ಯಶೋದಾ ಕೃಷ್ಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
"ಉದಯವಾಣಿ'- ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಸಹಯೋಗ
Team Udayavani, Oct 6, 2021, 5:54 AM IST
ಉಡುಪಿ: ಜೀವನದಲ್ಲಿ ಸ್ಪಷ್ಟತೆ, ನಿಖರತೆಯ ಗುರಿ ಹೊಂದಿರಬೇಕು. ಗುರಿ ಕೇಂದ್ರೀಕರಿಸಿಕೊಂಡು ಜೀವನದಲ್ಲಿ ವಿವಿಧ ಮಜಲುಗಳನ್ನು ರೂಪಿಸಬೇಕು ಎಂದು ಮಣಿಪಾಲದ ತಜ್ಞ ವೈದ್ಯೆ, ಸಮಾಜಸೇವಕಿ ಡಾ| ಗೌರಿ ಕರೆ ನೀಡಿದರು.
ಉದಯವಾಣಿ ಮತ್ತುಉದ್ಯಾವರದ “ನಮ್ಮ ಜಯಲಕ್ಷ್ಮೀ ಸಿಲ್ಕ್ಸ್’ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಆಯೋಜಿಸಲಾದ “ಯಶೋದಾ ಕೃಷ್ಣ’ ಚಿತ್ರ ಸ್ಪರ್ಧೆಯ ವಿಜೇತರಿಗೆ ನಗರದಲ್ಲಿ ಮಂಗಳವಾರ ನಡೆದ ಬಹುಮಾನ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷ್ಣಜನ್ಮಾಷ್ಟಮಿ ಸಂದರ್ಭ ಯಶೋದಾ ಕೃಷ್ಣ ಸ್ಪರ್ಧೆ ಉತ್ತಮ ಪರಿಕಲ್ಪನೆಯಾಗಿದೆ. ಬಹುಮಾನ ಸಿಗುವುದು, ಸಿಗದೆ ಇರುವುದು ಮುಖ್ಯವಲ್ಲ. ಸಿಗದೆ ಇದ್ದಾಗ ಇನ್ನೊಂದು ಬಾರಿಯ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವನ್ನು ಮಕ್ಕಳಿಗೆ ಹಿರಿಯರು ಮೂಡಿಸಬೇಕು. ಮಕ್ಕಳನ್ನು ಕೃಷ್ಣನಂತೆ ಬೆಳೆಸುವುದು ತಾಯಂದಿರಾದ ಯಶೋದೆಯರ ಕರ್ತವ್ಯ ಎಂದು ಡಾ| ಗೌರಿ ಅಭಿಪ್ರಾಯಪಟ್ಟರು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇಂತಹ ರಚನಾತ್ಮಕ ಕಾರ್ಯಕ್ರಮ ಗಳಿಗೆ ಜಯಲಕ್ಷ್ಮೀ ಸಂಸ್ಥೆಯ ಬೆಂಬಲ ಸದಾ ಇರುತ್ತದೆ ಎಂದು ನಿರ್ದೇಶಕಿ ವೈಷ್ಣವಿ ಹೆಗ್ಡೆ ಹೇಳಿದರು.
ಪರಂಪರೆಯ ಸ್ಪರ್ಶಗಳನ್ನು ಗುರುತಿಸಿಕೊಳ್ಳುತ್ತ ಬದುಕು ಕಟ್ಟಿಕೊಳ್ಳ ಬೇಕಾದುದು ಅಗತ್ಯ. ಬದುಕು ಮತ್ತು ಪರಂಪರೆ ಜತೆಜತೆಯಾಗಿ ಸಾಗಬೇಕು. ಈ ಹಿನ್ನೆಲೆಯಲ್ಲಿ ಯಶೋದಾ ಕೃಷ್ಣ ಸ್ಪರ್ಧೆಯನ್ನು ಉದಯವಾಣಿ ಆಯೋಜಿಸಿದೆ. ಹಿಂದೆಯೂ ಇಂತಹ ವಿವಿಧ ಪ್ರಯತ್ನಗಳನ್ನು ನಡೆಸಿದೆ ಎಂದು ಸಂಪಾದಕ ಅರವಿಂದ ನಾವಡ ಹೇಳಿದರು.
ಮಗುವನ್ನು ದೇವರಾಗಿ ಕಾಣುವ ಅವಕಾಶ ಯಶೋದಾ ಕೃಷ್ಣ ಸ್ಪರ್ಧೆ ಯಲ್ಲಿರುವುದು ನಮ್ಮ ಸಂಸ್ಕೃತಿಯ ವೈಶಿಷ್ಟé. ಇದಕ್ಕೆ ಓದುಗರಿಂದ ಅಪೂರ್ವ ಸ್ಪಂದನೆ ಕಂಡುಬಂತು ಎಂದು ಮಾರುಕಟ್ಟೆ ವಿಭಾಗದ ಸಹಉಪಾಧ್ಯಕ್ಷ ರಾಮಚಂದ್ರ ಮಿಜಾರು ಸ್ವಾಗತಿಸಿ ಪ್ರಸ್ತಾವನೆಯಲ್ಲಿ ನುಡಿದರು.
