ಯೋಗ ನಿರೋಗ : ಸೇತು ಬಂಧಾಸನ
Team Udayavani, Jan 12, 2021, 12:23 PM IST
ಸೇತು ಎಂದರೆ ಸೇತುವೆ ಎಂದರ್ಥ. ಬಂಧ ಎಂದರೆ ರಚನೆ ಅಥವಾ ಜೋಡಣೆ ಎಂದು ಅರ್ಥವಿದೆ. ಈ ಆಸನ ಮಾಡುವಾಗ
ಶರೀರವನ್ನು ಸೇತುವೆ ಅಥವಾ ಕಮಾನಿನಂತೆ ಬಾಗಿಸಬೇಕಾಗುತ್ತದೆ. ನಮ್ಮ ಶರೀರ ಆಗ ಸೇತುವೆಯ ಆಕಾರದಲ್ಲಿ ಕಾಣುತ್ತದೆ. ಆ
ಕಾರಣದಿಂದಲೇ ಈ ಆಸನಕ್ಕೆ ಸೇತು ಬಂಧಾಸನ ಎಂದು ಹೆಸರು ಬಂದಿದೆ.
ಮಾಡುವ ವಿಧಾನ: ಮೊದಲಿಗೆ ಎರಡೂ ಕಾಲುಗಳನ್ನು ಮಡಿಚಿ. ಈಗ ಪೃಷ್ಠಗಳ ಹತ್ತಿರ ಎರಡೂ ಪಾದಗಳನ್ನು ತನ್ನಿ. ನಂತರ ಬಲ ಹಸ್ತದಿಂದ ಬಲಗಾಲಿನ ಮಣಿಗಂಟನ್ನು, ಎಡಹಸ್ತದಿಂದ ಎಡಗಾಲಿನ ಮಣಿಗಂಟನ್ನು ಹಿಡಿಯಬೇಕು. ಇಷ್ಟಾದ ಮೇಲೆ
ಸೊಂಟವನ್ನು ನಿಧಾನವಾಗಿ ಮೇಲೆತ್ತಿ. ಮಂಡಿಯ ನೇರಕ್ಕೆ ತೊಡೆಗಳು ಮತ್ತು ಸೊಂಟದ ಭಾಗ ಬರಬೇಕು. ಈಗ ಹೊಟ್ಟೆಯನ್ನು
ಒಳಗಡೆ ಎಳೆದುಕೊಳ್ಳಿ. ಎದೆಯನ್ನು ಮೇಲಕ್ಕೆ ಎತ್ತಿ ಹಿಂದಕ್ಕೆ ತಳ್ಳುತ್ತ ನೆತ್ತಿಯ ಭಾಗ ನೆಲಕ್ಕೆ ತಾಗಿರಬೇಕು. ಇಷ್ಟು ಮಾಡಿದರೆ ಸೇತು ಬಂಧಾಸನ ಮಾಡಿದ ಹಾಗೆ. ನಂತರ ಸೊಂಟವನ್ನು ಕೆಳಗಿಳಿಸಿ ನೆಲಕ್ಕೆ ತಾಗಿಸಬೇಕು. ಕೈಗಳನ್ನು ಬಿಟ್ಟು ಕಾಲುಗಳನ್ನು ಮುಂದೆ ಚಾಚಿ ವಿಶ್ರಾಂತಿ ಪಡೆಯಬೇಕು. ಈ ಆಸನ ಮಾಡುವಾಗ ಏಕಪ್ರಕಾರವಾಗಿ ಸರಾಗವಾಗಿ ಉಸಿರಾಡುತ್ತಿರಬೇಕು.
ಉಪಯೋಗಗಳು: ಅಸ್ತಮಾ, ಸಕ್ಕರೆ ಕಾಯಿಲೆ, ಗೂನು ಬೆನ್ನು, ಉಸಿರಾಟದ ತೊಂದರೆ, ಥೈರಾಯ್ಡ್ ಮತ್ತು ಗೊರಕೆ ಸಮಸ್ಯೆ ಇರುವವರಿಗೆ, ಸ್ಥೂಲ ದೇಹ ಹೊಂದಿದವರಿಗೆ ಈ ಆಸನ ಮಾಡುವುದರಿಂದ ಲಾಭವಿದೆ. ಈ ಆಸನ ಮಾಡುವುದರಿಂದ ಬೆನ್ನಿನ
ಭಾಗದ ನರಗಳು ಚೈತನ್ಯಗೊಳ್ಳುತ್ತವೆ. ಕೊಬ್ಬು ಕರಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.