ರಾಜ್ಯದೆಲ್ಲೆಡೆ ಯೋಗ ದಿನಾಚರಣೆ ಸಂಭ್ರಮ
Team Udayavani, Jun 22, 2019, 3:08 AM IST
ಬೆಂಗಳೂರು: ಒಂದೆಡೆ ಸೂರ್ಯೋದಯ, ಇನ್ನೊಂದೆಡೆ ಜಾತಿ, ಧರ್ಮ, ವಯಸ್ಸಿನ ಭೇದವಿಲ್ಲದೆ ಆ ಸೂರ್ಯನಿಗೆ ನಮಸ್ಕರಿಸಿದ ಸಾವಿರಾರು ಮಂದಿ. ಬಳಿಕ ಯೋಗದ ವಿವಿಧ ಆಸನಗಳು, ಪ್ರಾಣಾಯಾಮ, ಧ್ಯಾನ… ಇದು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಮುಂಜಾನೆ ರಾಜ್ಯದೆಲ್ಲೆಡೆ ನಡೆದ ಸಾಮೂಹಿಕ ಯೋಗದ ವೇಳೆ ಕಂಡು ಬಂದ ದೃಶ್ಯಗಳು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಇಲಾಖೆ, ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ಬೆಂಗಳೂರಿನ ವಿವಿಧ ಯೋಗ ಸಂಸ್ಥೆಗಳ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
“ಹೃದಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಹಾಗೂ ಇತರರು ಪಾಲ್ಗೊಂಡಿದ್ದರು. ಜಗತ್ತಿನ ಹಿರಿಯ ವ್ಯಕ್ತಿ ಮತ್ತು ಯೋಗ ಸಾಧಕರಾದ 123 ವರ್ಷದ ಸ್ವಾಮಿ ಶಿವಾನಂದ ಅವರು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದರು. ಅರ್ಜಂಟೀನಾದ ಏಕಾರಾ ದೇವಿನಾಥ ಕೂಡ ಪಾಲ್ಗೊಂಡಿದ್ದರು.
ಇದೇ ವೇಳೆ, ಉತ್ತಮ ಆರೋಗ್ಯಕ್ಕಾಗಿ 642211 ಆರೋಗ್ಯ ಸೂತ್ರ ಬಿಡುಗಡೆ ಮಾಡಲಾಯಿತು. ಇದರ ವಿಸ್ತೃತರೂಪ, “ಮನುಷ್ಯ ನಿತ್ಯ 6 ಗಂಟೆ ನಿದ್ರೆ, 4 ಲೀ. ನೀರು, ದಿನಕ್ಕೆ 2 ಸಲ ಆಹಾರ ಸೇವನೆ, 2 ಸಲ ಪ್ರಾರ್ಥನೆ, ಒಂದು ಗಂಟೆ ಯೋಗಾಭ್ಯಾಸ, ವಾರಕ್ಕೆ ಒಂದು ದಿನ ಉಪವಾಸ ಮಾಡಬೇಕು ಎಂಬುದಾಗಿದೆ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.