲಾ ವಣೆಗಳಾಗಿವೆ. ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಬದಲಾಗಬೇಕು. ಹೊಸ ಬಗೆಯ ಪ್ರಸಂಗಗಳು, ವಿವಿಧ ರಾಗಗಳ ಬಳಕೆ, ಕುಣಿತದಲ್ಲಿ ನವೀನತೆ, ರಂಗಸಜ್ಜಿಕೆಯಲ್ಲಿನ ವಿಭಿನ್ನತೆ, ಜಗಮಗಿಸುವ ಬೆಳಕಿನಾಟದ ಸುಂದರ ನೋಟ, ಕಾಲಮಿತಿಯ ಕೂಟ…ಹೀಗೆ ಎಲ್ಲದರಲ್ಲೂ ಇಂದು ಹೊಸತನವನ್ನು ಕಾಣಬಹುದಾಗಿದೆ. ಪೌರಾಣಿಕ ಪ್ರಸಂಗಗಳು ಜ್ಞಾನಾಕಾಂಕ್ಷಿಗಳಿಗೆ ಜ್ಞಾನದ ಔತಣವನ್ನು ಉಣಬಡಿಸಿದರೆ, ಹೊಸ ಪ್ರಸಂಗಗಳು, ಕಾಲ್ಪನಿಕ ಕಥೆಗಳನ್ನು ಹೊಸ ಬಗೆಯ ದೃಶ್ಯ ಸಂಯೋಜನೆಗಳಿಂದ ಕಟ್ಟಿಕೊಟ್ಟು ಪ್ರೇಕ್ಷಕರಿಗೆ ರಸದೌತಣ ಉಣಬಡಿಸುತ್ತವೆ.

ಪೌರಾಣಿಕ ಪ್ರಸಂಗಗಳಲ್ಲಿನ ಕಥಾ ನಕಗಳು ಜನ ಜನಿತವಾಗಿರುತ್ತವೆ. ಪೌರಾಣಿಕ ಪ್ರಸಂಗಗಳಿಗೆ ಹೊಸತನಕ್ಕೆ ಒಗ್ಗಿಕೊಳ್ಳುವುದು ಕಷ್ಟವೆನಿಸಬಹುದು. ಇತ್ತೀಚೆಗೆ ಯುವಪೀಳಿಗೆ ಯಕ್ಷಗಾನದ ಆಟ ಕೂಟಗಳನ್ನು ಆಸ್ವಾದಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು. ಯುವ ಜನತೆಗೆ ಹೊಸ ಪ್ರಸಂಗಗಳು ಹೊಸ ಉತ್ಸಾಹ, ಆಸಕ್ತಿ ಮೂಡಿಸುತ್ತವೆ. ಯಕ್ಷಗಾನದ ಚೌಕಟ್ಟಿನ ಪರಿಧಿಯೊಳಗೆ ಪಡಿಮೂಡಿ ಬರುವ ಹೊಸ ಪ್ರಸಂಗಗಳು ಯಕ್ಷಗಾನದ ಬೆಳವಣಿಗೆಗೆ ಬಹಳ ಅಮೂಲ್ಯವಾದ ಕೊಡುಗೆಯನ್ನು ನೀಡುವುದರಲ್ಲಿ ಅನು ಮಾನವಿಲ್ಲ. ಅದೆಷ್ಟೋ ಹೊಸ ಪ್ರಸಂಗಗಳು ರಚಿತವಾಗಿ ಇಂದೂ ಕೂಡ ನಿತ್ಯ ನೂತನವಾಗಿ ಪ್ರದರ್ಶನಗೊಳ್ಳುತ್ತಿರುವುದನ್ನು ನಾವು
ಕಾಣಬಹುದು.

