ಯಮ ನಿಯಮಗಳ ಪಾಲನೆ : ಯೋಗದ ಮೂಲ ಸಿದ್ಧಾಂತ ಅಳವಡಿಸಿಕೊಳ್ಳಿ


Team Udayavani, Jun 18, 2021, 6:30 AM IST

ಯಮ ನಿಯಮಗಳ ಪಾಲನೆ : ಯೋಗದ ಮೂಲ ಸಿದ್ಧಾಂತ ಅಳವಡಿಸಿಕೊಳ್ಳಿ

ಯೋಗ ಪ್ರಕ್ರಿಯೆಗಳು ಬಾಹ್ಯ ಪ್ರಪಂಚದ ಶುದ್ಧೀಕರಣದ ಹೊರತಾಗಿ ದೈಹಿಕ, ಆಂತರಿಕ ಶುದ್ಧೀಕರಣದ ಮೂಲಕ ಉನ್ನತ ಮಟ್ಟದ ಮನಃಸ್ಥಿತಿಯನ್ನು ಪಡೆಯಲು ಇರುವ ಒಂದು ವಿಧಾನ. ಇದರಲ್ಲಿ ಯಮ ನಿಯಮಗಳ ಪಾಲನೆ ಅತ್ಯಗತ್ಯ. ಇವು ನಮ್ಮ ದಿನಚರಿಯ ಭಾಗವಾದಾಗ ಆರೋಗ್ಯ ಪೂರ್ಣ ಮತ್ತು ಚೈತನ್ಯದಾಯಕ ಜೀವನ ನಮ್ಮದಾಗುತ್ತದೆ. ಅದರಲ್ಲೂ ಮುಖ್ಯವಾಗಿ ಶೌಚ, ಆಹಾರಕ್ರಮ ಮತ್ತು ಪ್ರಾಣವಾಯು.

ಶೌಚ: ಶೌಚದ ಮುಖ್ಯ ಉದ್ದೇಶವೇ ಇನ್ನೊಬ್ಬರ ಸಂಸರ್ಗವನ್ನು ಮಾಡದೇ ಇರುವುದು. ಅಂದರೆ ಸಾಮಾಜಿಕ ಅಂತರ ಪಾಲನೆ ಮಾಡುವುದು. ಇದರಿಂದ ಆರೋಗ್ಯ ರಕ್ಷಣೆ ಸಾಧ್ಯ. ಶುಚಿತ್ವ ಉಳಿಯುತ್ತದೆ.

ತೀರಾ ಆತ್ಮೀಯರು, ಸಂಬಂಧಿಕರ ಹೊರ ತಾಗಿ ನಮ್ಮ ಪರಂಪರೆಯಲ್ಲಿ ಎಲ್ಲೂ ಮೈಮುಟ್ಟಿ ಮಾತನಾಡುವ ಕ್ರಮ ಇಲ್ಲ. ಆದರೆ ಕಾಲಕ್ರಮೇಣ ಇಂಥ ವರ್ತನೆ ಹೆಚ್ಚಾಗಿದೆ. ಇದನ್ನು ನಾವು ಕಡಿಮೆ ಮಾಡಬೇಕು. ಅಗತ್ಯವಿಲ್ಲದೆ ಯಾರನ್ನೂ ಮುಟ್ಟಬಾರದು. ಹಾಗೆಯೇ ಕೈ, ಬಾಯಿ, ಮುಖ, ದೇಹವನ್ನು ದಿನದಲ್ಲಿ ಕನಿಷ್ಠ ಮೂರು ಬಾರಿ ಇಲ್ಲವಾದರೆ ಎರಡು ಬಾರಿಯಾದರೂ ತೊಳೆಯಬೇಕು. ಹಾಗಾಗಿ ಶೌಚ ಎನ್ನುವುದು ಕೊರೊನಾ ಬರುವುದಕ್ಕಿಂತ ಮುಂಚೆಯೂ ಬಂದ ಅನಂತರವೂ ಗುಣಮುಖರಾದ ಮೇಲೂ ಮಾಡಲೇಬೇಕಿರುವ ಕಾರ್ಯ.

