ಯಕ್ಷ ಪ್ರದರ್ಶನ ಅಪರಾಹ್ನ ಆರಂಭ
Team Udayavani, Dec 29, 2021, 6:40 AM IST
ಕಟೀಲು: ಸರಕಾರ ಜಾರಿಗೊಳಿಸಿದ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಯಕ್ಷಗಾನ ಸಹಿತ ಕರಾವಳಿಯಲ್ಲಿ ಪೂರ್ವ ನಿಗದಿತಗೊಂಡಿದ್ದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಅಪರಾಹ್ನ ಆರಂಭಗೊಂಡವು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳ ಪ್ರದರ್ಶನಗಳು ಮಂಗಳವಾರ ಅಪರಾಹ್ನ 3.30ಕ್ಕೆ ಚೌಕಿ ಪೂಜೆ ನಡೆದು ಯಕ್ಷಗಾನ ಪ್ರದರ್ಶನ ನಡೆದು ರಾತ್ರಿ 9ಕ್ಕೆ ಮಂಗಳ ನಡೆಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಇತರೆಡೆ ಕೂಡ ಸಂಜೆಯೇ ಯಕ್ಷಗಾನ ಆರಂಭಗೊಂಡು ರಾತ್ರಿ 9.30ರ ವೇಳೆಗೆ ಮುಕ್ತಾಯಗೊಂಡಿತು.
ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ವಿರುದ್ಧ ಪಲ್ಟಿ ಹೊಡೆದ ಪುನೇರಿ
ದೈವಸ್ಥಾನಗಳಲ್ಲಿನ ನೇಮ ಸಹಿತ ಇತರ ಕಾರ್ಯಕ್ರಮಗಳು ಕೂಡ ರಾತ್ರಿ 10 ಗಂಟೆಯ ವೇಳೆಗೆ ಸಮಾಪನಗೊಂಡವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.