ಉಡುಪಿ ಮಾರ್ಕೆಟಿಂಗ್ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಹಿರಿಯ ಉಪಸಂಪಾದಕಿ ವಿದ್ಯಾ ಇರ್ವತ್ತೂರು ಕಾರ್ಯಕ್ರಮ ನಿರ್ವಹಿಸಿ, ಪ್ರಸರಣಾಧಿಕಾರಿ ಅಜಿತ್ ಭಂಡಾರಿ ವಂದಿಸಿದರು. ನಮ್ಮ ಜಯಲಕ್ಷ್ಮೀ ಸಿಲ್ಕ್$Õನ ಮಾ| ರಾಹುಲ್, ಮಾ| ವಿಘ್ನೇಶ್ ಹೆಗ್ಡೆ, ಮಾ| ಜ್ಞಾನೇಶ್ ಹೆಗ್ಡೆ, ವ್ಯವಸ್ಥಾಪಕ ಯೋಗೀಶ್ ಉಪಸ್ಥಿತರಿದ್ದರು.
ಬಹುಮಾನ ವಿಜೇತರ ವಿವರ
ಪ್ರಥಮ: ಬಬಿತಾ ಸೂರಜ್ ಶೆಟ್ಟಿ, ಗಗನ್, ಮಂಗಳೂರು.
ದ್ವಿತೀಯ: 1. ರತ್ನಮಾಲಾ, ನಿವ್ಯಾ, ಅಲೆವೂರು, ಉಡುಪಿ; 2. ಅಕ್ಷತಾ ಎಚ್. ಶೇಟ್, ಸಾಯೀಶ್, ಮಂಗಳೂರು;3. ಅಶ್ವಿನಿ ಅನಂತ ಪ್ರಭು, ಅಯಾಂಶ್ ಪ್ರಭು, ಕಾರ್ಕಳ
ತೃತೀಯ: 1. ಐಶಾನಿ, ಅರ್ಚನಾ, ಕುಂದಾಪುರ; 2. ಪ್ರಜ್ವಲಿ ಎಸ್. ಭಟ್, ಹಿರಣ್ಮಯೀ ಭಟ್, ಉಡುಪಿ; 3. ಭವ್ಯಾ ಗೌಡ, ಅನ್ವಿತ್, ಬೆಳ್ತಂಗಡಿ; 4. ಅತುಲಾ ಭಟ್, ರಿತ್ವಿಕ್ ಭಟ್, ಉಡುಪಿ; 5. ಅಮಿತಾ, ಶ್ರೇಷ್ಠಾ ಶೆಣೈ, ಮಂಗಳೂರು; 6. ನಯನಾ, ಆರ್ಯಕೃಷ್ಣ, ಸುಳ್ಯ.
ಪ್ರೋತ್ಸಾಹಕರ ಬಹುಮಾನ: 1. ಅನುಷಾ, ಅಧ್ವಿತಿ ಎಸ್., ಕೋಟ; 2. ರಿಷಿಕಾ, ವಿದ್ಯಾಶ್ರೀ ಕೆ., ಉಡುಪಿ; 3. ಅಕ್ಷಯಾ ಪ್ರದೀಪ್, ತ್ರಿಣಭ್ ಪಿ. ಮಂಗಳೂರು; 4. ರಕ್ಷಿತಾ, ವೈಷಿ¡, ಕಾಪು; 5. ಶಾಶ್ವತಾ, ಆಯುಷ್, ಬಂಟಕಲ್ಲು; 6. ಕವಿತಾ ಕರುಣಾಕರ, ವಾಸುಕಿಕೃಷ್ಣ, ಕುತ್ತೆತ್ತೂರು, ಮಂಗಳೂರು; 7. ವಿನುತಾ ಸನಿಲ್, ಶೈವಿ ಎಸ್., ಗುರುಪುರ, ಕೈಕಂಬ, 8. ಸವಿತಾ, ಸಮ್ಯಕ್ ಎಸ್., ಪುತ್ತೂರು; 9. ಭವ್ಯಾ ಶೆಟ್ಟಿ, ಶಾರ್ವಿ ಶೆಟ್ಟಿ, ಬೆಳುವಾಯಿ; 10. ನೀತಿ ಪಿ., ಶ್ರಾವ್ಯಾ, ಉಡುಪಿ; 11. ಶಾಲಿನಿ, ವಿಶ್ರುತ್, ಕಾರ್ಕಳ; 12. ಪ್ರಶಾಂತಿ ರಾವ್, ಲಹರಿ ರಾವ್, ಮಂಗಳೂರು.
ಚಿತ್ರ:ಆಸ್ಟ್ರೋ ಮೋಹನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.