ಯೋಗಾ ನಿರೋಗ
Team Udayavani, Jun 9, 2020, 4:29 AM IST
ಯೋಗ ಮಾಡುವುದಕ್ಕೆ ಸಮಯ ಇಲ್ಲಾರೀ ಅನ್ನುವವರಿದ್ದಾರೆ. ಅಂಥವರು, ದೇಹವನ್ನು ಸ್ಟ್ರಚ್ ಆದರೂ ಮಾಡಬೇಕಾಗುತ್ತದೆ. ಇದಕ್ಕೆ ಸ್ಟ್ರಚಿಂಗ್ ಎಕ್ಸಸೈಸ್ ಅಂತಲೂ ಕರೆಯುತ್ತಾರೆ. ರಾತ್ರಿ ಸುಮಾರು 7-8 ತಾಸು ಒಂದೆರಡು ಭಂಗಿಯಲ್ಲಿ ಮಲಗಿರುವುದರಿಂದ, ರಕ್ತ ಸಂಚಾರ ವೇಗವಾಗಿ ಆಗುವುದಿಲ್ಲ. ಹೀಗಾಗಿ, ಬೆಳಗ್ಗೆ ಎದ್ದನಂತರ ಸ್ಟ್ರಚಿಂಗ್ ಎಕ್ಸಸೈಸ್ ಮಾಡಿದರೆ, ಯೋಗದಷ್ಟು ಅಲ್ಲದೇ ಇದ್ದರೂ, ಸ್ವಲ್ಪ ಪ್ರಮಾಣದಲ್ಲಿಯಾದರೂ ದೇಹಕ್ಕೆ ವ್ಯಾಯಾಮವಾಗುತ್ತದೆ.
ಸ್ಟ್ರಚಿಂಗ್ ಎಕ್ಸಸೈಸ್‌ನಲ್ಲಿ ಮುಖ್ಯವಾಗಿ ಕತ್ತು ಹಾಗೂ ಭುಜವನ್ನು ತಿರುಗಿಸುವುದು, ಎರಡೂ ಕೈಗಳನ್ನು ಮಂಡಿಯ ಮೇಲೆ ಇಟ್ಟು, ಸೊಂಟ ಬಗ್ಗಿಸಿ, ಮಂಡಿಯ ಚಿಪ್ಪಿನ ಭಾಗವನ್ನು ವೃತ್ತಾಕಾರದಲ್ಲಿ ತಿರುಗಿಸುವುದು ಮುಖ್ಯ. ಹೀಗೆ ಮಾಡುವುದರಿಂದ, ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಸಣ್ಣ ಪುಟ್ಟ ನೋವು ಗಳಿದ್ದರೆ ಕಡಿಮೆ ಯಾಗುತ್ತದೆ. ಸ್ಟ್ರಚ್ಚಿಂಗ್ ಎಕ್ಸಸೈಸ್ ಆದಮೇಲೆ, ಭಸ್ಕಿ ಹೊಡೆಯುವುದನ್ನು ಮರೆಯಬಾರದು.
ಇದರಿಂದ ಕಾಲಿನ ಮಾಂಸಖಂಡಗಳು, ತೊಡೆಯ ಭಾಗ, ಮಂಡಿ ಚಿಪ್ಪು, ಸೊಂಟ ಇವಿಷ್ಟಕ್ಕೂ ಒಟ್ಟಿಗೆ ವ್ಯಾಯಾಮ ಆದಂತೆ ಆಗುತ್ತದೆ. ಆರಂಭದಲ್ಲಿ ಸ್ವಲ್ಪ ಕಾಲು ನೋವು ಬಂದೀತು. ಅದರಿಂದ ಗಾಬರಿ ಯಾಗದೆ ಮುಂದುವರಿಸಿ. ದಿನಕ್ಕೆ ಹತ್ತು ಸ್ಟ್ರಚ್ಚಿಂಗ್ ಎಕ್ಸಸೈಜ್ ಗುರುತು ಮಾಡಿ ಕೊಂಡು, ಪ್ರತಿಯೊಂದನ್ನೂ ಎರಡು ನಿಮಿಷ ಮಾಡಿದರೆ ಸಾಕು. ಒಟ್ಟು 20 ನಿಮಿಷದಲ್ಲಿ ದೇಹದ ರಕ್ತ ಸಂಚಾರವನ್ನು ಸರಿ ಮಾಡಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.