ಜನರೇಟರ್ ಬಾಡಿಗೆಗೆ ಪಡೆದು ಪಂದ್ಯ ವೀಕ್ಷಿಸಿದ್ದೆ: ಆರ್ ಸಿಬಿ ಬೌಲರ್ ಆಕಾಶ್ ದೀಪ್
Team Udayavani, Apr 12, 2022, 9:55 AM IST
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಆಕಾಶ್‌ದೀಪ್ ವೃತ್ತಿಪರವಾಗಿ ಕ್ರಿಕೆಟ್ ಆಟವನ್ನು ಆಯ್ಕೆ ಮಾಡಿದ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ರೋಚಕ ಹೋರಾಟವನ್ನು ವೀಕ್ಷಿಸಿದ ಬಳಿಕ ಆಕಾಶ್‌ದೀಪ್ ಕ್ರಿಕೆಟ್ ಆಟಕ್ಕೆ ಮನಸೋತರು. ಈ ಹೋರಾಟದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತಲ್ಲದೇ ಚೊಚ್ಚಲ ಬಾರಿ ಪ್ರಶಸ್ತಿ ಜಯಿಸಿತ್ತು.
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದಿರುವ 23ರ ಹರೆಯದ ಆಕಾಶ್ ದೀಪ್ 2007ರ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ನೆನಪುಗಳನ್ನು ಬೆಂಗಳೂರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಗ್ರಾಮದಲ್ಲಿ ಅವರು ಈ ಪಂದ್ಯ ವೀಕ್ಷಿಸಿದ್ದರು. ಅಲ್ಲಿ ವಿದ್ಯುತ್ ಮತ್ತು ನೀರು ಇರಲಿಲ್ಲ. ಟೀವಿ ಪರದೆಯಲ್ಲಿ ವೀಕ್ಷಿಸುವ ಉದ್ದೇಶದಿಂದ ಅವರು ಸ್ಥಳೀಯರಿಂದ ಹಣವನ್ನು ಸಂಗ್ರಹಿಸಿದ್ದರು. ಹೀಗೆ ಸಂಗ್ರಹಿಸಿದ ಹಣದಿಂದ ಟೀವಿಯೊಂದನ್ನು ಖರೀದಿಸಿದ್ದರು. ವಿದ್ಯುತ್ ಇಲ್ಲದ ಕಾರಣ ಜನರೇಟರ್ ಅನ್ನು ಬಾಡಿಗೆಗೆ ಖರೀದಿಸಿ ಗ್ರಾಮದ ಜನತೆಗೆ ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಯಿತು. ಈ ಟೀವಿ ಎಲ್ಲರಿಗೂ ನೋಡುವಷ್ಟು ದೊಡ್ಡದಾಗಿರಲಿಲ್ಲ ಎಂದು ಆಕಾಶ್‌ದೀಪ್ ವಿವರಿಸಿದರು.
ಇದನ್ನೂ ಓದಿ:ಯಾರಿದು… ರಾಜಸ್ಥಾನವನ್ನು ವಿನ್ ಮಾಡಿಸಿದ ಕುಲದೀಪ್ ಸೇನ್?
ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ ಬಾರಿಸಿದ ಕ್ಷಣವನ್ನು ಗ್ರಾಮದ ಜನತೆಯೊಂದಿಗೆ ಬಹಳ ಖುಷಿಯಲ್ಲಿ ಆಚರಿಸಿದ್ದೆವು. ಇದೇ ಖುಷಿಯ ಘಟನೆ ಕ್ರಿಕೆಟನ್ನು ವೃತ್ತಿಪರವಾಗಿ ಸ್ವೀಕರಿಸಲು ಪ್ರೇರಣೆ ನೀಡಿತು. ಚಿಕ್ಕ ಬಾಲಕನಾಗಿದ್ದಾಗ ಫೈನಲ್ ಪಂದ್ಯವನ್ನು ನೋಡಿದ ಮತ್ತು ವೀಕ್ಷಿಸಿದ ಅಪಾರ ಜನಸ್ತೋಮವನ್ನು ನೋಡಿದಾಗ ನನಗೆ ಕ್ರಿಕೆಟ್ ಮೇಲೆ ಆಕರ್ಷಣೆಯಾಯಿತು. ಭಾರತ ವಿಶ್ವಕಪ್ ಗೆದ್ದ ಬಳಿಕ ಜನರ ಸಂಭ್ರಮ, ಉತ್ಸಾಹ, ಭಾವನೆಯನ್ನು ಗಮನಿಸಿದಾಗ ವೃತ್ತಿಪರವಾಗಿ ಕ್ರಿಕೆಟ್ ಆಡುವ ಕನಸು ಕಂಡೆ ಎಂದವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.