Yasobhoomi : ಯಶೋಭೂಮಿ ನಾಳೆ ಲೋಕಾರ್ಪಣೆ
Team Udayavani, Sep 16, 2023, 12:18 AM IST
8.9 ಲಕ್ಷ ಚ.ಮೀ. ಆವರಣ
“ಯಶೋಭೂಮಿ’ ಅನ್ನು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಆ್ಯಂಡ್ ಎಕ್ಸ್ಪೊ ಸೆಂಟರ್ ಎಂದೂ ಕರೆಯಲಾಗುತ್ತದೆ. ಒಟ್ಟು 8.9 ಲಕ್ಷ ಚ.ಮೀ. ವ್ಯಾಪ್ತಿಯಲ್ಲಿ ಕೇಂದ್ರ ಇದ್ದು, 1.8 ಲಕ್ಷ ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
11,000 ಆಸನ ಸಾಮರ್ಥ್ಯ
“ಯಶೋಭೂಮಿ’ ಒಟ್ಟು 15 ಸಮಾವೇಶ ಕೊಠಡಿಗಳನ್ನು ಹೊಂದಿದೆ. ಈ ಪೈಕಿ ಮುಖ್ಯ ಆಡಿಟೋರಿಯಂ, ಭವ್ಯವಾದ ಬಾಲ್ರೂಂ ಹಾಗೂ 13 ಮೀಟಿಂಗ್ ರೂಮ್ಗಳನ್ನು ಒಳಗೊಂಡಿದೆ. ಒಮ್ಮೆಗೆ ಒಟ್ಟು 11,000 ಪ್ರತಿನಿಧಿಗಳಿಗೆ ಆಸನ ವ್ಯವಸ್ಥೆ ಹೊಂದಿದೆ.
ದಿಲ್ಲಿಯ ದ್ವಾರಕಾದಲ್ಲಿ ವಿಶ್ವ ದರ್ಜೆಯ ಸಮಾವೇಶ ಕೇಂದ್ರ “ಯಶೋಭೂಮಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಭಾನುವಾರ(ಸೆ.17)ದಂದು ಲೋಕಾರ್ಪಣೆ ಮಾಡಲಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಎಂಐಸಿಇ(ಮೀಟಿಂಗ್ಸ್, ಇನ್ಸೆಂಟೀವ್ಸ್, ಕಾನ್ಫರೆನ್ಸಸ್ ಮತ್ತು ಎಕ್ಸಿಬಿಶನ್ಸ್) ಸೌಲಭ್ಯಗಳ ಪೈಕಿ ಒಂದಾಗಿದೆ. “ಯಶೋಭೂಮಿ’ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.
ಅತಿದೊಡ್ಡ ಪ್ರದರ್ಶನ ಹಾಲ್
ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ ಪೈಕಿ ಒಂದನ್ನು ಯಶೋಭೂಮಿ ಹೊಂದಿದೆ. ಇದನ್ನು 1.07 ಲಕ್ಷ ಚ.ಮೀ. ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಭಾರತದ ಸಂಸ್ಕೃತಿ ಮತ್ತು ವಾಸ್ತುಶಿಲ್ಪಕ್ಕೆ ಅನುಗುಣ ವಾಗಿ ಕೇಂದ್ರ ನಿರ್ಮಿಸಲಾಗಿದೆ.
ಮೆಟ್ರೊ ಸಂಪರ್ಕ
ದಿಲ್ಲಿ ಏರ್ಪೋರ್ಟ್ ಮೆಟ್ರೊ ಎಕ್ಸ್ಪ್ರೆಸ್ ಲೇನ್ನೊಂದಿಗೆ “ಯಶೋಭೂಮಿ’ ಸಂಪರ್ಕ ಹೊಂದಿದೆ. ಸೆ.17ರಂದೇ ಮೆಟ್ರೊ ನಿಲ್ದಾಣ ಉದ್ಘಾಟನೆ ಆಗಲಿದೆ.
ಭವ್ಯ ಬಾಲ್ರೂಂ
ಮುಖ್ಯ ಆಡಿಟೋರಿಯಂನಲ್ಲಿ ಒಟ್ಟು 6,000 ಪ್ರತಿನಿಧಿಗಳು, ಬಾಲ್ರೂಂನಲ್ಲಿ 2,500 ಅತಿಥಿಗಳಿಗೆ ಆಸನ ವ್ಯವಸ್ಥೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.