ನೃತ್ಯದಲ್ಲಿ ನಾವೀನ್ಯ ಇದ್ದರೇನು ತಪ್ಪು?
ಕೇವಲ ಸಾಂಪ್ರದಾಯಿಕ ಯಕ್ಷಗಾನೀಯ ಶೈಲಿಯ ಕುಣಿತಗಳನ್ನು ನಾವು ಹಿಂದೆ ರಂಗದಲ್ಲಿ ಕಾಣುತ್ತಿದ್ದೆವು. ಇಂದು ಕಾಲ ಬದಲಾಗಿದೆ. ರಂಗಕ್ಕೆ ಹೊಸಬರ, ಹೊಸ ತನದ ಪ್ರವೇಶವೂ ಆಗಿದೆ. ನವ ಯುವಕರು ತಮ್ಮ ಕುಣಿತಕ್ಕೆ ಬದಲಾವಣೆಯ ಸ್ಪರ್ಶವನ್ನು ನೀಡುತ್ತಿದ್ದಾರೆ. ಅಸಂಬದ್ಧ, ಅರ್ಥವಿಲ್ಲದ ಕುಣಿತದ ಭಂಗಿಗಳನ್ನು ಖಂಡಿಸುವುದರ ಜತೆಗೆ ಸುಸಂಸ್ಕೃತ, ಸುಸಂಬದ್ಧವಾದುದನ್ನು ನಾವು ಮೆಚ್ಚಲೇ ಬೇಕಾಗುತ್ತದೆ. ಹಿರಿಯರಿಗೆ ಸಾಂಪ್ರದಾಯಿಕ ಕುಣಿತಗಳು ಮಾತ್ರ ಮನಕ್ಕೆ ಮುದವನ್ನು ನೀಡಬಹುದು. ಆದರೆ ಇಂದಿನ ನವಪೀಳಿಗೆಯ ಮಂದಿ ಕುಣಿತದಲ್ಲಿಯೂ ಹೊಸತನವನ್ನು ಕಾಣಬಯಸುತ್ತಾರೆ. ಯಕ್ಷಗಾನದ ವ್ಯಾಪ್ತಿಗೆ ಒಳಪಟ್ಟ ನವೀನ ಹಾವಭಾವ, ಕೌಶಲದ ಕುಣಿತವು ಪ್ರದರ್ಶನದ ಮಟ್ಟವನ್ನು ಗಟ್ಟಿಗೊಳಿಸುವುದರಲ್ಲಿ ಅನುಮಾನವಿಲ್ಲ.

ಹೊಸ ರಾಗಗಳ ಬಳಕೆಗೆ ಅಪಸ್ವರ ಏಕೆ?
ಭಾಗವತರೊಬ್ಬರ ಸುಶ್ರಾವ್ಯವಾದ ಸ್ವರವು ವಿವಿಧ ರಾಗಗಳಲ್ಲಿ ನೋಡುಗನ, ಕೇಳುಗನ ಮನವನ್ನು ಮುದಗೊಳಿಸುತ್ತದೆ ಎಂದಾದರೆ ರಾಗ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಸಾಂಪ್ರದಾಯಿಕ ಶೈಲಿಯ ಹಳೆಯ ರಾಗಗಳ ಬಳಕೆಯಿಂದ ಹೊಸ ಪ್ರೇಕ್ಷಕ ವರ್ಗವನ್ನು ನಾವು ಕಳೆದುಕೊಳ್ಳುವ ಪ್ರಮೇಯ ಬರಲೂಬಹುದು. ಹಾಗಾಗಿ ಯಕ್ಷಗಾನಕ್ಕೆ ಒಗ್ಗುವ, ಬಗ್ಗುವ ರಾಗ ಗಳನ್ನು ಪ್ರದರ್ಶನಗಳಲ್ಲಿ ಬಳಸುವುದು ಸಮಂಜಸವೆ ಆಗಿದೆ.

ಕಾಲಮಿತಿ ಪ್ರಯೋಗ ಸೂಕ್ತ
ಬೆಳಕಿನ ಸೇವೆ ಬೆಳಗಿನವರೆಗೆ ನಡೆಯದೆ ಕಾಲಮಿತಿಗೆ ಒಳ ಪಡುವುದು ಉಚಿತವಲ್ಲವೆ? ಇಂದು ಮನುಜ ಯಾಂತ್ರಿಕತೆಯ ಪರಿಣಾಮ ದಿಂದಾಗಿ ಯಂತ್ರ ಮಾನವನಂತಾ ಗಿ¨ªಾನೆ. ಕಾಲದ ಜತೆಗೆ ಕಾಲಿಟ್ಟು ನಡೆ ಯಬೇಕಾದ ಅನಿವಾರ್ಯತೆ ಇಂದು ಎಲ್ಲರಿಗೂ ಇದೆ. ಸಮಯದ ಪರಿಪಾಲನೆ ಎಲ್ಲರ ಜವಾಬ್ದಾರಿಯೂ ಆಗಿದೆ. ಇಡೀ ರಾತ್ರಿ ನಿದ್ದೆಗೆಟ್ಟು ಮರುದಿನದ ಕೆಲಸ ಕಾರ್ಯಗಳನ್ನು ಕಳೆಗುಂದಿಸಿಕೊಳ್ಳಲು ಇಂದು ಯಾರು ತಯಾರಿಲ್ಲ. ಇದರಿಂದ ಕಲಾವಿದರ ಆರೋಗ್ಯದ ಸಮಸ್ಯೆಗಳಿಗೂ ಪರಿಹಾರ ದೊರಕಬಹುದು. ಈಗಾಗಲೇ ಕಾಲ ಮಿತಿಯ ಆಟ ಕೂಟಗಳು ಪ್ರಾರಂಭವಾಗಿ ಯಶಸ್ವಿ ಕೂಡ ಆಗಿವೆ. ಪ್ರೇಕ್ಷಕರನ್ನು ರಂಗದ ಮುಂದೆ ಹಿಡಿದಿಟ್ಟುಕೊಳ್ಳಲು ಕಾಲಮಿತಿ ಪ್ರಯೋಗಗಳು ಸಹಕಾರಿಯಾಗಬಲ್ಲವು.

