ಯಳಬೇರು: ಮರವೇರಿದ ಮೊಬೈಲ್!ಮರದ ಎತ್ತರದಲ್ಲಿ ನೆಟ್‌ವರ್ಕ್ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್
ಮತದಾನ ಮಾಹಿತಿ ರವಾನೆಗಾಗಿ ಮತಗಟ್ಟೆ ಅಧಿಕಾರಿಗಳ ಕಸರತ್ತು
Team Udayavani, May 8, 2024, 7:15 AM IST
ಕುಂದಾಪುರ: ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮಲಶಿಲೆ ಗ್ರಾಮದ ಕಾಡಂಚಿನ ನೆಟ್‌ವರ್ಕ್ ರಹಿತ ಪ್ರದೇಶವಾದ (ಶ್ಯಾಡೋ ನೆಟ್‌ವರ್ಕ್ ಬೂತ್) ಯಳಬೇರು ಶಾಲೆಯ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮತದಾನದ ಮಾಹಿತಿ ನೀಡಲು ನೆಟ್‌ವರ್ಕ್ ಸಿಗದೆ ಮೊಬೈಲ್ ಫೋನನ್ನು ಮರದ ಮೇಲೆ ಇರಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಎ. 26ರಂದೇ ಮತದಾನ ನಡೆದಿದ್ದರೆ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿ-ಯಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಿತು. ಈ ಕ್ಷೇತ್ರದ ಅನೇಕ ಪ್ರದೇಶಗಳು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.
ಯಳಬೇರು ಪ್ರದೇಶದಲ್ಲಿ ಯಾವುದೇ ಫೋನ್ ನೆಟ್‌ವರ್ಕ್ ಸರಿಯಾಗಿಲ್ಲ. ಮತದಾನ ನಡೆದ ಯಳ ಬೇರು ಶಾಲೆಯಲ್ಲಿಯೂ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಆದರೆ ಮತ ದಾನ ಕೇಂದ್ರದಿಂದ ಪ್ರತೀ 2 ತಾಸುಗಳಿಗೆ ಒಮ್ಮೆ ಮೇಲಧಿಕಾರಿ ಗಳಿಗೆ ಮತದಾನ ಪ್ರಮಾಣ ಇತ್ಯಾದಿ ಮಾಹಿತಿಯನ್ನು ಒದಗಿಸಬೇಕು. ನೆಟ್‌ವರ್ಕ್ ಇಲ್ಲದ್ದರಿಂದ ಅಲ್ಲಿನ ಮತಗಟ್ಟೆ ಅಧಿಕಾರಿಗಳು ಪ್ರತೀ 2 ತಾಸುಗಳಿಗೆ ಮತದಾನದ ಮಾಹಿತಿ ನೀಡಲು ಒಂದು ಮೊಬೈಲನ್ನು ಎತ್ತರದ ಮರದ ಮೇಲಿರಿಸಿ, ಅದಕ್ಕೆ ನೆಟ್‌ವರ್ಕ್ ಸಿಗುವಂತೆ ಮಾಡಿದರು. ಬಳಿಕ ಅದರ ಮೂಲಕ ಇನ್ನೊಂದು ಮೊಬೈಲ್‌ಗೆ ಹಾಟ್‌ಸ್ಪಾಟ್ ಸಂಪರ್ಕ ಕಲ್ಪಿಸಿ ಪ್ರಯಾಸ ಪಟ್ಟು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.