ಮಕ್ಕಳ ಲಸಿಕೆಗೆ ಈ ವಾರವೇ ಒಪ್ಪಿಗೆ?
ಝೈಡಸ್ ಕ್ಯಾಡಿಲಾದ ಲಸಿಕೆಗೆ ಅನುಮತಿ ಸಿಗುವ ಸಾಧ್ಯತೆ
Team Udayavani, Aug 9, 2021, 8:30 PM IST
ನವದೆಹಲಿ/ವಾಷಿಂಗ್ಟನ್: ಝೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆಗೆ ಈ ವಾರವೇ ತುರ್ತು ಬಳಕೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಅಧಿಕವಾಗಿದೆ. ಈ ಕಂಪನಿಯು ಭಾರತದಲ್ಲಿ 12-18 ವಯೋಮಾನದವರೂ ಸೇರಿದಂತೆ ಭಾರೀ ಸಂಖ್ಯೆಯ ಜನರ ಮೇಲೆ ದೊಡ್ಡ ಮಟ್ಟದ ಕ್ಲಿನಿಕಲ್ ಟ್ರಯಲ್ ನಡೆಸಿದೆ. ಝೈಕೋವ್-ಡಿ ಲಸಿಕೆಗೆ ಒಪ್ಪಿಗೆ ಸಿಕ್ಕಿದರೆ, ದೇಶದಲ್ಲಿ 12-18ರ ವಯೋಮಾನದವರಿಗೆ ದೊರಕುವ ಮೊದಲ ಲಸಿಕೆ ಇದಾಗಲಿದೆ.
ಝೈಕೋವ್-ಡಿ ಎನ್ನುವುದು ಮೂರು ಡೋಸ್‌ನ ಲಸಿಕೆಯಾಗಿದೆ. ಇದನ್ನು ಟ್ರೋಪಿಸ್ ಎಂಬ ಸೂಜಿರಹಿತ ವ್ಯವಸ್ಥೆ ಮೂಲಕ ನೀಡಲಾಗುತ್ತದೆ. ಇದರಿಂದಾಗಿ ಅಡ್ಡ ಪರಿಣಾಮವೂ ಕಡಿಮೆಯಿರುತ್ತದೆ ಎಂದು ಹೇಳಲಾಗಿದೆ.
35,499 ಪ್ರಕರಣ:
ಭಾನುವಾರದಿಂದ ಸೋಮವಾರಕ್ಕೆ ದೇಶದಲ್ಲಿ 35,499 ಮಂದಿಗೆ ಸೋಂಕು ತಗುಲಿದ್ದು 447 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,02,188ಕ್ಕಿಳಿದಿದೆ. ಗುಣಮುಖ ಪ್ರಮಾಣ ಶೇ.97.39ಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:ತಿಂಗಳಂತ್ಯದಲ್ಲಿ ವಿದ್ಯಾಗಮ ನಿರ್ಧಾರ: ಶಿಕ್ಷಣ ಸಚಿವ ನಾಗೇಶ್
ಐಸಿಯು ಬೆಡ್‌ಗೂ ಪರದಾಟ!
ಅಮೆರಿಕದಲ್ಲಿ ಕೋವಿಡ್ ಡೆಲ್ಟಾ ರೂಪಾಂತರಿಯ ಅಬ್ಬರ ತೀವ್ರಗೊಂಡಿದ್ದು, ದಿನಕ್ಕೆ ಲಕ್ಷ ದಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. 24 ಲಕ್ಷ ಜನ ಸಂಖ್ಯೆಯಿರುವ ಆಸ್ಟಿನ್ ನಗರದಲ್ಲಿ ಈಗ ಖಾಲಿಯಿರುವುದು ಕೇವಲ 6 ಐಸಿಯು ಬೆಡ್‌ಗಳು. ಇದು ಪರಿಸ್ಥಿತಿಯ ಭೀಕರತೆಯನ್ನು ತೋರಿಸಿದೆ. ಇಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕೋವಿಡ್ ನಿಯಂತ್ರಣದಲ್ಲಿ ಅಮೆ ರಿಕವು ವಿಫಲವಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಿರ್ದೇಶಕ ಫ್ರಾನ್ಸಿಸ್ ಕೋಲಿನ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.