ಬದಲಾವಣೆಯು ಜಗದ ನಿಯಮವಾಗಿದೆ. ಕಲೆಯೊಂದು ಜೀವಂತವಾಗಿ ಚಲಾವಣೆಯಲ್ಲಿರಬೇಕಾದರೆ ಬದಲಾವಣೆಗೆ ಒಗ್ಗಿಕೊಳ್ಳಬೇಕಾಗುತ್ತದೆ. ಕಲೆಗೆ ಜಡತ್ವ ಒಳ್ಳೆಯದಲ್ಲ. ಬದಲಾವಣೆಯ ಗಾಳಿಗೆ ಮೈ ಒಡ್ಡಿಯೂ ಕಲೆಯೊಂದು ತನ್ನತನವನ್ನು ಉಳಿಸಿಕೊಂಡು ಗಟ್ಟಿಗೊಳ್ಳುತ್ತದೆ ಎಂದರೆ ಆ ಕಲೆಯ ಶ್ರೇಷ್ಠತೆಯನ್ನು ಸಾರುತ್ತದೆ. ಯಕ್ಷ ಗಾನ ಇಂದು ವಿಶ್ವಗಾನವಾಗಿ ಬದಲಾಗಿದೆ. ಐರೋಪ್ಯ ರಾಷ್ಟ್ರಗಳೂ ಈ ಸುಂದರ ಕಲೆಗೆ ಮಾರುಹೋಗಿರುವುದು ಗುಟ್ಟಾಗಿ ಉಳಿದಿಲ್ಲ. ಯಕ್ಷಗಾನದಲ್ಲಿಯೂ ಒಂದಿಷ್ಟು ಬದಲಾವಣೆಗಳು ಕಾಲಾನುಕ್ರಮದಲ್ಲಿ ಘಟಿಸಿವೆ. “ನವೋನ್ಮೆàಶ ಶಾಲಿನಿ’ ಎಂಬಂತೆ ಮನುಜನ ಮನಸ್ಸು ಸದಾ ಹೊಸತನವನ್ನು ಹಪಹಪಿಸುತ್ತಾ ಇರುತ್ತದೆ. ಆಧುನಿಕತೆಯ ಆರ್ಭಟದಲ್ಲಿ ಇಂದು ಯಕ್ಷಗಾನ ರಂಗದಲ್ಲಿ ಹೊಸತನ ಗೋಚರಿಸದೆ ಹೋದರೆ ಜನಮನದಿಂದ ಕಲೆ ದೂರಸರಿಯಲೂಬಹುದು. ಆದ್ದರಿಂದ ಸಭ್ಯತೆಯ ಎಲ್ಲೆ ಮೀರದ ಬದಲಾವಣೆಗಳನ್ನು ನಾವು ಶುದ್ಧ ಮಾನಸಿಗರಾಗಿ ಸ್ವೀಕರಿಸಿ, ಯಕ್ಷಗಾನ ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸುವುದರ ಜತೆಗೆ ಕರಾ ವಳಿಯ ಕಲಾ ಶ್ರೀಮಂತಿಕೆ ಯನ್ನು ವಿಶ್ವ ದಾದ್ಯಂತ ಪಸರಿಸುವ ಪಣತೊಡೋಣ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.