‘ಎತ್ತಿನಹೊಳೆ ನೀರು ಶೀಘ್ರವೇ ಲಭ್ಯ’


Team Udayavani, Jul 26, 2019, 5:33 AM IST

Kolar,-Chikkaballapur,

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯಡಿ ಭೂಸ್ವಾಧೀನ ಕಾಯ್ದೆಗೆ ಮಾಡಲಾಗಿರುವ ತಿದ್ದುಪಡಿಗೆ ರಾಜ್ಯಪಾಲರ ಅಂಗೀಕಾರ ದೊರೆತ ನಂತರ ಇದೀಗ ರಾಷ್ಟ್ರಪತಿಗಳ ಅಂಕಿತವೂ ದೊರೆತಿದೆ. ಇದರಿಂದಾಗಿ ಈ ಎರಡೂ ಜಿಲ್ಲೆಯ ಸಾರ್ವಜನಿಕರಿಗೆ ಎತ್ತಿನಹೊಳೆಯ ನೀರು ಅತಿ ಶೀಘ್ರದಲ್ಲಿ ಲಭಿಸುವ ಅವಕಾಶ ಹೆಚ್ಚಾಗಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆ ಆಗಿರುವ ಕಾರಣ ಭೂಸ್ವಾಧೀನ ಕಾಯ್ದೆ ಕಲಂ 23 ಮತ್ತು 24ನ್ನು ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿಗಳು, ಭೂ ಒಡೆಯರು ಮತ್ತು ಸರ್ಕಾರದ ಮಧ್ಯೆ ನೇರ ಮಾತುಕತೆ ನಡೆಸಿ ಸಮಾಧಾನಕರವಾಗಿರುವ ಬೆಲೆಯನ್ನು ನಿಗದಿಪಡಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ರಾಜ್ಯ ವಿಧಾನಸಭೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆಯನ್ನು ಅಂಗೀಕರಿಸಿತ್ತು.

ಇದು ರಾಜ್ಯಪಾಲರಿಂದ ಅಂಕಿತವಾಗಿ, ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗಿದ್ದು, ರಾಷ್ಟ್ರಪತಿಗಳಿಂದಲೂ ಅಂಗೀಕಾರ ಪಡೆದು, ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಿತರಿಸುವ ನೀರಿನ ಸಂಗ್ರಹಕ್ಕೆ ನಿರ್ಮಾಣವಾಗಿರುವ ಬೈಲಗೊಂಡ್ಲು ಜಲಾಶಯಕ್ಕೆ ಅಗತ್ಯವಿರುವ ಸುಮಾರು 2,500 ಎಕರೆ ಭೂಮಿಯ ಸ್ವಾಧೀನ ಯಾವುದೇ ವಿಳಂಬವಿಲ್ಲದೆ ತ್ವರಿತಗತಿಯಲ್ಲಿ ಸಾಗುತ್ತದೆ. ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ನೀಡುವ ಪರಿಹಾರ ಮೊತ್ತದಲ್ಲಿ ಇದ್ದ ವ್ಯತ್ಯಾಸದ ಮೌಲ್ಯವನ್ನೂ ಸರಿಪಡಿಸಿ, ಎಲ್ಲ ರೈತರಿಗೂ ಏಕರೀತಿಯ ಪರಿಹಾರ ಕೊಡಲು ನಿರ್ಧರಿಸಲಾಗಿದೆ. ಕೆ.ಸಿ.ವ್ಯಾಲಿ ಯೋಜನೆಯಡಿ ಇಲ್ಲಿಯವರೆಗೂ 240 ಎಂಎಲ್ಡಿ ಒಳಹರಿವು ಇದ್ದಿದ್ದು, ಈಗ ಕಳೆದ 10 ದಿನಗಳಿಂದ 280 ಎಂಎಲ್ಡಿ ಆಗಿ ಕಳೆದ 3 ದಿವಸದಿಂದ 290 ಎಂಎಲ್ಡಿ ನೀರಿನ ಒಳಹರಿವು ಬರುತ್ತಿದೆ. ಮಾಲೂರು-ಶಿವಾರಪಟ್ಟಣ ಮಾರ್ಗ, ಕೋಲಾರ-ಹೊಳಲಿ ಮಾರ್ಗ ಮತ್ತು ನರಸಾಪುರ, ಈ ಮೂರೂ ಮಾರ್ಗಗಳಲ್ಲಿ ಏಕಕಾಲದಲ್ಲಿ ನೀರು ಹರಿ ಬಿಡುತ್ತಿರುವುದರಿಂದ ರೈತರು ತಾಳ್ಮೆಯಿಂದ ಸಹಕರಿಸಬೇಕಾಗುತ್ತದೆ ಎಂದು ಮನವಿ ಮಾಡಿದರು. ಎಸ್‌.ಅಗ್ರಹಾರ ಕೆರೆಯ ನೀರಿನ ಸಂಗ್ರಹಾ ಸಾಮರ್ಥ್ಯ 390 ಎಂಸಿಎಫ್‌ಟಿ ಇರುತ್ತದೆ. ಈ ಹಿಂದೆ ಮರಳು ತೆಗೆಯುವುದು ಹಾಗೂ ಮಣ್ಣು ತೆಗೆಯುವ ಕಾರಣಗಳಿಂದ ಕೆರೆಯಲ್ಲಿ ಅನೇಕ ಕಡೆ ಬಹಳ ಆಳದ ಕುಣಿಗಳು ಬಿದ್ದಿದ್ದವು. ಈಗ ಕಳೆದ 20 ದಿನಗಳಿಂದ ಎಲ್ಲ ಹೀರಿಕೆ ಮುಗಿದು, ಸುಮಾರು 100 ಎಂಸಿಎಫ್‌ಟಿ ನೀರು ಈಗ ಅಗ್ರಹಾರ ಕೆರೆಯಲ್ಲಿ ಲಭ್ಯವಿದೆ ಎಂದರು.

ಇನ್ನೂ 200 ಎಂಸಿಎಫ್‌ಟಿ ನೀರು ಬರಬೇಕಿರುವ ಕಾರಣ ಸುಮಾರು ಒಂದೂವರೆ ತಿಂಗಳಿಗೂ ಮೇಲ್ಪಟ್ಟ ಸಮಯ ಬೇಕಾಗುತ್ತದೆ. ಕೆಳ ಭಾಗದ ಪ್ರದೇಶದ ರೈತರು ಅಂದರೆ ಮುದುವಾಡಿ, ಜನ್ನಘಟ್ಟ, ಚಿಲ್ಲಪ್ಪನಹಳ್ಳಿ ಮತ್ತು ಆಲವಟ್ಟ ಮಾರ್ಗದ ರೈತರು ತಾಳ್ಮೆಯಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಯರಗೊಳ್‌ ಅಣೆಕಟ್ಟು ಯೋಜನೆ ಕಾಮಗಾರಿಗೆ 40 ಅಡಿ ಮೀ (130 ಅಡಿ ಎತ್ತರ 400 ಮೀ ಅಗಲ) ಅಂದಾಜು ಮಾಡಲಾಗಿದ್ದು, ಡಿಸೆಂಬರ್‌ 2019ರ ಅಂತ್ಯಕ್ಕೆ ನಿಯೋಜಿತ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.