ಕ್ಯಾನ್ಸರ್ ಗೆದ್ದ ನವಾರೊ ಫ್ರೆಂಚ್ ಕಣಕ್ಕೆ : ಕಳೆದ ತಿಂಗಳಷ್ಟೇ ಮುಗಿದಿತ್ತು ಚಿಕಿತ್ಸೆ
Team Udayavani, May 27, 2021, 7:15 AM IST
ಪ್ಯಾರಿಸ್: ವಿಶ್ವದ ಮಾಜಿ ನಂ. 6 ಆಟಗಾರ್ತಿ, ಸ್ಪೇನಿನ 32ರ ಹರೆಯದ ಕಾರ್ಲಾ ಸೂರೆಜ್ ನವಾರೊ ಮುಂಬರುವ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ರ್ಯಾಕೆಟ್ ಹಿಡಿಯಲಿದ್ದಾರೆ. ಪ್ಯಾರಿಸ್‌ನ ಆವೆಯಂಗಳದಲ್ಲಿ ಮತ್ತೂಂದು ಸುತ್ತಿನ ಕದನಕ್ಕೆ ಅಣಿಯಾಗಲಿದ್ದಾರೆ. ಇದರಲ್ಲೇನು ವಿಶೇಷ ಅಂದಿರಾ? ವಿಶೇಷ ಇದೆ. ನವಾರೊ ಇತ್ತೀಚೆಗಷ್ಟೇ ಕ್ಯಾನ್ಸರ್ ಮಾರಿಯನ್ನು ಹಿಮ್ಮೆಟ್ಟಿಸಿ ಹೊಸ ಸ್ಫೂರ್ತಿಯೊಂದಿಗೆ ಬಂದಿದ್ದಾರೆ!
32 ವರ್ಷದ ಕಾರ್ಲಾ ಸೂರೆಜ್ ನವಾರೊ ಅವರಲ್ಲಿ ಕಳೆದ ಸೆಪ್ಟಂಬರ್ ವೇಳೆ ಬಿಳಿ ರಕ್ತಕಣದ ಕ್ಯಾನ್ಸರ್ ಗೋಚರಿಸಿತ್ತು. ಇದು ಆರಂಭಿಕ ಹಂತದಲ್ಲೇ ಪತ್ತೆಯಾದ್ದರಿಂದ ಅವರು ಪ್ರಾಣಾಪಾಯಕ್ಕೆ ಸಿಲುಕಲಿಲ್ಲ. ಸತತ 6 ತಿಂಗಳ ಕಾಲ ಕಿಮೋಥೆರಪಿಗೆ ಒಳಗಾಗಿ ಜಯಿಸಿ ಬಂದರು. ಈ ನಡುವೆ ಡಿಸೆಂಬರ್‌ನಲ್ಲೇ ಮರಳಿ ಅಭ್ಯಾಸಕ್ಕೆ ಇಳಿದಿದ್ದರು. ಆಗಿನ್ನೂ ಚಿಕಿತ್ಸೆ ಜಾರಿಯಲ್ಲಿತ್ತು. ಕಳೆದ ತಿಂಗಳಷ್ಟೇ ಚಿಕಿತ್ಸೆ ಮುಗಿದಿತ್ತು. ಅಷ್ಟರಲ್ಲಿ ಪ್ಯಾರಿಸ್ ಅಂಗಳಕ್ಕೆ ಧುಮುಕಲು ಸಜ್ಜಾಗಿದ್ದಾರೆ!
“ಅಂಕಣದಲ್ಲೇ ಗುಡ್‌ಬೈ ಹೇಳಬೇಕು’
“ನನ್ನ ಪಾಲಿಗೆ ಇದು ಯಾವತ್ತೂ ಸ್ಪೆಷಲ್ ಟೂರ್ನಮೆಂಟ್. ಪ್ಯಾರಿಸ್‌ನಲ್ಲಿ ಆಡುವ ಮೂಲಕವೇ ಮತ್ತೂಂದು ಸುತ್ತಿನ ರ್ಯಾಕೆಟ್ ಸ್ಪರ್ಧೆಗೆ ಅಣಿಯಾಗಬೇಕು ಎಂಬುದು ನನ್ನ ಯೋಜನೆ ಆಗಿತ್ತು. ಇದೀಗ ಸಾಕಾರಗೊಳ್ಳುತ್ತಿದೆ’ ಎಂದು ಎರಡು ಬಾರಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನವಾರೊ ಖುಷಿಯಿಂದ ಹೇಳಿದ್ದಾರೆ. ಸದ್ಯ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 118ನೇ ಸ್ಥಾನದಲ್ಲಿದ್ದಾರೆ.
“ಟೆನಿಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ರೊಲ್ಯಾಂಡ್ ಗ್ಯಾರಸ್ ಸವಿನೆನಪು ರೋಮಾಂಚನ. ನನ್ನ ವೃತ್ತಿ ಬದುಕಿನ ಸ್ಮರಣೀಯ ಕ್ಷಣಗಳಿಗೆ ಇದು ಸಾಕ್ಷಿಯಾಗಿದೆದ. ಟೆನಿಸ್ ಅಂಕಣದಲ್ಲೇ ಗುಡ್‌ಬೈ ಹೇಳುವುದು ನನ್ನ ಯೋಜನೆಯೂ ಹೌದು’ ಎಂದು ನವಾರೊ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Winter session: ವರ್ಷದ ಕೊನೆಯ ಸಂಸತ್ ಅಧಿವೇಶನ ಫಲಪ್ರದವಾಗಲಿ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.