ಹೊರರಾಜ್ಯ ರಂಗ ಕಲಾವಿದರಿಂದ ಯಕ್ಷಹೆಜ್ಜೆ
ಉಡುಪಿ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ತರಬೇತಿ
Team Udayavani, Feb 22, 2021, 5:20 AM IST
ಉಡುಪಿ: ಕರಾವಳಿಯ ಗಂಡು ಕಲೆ ಎನಿಸಿದ ಯಕ್ಷಗಾನದ ಹೆಜ್ಜೆಗಳು ಈಗ ಹೊರರಾಜ್ಯದತ್ತ ಹೆಜ್ಜೆ ಇಡಲು ಅಣಿಯಾಗಿವೆ. ಉಡುಪಿ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ವಿವಿಧ ರಾಜ್ಯಗಳ 16 ರಂಗಭೂಮಿ ಕಲಾವಿದರು ಯಕ್ಷಗಾನ ನಾನಾ ಆಯಾಮಗಳನ್ನು ಕಲಿಯುತ್ತಿದ್ದಾರೆ.
ಕೇವಲ ರಂಗಭೂಮಿ ಕಲಾವಿದರಲ್ಲದೆ ಭರತನಾಟ್ಯದಂತಹ ಕ್ಷೇತ್ರದವರೂ ಇಲ್ಲಿ ಸೇರಿಕೊಂಡಿದ್ದಾರೆ. ಹಿಂದೆ ಕಳರಿಪಯಟ್, ಕೂಡಿಯಾಟ್ಟಂ, ಕಥಕ್ಕಳಿ ಕಲೆಯನ್ನು ಕಲಿಯಲು ಹೊರ ರಾಜ್ಯದ ರಂಗಭೂಮಿ ಕಲಾವಿದರು ಕೇರಳಕ್ಕೆ ಹೋಗುತ್ತಿದ್ದರು. ಯಕ್ಷಗಾನದ ಸಾಧ್ಯತೆಗಳು ಮತ್ತು ರಂಗಕ್ರಿಯೆ ಕಲಿಯಲು ಈಗ ಉಡುಪಿಗೆ ಬರುವಂತಾಗಿದೆ.
20 ದಿನಗಳವರೆಗೆ ಕಾರ್ಯಾಗಾರ
ಈ ಕಲಾವಿದರಿಗೆ ಬೇಕಾದಂತಹ ಪಠ್ಯಗಳನ್ನೂ ರಚಿಸಿ ಕೊಡಲಾಗಿದೆ. ಫೆ. 20 ರಂದು ಆರಂಭಗೊಂಡ ಕಾರ್ಯಾಗಾರ 20 ದಿನಗಳವರೆಗೆ ಯಕ್ಷಗಾನ ತಾಳ, ಸ್ವರ ಅಭ್ಯಾಸ, ವೀಡಿಯೋ ಮೂಲಕ ದೃಶ್ಯವೀಕ್ಷಣೆ, ಕುಣಿತ ಅಭ್ಯಾಸ, ಆಂಗಿಕ ಅಭ್ಯಾಸ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ.
ಪರಂಪರೆಯ ನೃತ್ಯ ಕಲಿಕೆ
ಯುದ್ಧ ನೃತ್ಯ, ಜಲಕ್ರೀಡೆ, ಪ್ರಯಾಣ ಕುಣಿತ, ಸುತ್ತು ಬಲಿ, ಮಲ್ಲಯುದ್ಧ, ಕತ್ತಿ ಪಡೆ ಹೀಗೆ ಹಲವು ರಂಗ ಕ್ರಿಯೆಗಳು ಯಕ್ಷಗಾನದಲ್ಲಿವೆ. ಆದರೆ ಇವುಗಳು ಈಗ ಯಕ್ಷಗಾನ ಪ್ರದರ್ಶನದಲ್ಲಿ ಹೆಚ್ಚಾಗಿ ಕಂಡುಬರುತ್ತಿಲ್ಲ.