ಆಹಾರ ಕ್ರಮಗಳು: ಬಹುತೇಕ ಸೋಂಕುಗಳು ಸಸ್ಯಜನ್ಯವಾಗಿರುವುದು ಕಡಿಮೆ. ಈ ಕಾರಣದಿಂದಾಗಿಯೇ ಮಾಂಸಾಹಾರಕ್ಕಿಂತ ಸಸ್ಯಾಹಾರ ಉತ್ತಮ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ನಾವು ಆದಷ್ಟು ಸಸ್ಯಾಹಾರಕ್ಕೆ ಆದತ್ಯೆ ಕೊಡುವುದು ಒಳ್ಳೆಯದು. ಅಲ್ಲದೇ ಆಹಾರ ತಯಾರಿ, ಸೇವನೆಯ ವೇಳೆಯಲ್ಲಿ ಶುದ್ಧತೆಯನ್ನು ಪಾಲಿಸಬೇಕು. ಎಂಜಲು, ಮುಸುರೆಯಿಂದ ಸಾಂಕ್ರಾಮಿಕ ರೋಗಗಳು ಬರುವ ಅಪಾಯ ಅಧಿಕವಾಗಿರುತ್ತದೆ. ಇಲ್ಲೂ ಶುಚಿತ್ವವೇ ಪ್ರಾಧಾನ್ಯ.

ಪ್ರಾಣವಾಯು: ದೇಹದಲ್ಲಿ ಪ್ರಾಣವಾಯು ಅಥವಾ ಆಕ್ಸಿಜನ್‌ ಎಲ್ಲ ಅಂಗಾಂಗ ಗಳಿಗೂ ಸರಿಯಾಗಿ ಪೂರೈಕೆಯಾಗುವ ರೀತಿಯಲ್ಲಿ ನೋಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಸ್ಥೂಲವಾಗಿ ಮಾಡಬೇಕಿರುವುದು ಬೇರೆಬೇರೆ ಕೆಲಸಗಳು. ಇದನ್ನು ಸ್ವಲ್ಪ ಸೂಕ್ಷ್ಮವಾಗಿ ಹೇಳುವುದಿದ್ದರೆ ಆಸನಗಳು, ಪ್ರಾಣಾಯಾಮಗಳು ಈ ದಿಸೆಯಲ್ಲಿ ಬಲು ಉಪಯುಕ್ತ. ಕೊರೊನಾ ಮುಖ್ಯವಾಗಿ ಕಾಣಿಸಿಕೊಳ್ಳುವುದು ಮೂಗು, ಗಂಟಲು, ಶ್ವಾಸನಾಳ, ಶ್ವಾಸಕೋಶದಲ್ಲಿ. ಇಲ್ಲಿ ಶ್ವಾಸೋಚಾÌಸ ಸರಿಯಾಗಿದ್ದರೆ ವೈರಾಣುವಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ದೇಹದಲ್ಲಿ ಆಕ್ಸಿಜನ್‌ ಬಿಡುಗಡೆ ಸರಿಯಾಗಿರಬೇಕು. ಅದಕ್ಕಾಗಿ ಹೃದಯ, ಲಿವರ್‌ ಸರಿಯಾಗಿರಬೇಕು. ಹೀಗಾಗಿ ಇವೆರಡಕ್ಕೂ ಪೂರಕ ವಾದ ಆಹಾರ, ಆಸನಗಳನ್ನು ಪಾಲಿಸುವುದು ಅಗತ್ಯ. ಕೊರೊನಾದ ಇನ್ನೆಷ್ಟು ಅಲೆಗಳು ಬರು ತ್ತವೆ ಎಂಬುದು ತಿಳಿದಿಲ್ಲ. ಹೀಗಾಗಿ ಆರೋಗ್ಯವನ್ನು ಕಾಪಾಡುವುದು ಅತ್ಯಗತ್ಯ.

