ಯೆಮೆನ್ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ
Team Udayavani, Jun 27, 2020, 10:34 AM IST
ಸನಾ: ಕೋವಿಡ್ ಸೋಂಕಿನಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ಹಿಂದಿಗಿಂತಲೂ ಹೆಚ್ಚಾಗುತ್ತಿದೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ವಿಭಾಗವಾದ ಯುನಿಸೆಫ್ ವರದಿ ಮಾಡಿದೆ. ಲಕ್ಷಾಂತರ ಮಕ್ಕಳು ಈಗಾಗಲೇ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.
ಯೆಮೆನ್ ದೇಶದಲ್ಲಿ ಪ್ರಸ್ತುತ 2.4 ಮಿಲಿಯನ್ ಮಕ್ಕಳು ಈ ಸಮಸ್ಯೆಯನ್ನು ಹೊಂದಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅದು ಮತ್ತೆ ಶೇ. 20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ದೇಶಕ್ಕೆ ಮಕ್ಕಳ ಅಪೌಷ್ಟಿಕತೆ ಮತ್ತೂಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅಪೌಷ್ಟಿಕತೆ ಮತ್ತಷ್ಟು ಹೆಚ್ಚಾಗಲು ಕೋವಿಡ್ ಸೋಂಕು ಹರಡುವಿಕೆಯೇ ಕಾರಣವೆಂದು ಹೇಳಲಾಗುತ್ತದೆ. ಆರೋಗ್ಯ ಇಲಾಖೆಗಳೆಲ್ಲ ಕೋವಿಡ್ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದರೆ ಇತರ ಸಮಸ್ಯೆಗಳು ಸದ್ದಿಲ್ಲದೇ ಆರಂಭವಾಗಿವೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಗಳು ತೀರಾ ಹದಗೆಟ್ಟಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಒಂದಷ್ಟು ಕಾಲಾವಕಾಶ ಬೇಕಾಗಬಹುದು. 5 ವರ್ಷದ ಕೆಳಗೆ 6 ಸಾವಿರಕ್ಕಿಂತಲೂ ಅಧಿಕ ಮಕ್ಕಳಲ್ಲೂ ಆರೋಗ್ಯ ಸಮಸ್ಯೆ ನಿರಂತರವಾಗಿ ಕಾಡುತ್ತಿವೆ. ಮಕ್ಕಳಿಗೆ ಬೇಕಾದ ಸರಿಯಾದ ಆಹಾರ ಲಭಿಸದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಮಕ್ಕಳ ಆರೋಗ್ಯ ತಪಾಸಣೆಗೂ ಪೂರಕ ವ್ಯವಸ್ಥೆಯೂ ಇಲ್ಲಿಲ್ಲ ಎಂದು ವರದಿ ಬೊಟ್ಟು ಮಾಡಿದೆ.
ಈಗಾಗಲೇ ದೇಶ ಅತಿ ಹೆಚ್ಚು ಬಿಕ್ಕಟ್ಟನ್ನು ಹೊಂದಿದ್ದು ಕೋವಿಡ್‌ನಿಂದಾಗಿ ಚೇತರಿಕೆ ಅವಧಿ ಇನ್ನಷ್ಟು ನಿಧಾನವಾಗುವ ಲಕ್ಷಣಗಳಿವೆ. ಈಗಾಲೇ ಯುದ್ಧದಿಂದ ಉಂಟಾದ ಸಮಸ್ಯೆಗಳಿಂದ ಮಕ್ಕಳನ್ನು ಕಳೆದುಕೊಂಡ ದೇಶಕ್ಕೆ ಈಗ ಕೋವಿಡ್‌ನ ಭೀತಿ ಹೈರಾಣಾಗಿಸಿದೆ. ಈಗಾಗಲೇ ಇಲ್ಲಿನ ಜನಸಂಖ್ಯೆಯ ಶೇ. 25 ಮಂದಿಗೆ ಸೋಂಕು ದೃಢಪಟ್ಟಿದ್ದು ಶೀಘ್ರವಾಗಿ ಹರಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.