ಇದಕ್ಕೆ ಕಾರಣ ಗುರುಪರಂಪರೆಯಿಂದ ಇದನ್ನು ಕಲಿಯಬೇಕಾಗಿದೆ. ಹಳೆಯ ಪರಂಪರೆಯ ಕಲಾವಿದರನ್ನು ಬಿಟ್ಟರೆ ಹೊಸಬರಿಗೆ ಇದರ ಪರಿಚಯವಿಲ್ಲದೆ ಭಾಗವತರ ಹಾಡಿಗೆ ತಕ್ಕಂತೆ ಕುಣಿತ ಚಾಲ್ತಿಗೆ ಬಂದಿದೆ. ಇದನ್ನು ಕಲಿಯಲು ನಾಲ್ಕೈದು ವರ್ಷಗಳಾದರೂ ಬೇಕು. ಇದನ್ನು ರಂಗಭೂಮಿ ಕಲಾವಿದರಿಗೆ ಕಲಿಸಿದರೆ ನಮ್ಮ ಕಲೆಯ ವೈಶಿಷ್ಟ್ಯಗಳು ಇತರ ರಾಜ್ಯಗಳಿಗೆ ಪ್ರಸಾರವಾಗುತ್ತದೆ ಎಂಬ ಕಾರಣಕ್ಕೆ ಯಕ್ಷಗಾನ ಕೇಂದ್ರದ ಸುವರ್ಣ ಮಹೋತ್ಸವದ ಸಂದರ್ಭ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎನ್ನುತ್ತಾರೆ ಕೇಂದ್ರದ ಗುರು, ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ. ವಿಶೇಷವೆಂದರೆ ಸಂಜೀವ ಸುವರ್ಣರ ಶಿಷ್ಯರೇ ಶಿಬಿರಾರ್ಥಿಗಳಿಗೆ ಕಲಿಸುತ್ತಿರುವುದು.
ಕಾರ್ಯಾಗಾರವನ್ನು ಉಚಿತವಾಗಿ ನಡೆಸಿಕೊಡಲಾಗುತ್ತಿದೆ. 10 ಕಲಾವಿದರಿಗೆ ಅವಕಾಶ ಎಂಬ ಗುರಿ ಇರಿಸಿಕೊಂಡರೂ 16 ಕಲಾವಿದರು ಬಂದಿದ್ದಾರೆ. ಇವರಲ್ಲಿ ಇಬ್ಬರಿಗೆ ಕೊರೊನಾ ಸೋಂಕಿನ ಕಾರಣದಿಂದ ಅವಕಾಶ ಕೊಡಲಿಲ್ಲ.
ರಂಗಭೂಮಿಯಲ್ಲಿ ಅಳವಡಿಸುವ ಉದ್ದೇಶ
ಪ್ರಸಾದನ, ಮಾತು, ಹೆಜ್ಜೆಗಳನ್ನು ರಂಗಭೂಮಿ ಕ್ಷೇತ್ರದಲ್ಲಿ ಅಳವಡಿಸಲು ಸಾಧ್ಯ ಎನ್ನುತ್ತಾರೆ ಚೆನ್ನೈನಿಂದ ಆಗಮಿಸಿದ ಬೆಂಗಳೂರಿನವರಾದ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಕವಿತಾ. ಹೀಗೆ ಮಹಾರಾಷ್ಟ್ರ ನಾಶಿಕ್‌ನ ಯಶೋದಾ ಸಂಜಯ್, ಪೂಜಾ ವೇದವಿಖ್ಯಾತ್, ಮುಂಬಯಿನ ಲತಾ ಎಸ್. ಸಿಂಗ್, ಬೆಂಗಳೂರಿನ ಮುತ್ತುಕುಮಾರ್, ಗುಜರಾತ್ ವಡೋದರದ ಚೌಹಾಣ್ ಪ್ರಮೋದ್, ಜೈಪುರದ ವಿಶಾಲ್ ಚೌಧರಿ, ಲಖನೌನ ವಿಕಾಸ್, ಮೋಸಮ್ ಖಾನ್, ದಿಲ್ಲಿಯ ಧೃತಿ, ಅತುಲ್ ಸಿಂಗ್, ಅಜೀತ್ ಶರ್ಮಾ, ಬೆಂಗಳೂರಿನಲ್ಲಿರುವ ಕುಂದಾಪುರ ಮೂಲದ ಕುಮಾರಿ ಜಲಜಾ ಮೊದಲಾದವರು ಉತ್ಸುಕತೆಯಿಂದ ಯಕ್ಷಗಾನ ಕಲೆಯ ಸಾಧ್ಯತೆಗಳನ್ನು ಕಲಿಯ ಹೊರಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.