ಒಂದು ಗಂಟೆ 50 ನಿಮಿಷ ಬಜೆಟ್ ಮಂಡಿಸಿದ ಯಡಿಯೂರಪ್ಪ
Team Udayavani, Mar 6, 2020, 3:04 AM IST
“ವಿಪ್ರ, ವಣಿಕ, ನೃಪನಿಗಧಿಕ, ಅನ್ನದಾತ ಕೃಷಿಕ’, “ಕೃಷಿತೋ ನಾಸ್ತಿ ದುರ್ಭಿಕ್ಷಂ’ ವಾಚನದ ಮೂಲಕ ಬಜೆಟ್ ಆರಂಭಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 104 ಪುಟಗಳ ಬಜೆಟ್‌ಅನ್ನು 1 ಗಂಟೆ 50 ನಿಮಿಷಗಳ ಕಾಲ ಓದಿದರು.
ಹಸಿರು ಶಾಲು, ಬಜೆಟ್ ಪುಸ್ತಕದ ಸೂಟ್‌ಕೇಸ್ ಹಿಡಿದು ಸದನ ಪ್ರವೇಶಿಸಿದ ಯಡಿಯೂರಪ್ಪ, ಬೆಳಗ್ಗೆ 11 ಗಂಟೆಗೆ ಬಜೆಟ್ ಭಾಷಣ ಪ್ರಾರಂಭಿಸಿ 12.50 ನಿಮಿಷಕ್ಕೆ ಮುಗಿಸಿದರು. ಬಜೆಟ್ ಭಾಷಣ ಮುಗಿಯುತ್ತಿದ್ದಂತೆ ಸಚಿವ ಸಂಪುಟ ಸದಸ್ಯರು ಅವರತ್ತ ಧಾವಿಸಿ ಅಭಿನಂದಿಸಿದರು.
ಯಡಿಯೂರಪ್ಪ ಅವರು ಭಾಷಣದ ಪ್ರಾರಂಭದಲ್ಲೇ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಕರ್ನಾಟಕದ ಸಮಗ್ರ, ಸಮತೋಲಿತ ಮತ್ತು ಸಾಮಾಜಿಕ ನ್ಯಾಯ ಆಧರಿಸಿದ ಅಭಿವೃದ್ಧಿ, ಕೇಂದ್ರಿತ ಮುಂಗಡ ಪತ್ರ ಮಂಡಿಸುವ ಅವಕಾಶವಿತ್ತ ಕರ್ನಾಟಕದ ಜನತೆಗೆ ಚಿರ ಋಣಿಯಾಗಿದ್ದೇನೆ ಎಂದು ಹೇಳಿದರು.
ನಾನು ಮಂಡಿಸುತ್ತಿರುವ ಏಳನೆಯ ಬಜೆಟ್ ಇದಾಗಿದೆ. ಉಪ ಮುಖ್ಯಮಂತ್ರಿಯಾಗಿ ಎರಡು, ಮುಖ್ಯಮಂತ್ರಿಯಾಗಿ ನಾಲ್ಕು ಮುಂಗಡ ಪತ್ರ ಮಂಡಿಸಿದ್ದೇನೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ, ಸಾಮಾಜಿಕ ನ್ಯಾಯದೊಂದಿಗೆ ಸರ್ವರಿಗೂ ಸಮಬಾಳು ಮತ್ತು ಸಮಪಾಲು ನೀಡುವ ಧ್ಯೇಯ ನಮ್ಮ ದಾರಿ. ಸರ್ವೋದಯ ಗಮ್ಯದತ್ತ, ಅಂತ್ಯೋದಯದ ಹಾದಿನಲ್ಲಿ ನಮ್ಮ ಸರ್ಕಾರ ಸಾಗಿದೆ ಎಂದು ತಿಳಿಸಿದರು.
ಪುತ್ರನಿಂದ ವೀಕ್ಷಣೆ: ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡಿಸುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಪುತ್ರ ವಿಜಯೇಂದ್ರ , ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ ಕುಳಿತು ವೀಕ್ಷಿಸಿದರು.
ಬಿಎಸ್‌ವೈ ಪೂಜೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆಗೆ ವಿಧಾನಸೌಧಕ್ಕೆ ಆಗಮಿಸುವ ಮುನ್ನ ಮಲ್ಲೇಶ್ವರದ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಜತೆಗಿದ್ದರು. ನಂತರ ಯಡಿಯೂರಪ್ಪ ಅವರು ವಿಧಾನಸೌಧಕ್ಕೆ ಆಗಮಿಸಿ ಸಂಪುಟ ಸಭೆ ನಡೆಸಿ ಅಲ್ಲಿಂದ ಸದನಕ್ಕೆ ಆಗಮಿಸಿ ಬಜೆಟ್ ಮಂಡಿಸಿದರು.
ಎಂಬಿಪಿಗೆ ತಿರುಗೇಟು: ಮುಖ್ಯಮಂತ್ರಿಯವರು ಬಜೆಟ್ ಭಾಷಣ ಪೂರ್ಣಗೊಳಿಸಿ ಸದನ ಶುಕ್ರವಾರಕ್ಕೆ ಮುಂದೂಡಿದ ನಂತರ ಸದನದಲ್ಲೇ ಇದ್ದ ಎಂ.ಬಿ.ಪಾಟೀಲ್ ಅವರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಕುರಿತು “ಕಾರಜೋಳ್ ಎಲ್ಲಿ ಕೃಷ್ಣಾ ಮೇಲ್ದಂಡೆಗೆ 20 ಸಾವಿರ ಕೋಟಿ’ ಎಂದು ಕಿಚಾಯಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಹಲವರು ಕಾರಜೋಳ ಬೆನ್ನಿಗೆ ನಿಂತು ನೀವು ಕೊಟ್ಟಿದ್ದಿರಾ? ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.