ಇದಕ್ಕಾಗಿ ಯೋಗಾಭ್ಯಾಸ ತುಂಬಾ ಅನುಕೂಲ.
ಪ್ರಾಣಾಯಾಮ, ಆಸನಗಳನ್ನು ಒಂದೇ ಬಾರಿ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸಾಮರ್ಥ್ಯ ಭಿನ್ನವಾಗಿರುತ್ತದೆ. ಹಂತಹಂತವಾಗಿ ಎಷ್ಟು ಮಾಡ ಬೇಕು ಎಂಬುದನ್ನು ತಜ್ಞರ ಸಲಹೆ ಪಡೆದು ಮಾಡ ಬೇಕು. ಯೋಗದ ಮೂಲ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕೊರೊನಾ ಮಾತ್ರವಲ್ಲ ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ತಡೆಯಬಹುದು.

ವಿವಿಧ ಆಸನಗಳು
ಟಿವಿ, ಲ್ಯಾಪ್‌ಟಾಪ್‌, ಮೊಬೈಲ್‌ನ ಬಳಕೆ ಕಡಿಮೆ ಮಾಡಬೇಕು. ಉಸಿರಾಟ ಪ್ರಕ್ರಿಯೆಗೆ ಪೂರಕವಾಗುವಂಥ ಚಲನವಲನಗಳನ್ನು ನಮ್ಮದಾಗಿಸಿಕೊಳ್ಳಬೇಕು. ಒಂದೇ ಕಡೆ ಗಂಟೆಗಟ್ಟಲೆ ಕುಳಿತಿರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೊರೊನಾ ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಶ್ವಾಸಕೋಶವನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಇದರ ಅಪಾಯ ಖಂಡಿತಾ ಕಡಿಮೆಯಾಗುವುದು. ಇದನ್ನು ಸುಸ್ಥಿತಿಯಲ್ಲಿಡಲು ಅದಕ್ಕೆ ಅನುಕೂಲವಾದ ಸುಲಭವಾದ ಆಸನಗಳು ಮುಖ್ಯವಾಗಿ ವೃಕ್ಷಾಸನ, ತ್ರಿಕೋನಾಸನ, ಪಾರ್ಶ್ವಕೋನಾಸನ, ಪೂರ್ವತ್ಥಾನಾಸಾನ, ಭುಜಂಗಾಸನ, ವಿಪರೀತ ಕರಣಿ ಮುದ್ರಾ ಮಾಡುವುದು ಉತ್ತಮ. ಹಾಗೆಯೇ ಎಲ್ಲ ಪ್ರಾಣಾಯಾಮಗಳು ಕೂಡ ಶ್ವಾಸಕೋಶವನ್ನು ವಿಕಾಸಮಾಡುತ್ತದೆ. ಪರಿಣಾಮ ಕೊರೊನಾದಿಂದಾಗುವ ಅಪಾಯ ಕಡಿಮೆಯಾಗುವುದು. ಮುಂಚಿತವಾಗಿಯೇ ಅಭ್ಯಾಸಮಾಡುತ್ತಿದ್ದರೆ ಉತ್ತಮ. ಕೊರೊನಾ ಬಂದ ಮೇಲೆ, ಅದರಿಂದ ಗುಣಮುಖ ರಾದ ಮೇಲೆ ಯೋಗ ತಜ್ಞರ ಸಲಹೆ ಪಡೆದು ಈ ಆಸನಗಳನ್ನು ಮಾಡುವುದು ಮತ್ತು ಅಭ್ಯಸಿಸುವುದು ಉತ್ತಮ.

– ಡಾ| ಕೃಷ್ಣ ಭಟ್‌, ಯೋಗ ತಜ್ಞರು, ಮಂಗಳೂರು

ಟಾಪ್ ನ್ಯೂಸ್

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

10-bantwala

Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

10-bantwala

Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.