Ayodhya: ಡಿ.15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಸಿದ್ಧ- ಉ.ಪ್ರ. ಸಿಎಂ ಯೋಗಿ ಘೋಷಣೆ
Team Udayavani, Dec 2, 2023, 11:49 PM IST
ಅಯೋಧ್ಯೆ/ಲಕ್ನೋ: ಶ್ರೀರಾಮ ಮಂದಿ ರದ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿ ರುವಂತೆಯೇ ಅಯೋಧ್ಯೆಯಲ್ಲಿ ಅಂತಾ ಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಬಿರುಸುಗೊಂಡಿದೆ. ಡಿ. 15ರ ವೇಳೆಗೆ ವಿಮಾನ ನಿಲ್ದಾಣದ ಮೊದಲ ಹಂತ ಸಿದ್ಧವಾಗಿರಲಿದೆ ಎಂದು ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ನಿರ್ಮಾಣ ವಿಚಾರ ಕುರಿತಂತೆ ಅಧಿಕಾರಿಗಳೊಂದಿಗೆ ಶನಿವಾರ ಯೋಗಿ ಪರಿಶೀಲನ ಸಭೆ ನೆಡೆಸಿದ್ದಾರೆ. ಈ ವೇಳೆ 178 ಎಕ್ರೆ ವಿಸ್ತೀರ್ಣದಲ್ಲಿ ಸಾಮಾನ್ಯವಾದ ವಿಮಾನ ನಿಲ್ದಾಣ ವನ್ನು ಅಯೋಧ್ಯೆ ಹೊಂದಿತ್ತು. ಇದೀಗ ಅದನ್ನು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸರಕಾರದ ಇದಕ್ಕಾಗಿ 821 ಎಕ್ರೆ ಭೂಮಿಯನ್ನೂ ನೀಡಿದೆ. ಕೆಲಸಗಳು ಭರದಿಂದ ಸಾಗುತ್ತಿದ್ದು, ಅಯೋಧ್ಯೆಗೆ ಅಗತ್ಯವಿರುವಂಥ ಎಲ್ಲ ರೀತಿಯ ಉನ್ನತ ಮಟ್ಟದ ಮೂಲಸೌಕರ್ಯವನ್ನು ಕಲ್ಪಿಸಿಕೊಡುವ ಸರಕಾರದ ಉದ್ದೇಶ ಶೀಘ್ರ ಈಡೇರಲಿದೆ ಎಂದಿದ್ದಾರೆ.
ಮೊದಲ ಹಂತದ 65,000 ಚದರ ಅಡಿ ವ್ಯಾಪ್ತಿಯ ಟರ್ಮಿನಲ್ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದು ಗಂಟೆಗೆ 2 ರಿಂದ 3 ವಿಮಾನಗಳನ್ನು ಭರಿಸುವ ಸಾಮರ್ಥ್ಯ ಹೊಂದಿದೆ. ಬೋಯಿಂಗ್ 737, ಏರ್ಬಸ್ 319, ಏರ್ಬಸ್ 320 ರೀತಿಯ ವಿಮಾನಗಳು ಲ್ಯಾಂಡ್ಆಗಲು 2,200 ಮೀಟರ್ ವ್ಯಾಪ್ತಿಯ ರನ್ವೇ ಇರಲಿದೆ. ಅದರ ನಿರ್ಮಾಣವು ಅಂತಿಮ ಹಂತ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸಚಿವ ವಿ.ಕೆ. ಸಿಂಗ್ ಇದ್ದರು.
ಆರಂಭ: 2024ರ ಜ. 22ರಂದು ನಡೆಯಲಿರುವ ಸಮಾರಂಭಕ್ಕೆ ಅತಿಥಿ ಗಳನ್ನು ಆಹ್ವಾನಿಸುವ ಪ್ರಕ್ರಿಯೆ ಆರಂಭ ವಾಗಿದ್ದು, ಸಾಧುಗಳು, ಸಂತರು, ದಾನಿಗಳು, ರಾಜಕಾರಣಿಗಳು ಸೇರಿ ದಂತೆ 6,000 ಅತಿಥಿಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲು ಮಂದಿರ ಟ್ರಸ್ಟ್ ಆರಂಭಿಸಿರುವುದಾಗಿ ಶನಿವಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.