ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ
Team Udayavani, Jan 23, 2022, 5:55 AM IST
ನೇತಾಜಿಯ ಆಪ್ತವಲಯದಲ್ಲಿ ಇದ್ದವರ ಪೈಕಿ ನನ್ನ ಮಾವ ಯಲ್ಲಪ್ಪ ಅವರೂ ಪ್ರಮುಖರು. ಮಂಗಳೂರಿನ ಅತ್ತಾವರ ಮೂಲದ ಯಲ್ಲಪ್ಪ ಅವರು ಬ್ಯಾರಿಸ್ಟರ್ ಪದವಿ ಪಡೆದು, ಆಗ ಸಿಂಗಾಪುರದಲ್ಲಿದ್ದರು. ಅಲ್ಲಿ ನೇತಾಜಿಯ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಿಂದ ಪ್ರೇರಿತರಾಗಿ, ಐಎನ್‌ಎಗೆ ಸೇರಿಕೊಂಡರು.
ಹಣಕಾಸು ವಿಚಾರದಲ್ಲಿ ಜ್ಞಾನಿಯಾಗಿದ್ದ ಯಲ್ಲ ಪ್ಪನವರು “ಆಜಾದ್ ಹಿಂದ್ ಸರಕಾರ’ದ ಮಂತ್ರಿ ಮಂಡ ಲದಲ್ಲೂ ಪ್ರಭಾವಿ ಸಚಿವರಾಗಿ ಕೆಲಸ ಮಾಡಿದರು. ಸರಕಾರ ಕಟ್ಟುವ ಸಮಯದಲ್ಲಿ ಹಣಕಾಸಿನ ತೊಂದರೆ ಉದ್ಭವಿಸಿದಾಗ, “ಆಜಾದ್ ಹಿಂದ್ ಬ್ಯಾಂಕ್’ ಸ್ಥಾಪಿಸಿ ನೇತಾಜಿಗೆ ನೆರವಾದರು. “ಭಾರತದ ಕುಬೇರ’ ಅಂತಲೇ ಇವರಿಗೆ ಹೆಸರಿತ್ತು.
ಒಮ್ಮೆ ಯಲ್ಲಪ್ಪ ಅವರು ನೇತಾಜಿಯ ಜತೆಗೂಡಿ ಸನ್ಯಾಸಿ ವೇಷದಲ್ಲಿ ಮಂಗಳೂರಿನ ಅತ್ತಾವರದ ಮನೆಗೆ ಬಂದಿದ್ದರು ಅಂತಲೂ ನನ್ನ ತಾಯಿ ಹೇಳುತ್ತಿದ್ದರು. ಆದರೆ, ಯಲ್ಲಪ್ಪ ಅವರ ಅಂತ್ಯ ನೇತಾಜಿಯ ಸಾವಿನಂತೆಯೇ ನಿಗೂಢ. ಆಜಾದ್ ಹಿಂದ್‌ನ ಮಹಿಳಾ ಘಟಕದ ಮುಖ್ಯಸ್ಥೆ ಲಕ್ಷ್ಮೀ ಸೆಹಗಲ್ ಒಂದು ಪತ್ರದಲ್ಲಿ ಉಲ್ಲೇಖಿಸಿದಂತೆ, “ಮ್ಯಾನ್ಮಾರ್‌ನ ಒಂದು ಕಾಡಿನ ಮೇಲೆ ಬ್ರಿಟಿಷ್ ಸೈನ್ಯ ದಾಳಿ ಮಾಡಿತ್ತು. ಈ ವೇಳೆ ಯಲ್ಲಪ್ಪ ಹಾಗೂ ಮುತ್ತು ಅವರನ್ನು ಹೊರತುಪಡಿಸಿ, ಮಿಕ್ಕವರೆಲ್ಲರೂ ಬ್ರಿಟಿಷರಿಗೆ ಶರಣಾದರು. ಮರುದಿನ ಮತ್ತೆ ಬ್ರಿಟಿಷ್ ತುಕಡಿ ಅದೇ ಕಾಡಿನ ಮೇಲೆ ದಾಳಿ ಮಾಡಿ, ಯಲ್ಲಪ್ಪ ಅವರನ್ನು ಸೆರೆಹಿಡಿಯಿತು’ ಎಂದಿದ್ದಾರೆ. ಆದರೆ ಅನಂತರದ ದಿನಗಳಲ್ಲಿ ಯಲ್ಲಪ್ಪನವರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.
-ಡಾ| ಪ್ರಭಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.