ರಾಜಸ್ಥಾನ ರಾಯಲ್ಸ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವಾಡುತ್ತಾರೆಯೇ ಎಂ.ಎಸ್.ಧೋನಿ?
Team Udayavani, May 20, 2022, 3:26 PM IST
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಇಂದು ತಮ್ಮ ಅಂತಿಮ ಲೀಗ್ ಪಂದ್ಯವನ್ನಾಡಲಿದೆ. ರಾಜಸ್ಥಾನ ರಾಯಲ್ಸ್ ತಂಡ ಪ್ಲೇ ಆಫ್ ಗೆ ತೇರ್ಗಡೆ ಹೊಂದಿದ್ದರೆ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2022ರ ಕೂಟದ ಕೊನೆಯ ಪಂದ್ಯವಾಡುತ್ತಿದೆ.
ಕಳೆದ ಬಾರಿಯ ಚಾಂಪಿಯನ್ ತಂಡ ಸಿಎಸ್ ಕೆ ಈ ಬಾರಿ ಕಳಪೆ ಪ್ರದರ್ಶನ ನೀಡಿ 9ನೇ ಸ್ಥಾನದಲ್ಲಿದೆ. ಇಂದಿನ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಗೆದ್ದರೂ ಅಥವಾ ಸೋತರೂ ಸಿಎಸ್ ಕೆ 9ನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ.
ಆದರೆ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈ ಪಂದ್ಯವೇ ಅಂತಿಮ ಐಪಿಎಲ್ ಪಂದ್ಯವಾಗಲಿದೆಯೇ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡಿದೆ. ಈ ಬಾರಿಯ ಕೂಟದ ಆರಂಭದಲ್ಲಿ ನಾಯಕತ್ವ ತ್ಯಜಿಸಿ ರವೀಂದ್ರ ಜಡೇಜಾಗೆ ಕ್ಯಾಪ್ಟನ್ ಪಟ್ಟ ಕಟ್ಟಿದ್ದ ಧೋನಿ ನಂತರ ಅನಿವಾರ್ಯವಾಗಿ ನಾಯಕತ್ವ ವಹಿಸಿದ್ದರು. ಆದರೆ 40 ವರ್ಷ ಪ್ರಾಯದ ಧೋನಿ ಮುಂದೆ ಆಡುತ್ತಾರೆಯೇ ಎನ್ನುವ ಬಗ್ಗೆ ಸ್ವತಃ ಧೋನಿ ಖಚಿತ ಪಡಿಸಬೇಕಿದೆ.
ಇದನ್ನೂ ಓದಿ:ಆಸಕ್ತಿಯೇ ನಮ್ಮನ್ನು ಮುನ್ನಡೆಸುವ ದೊಡ್ಡ ಶಕ್ತಿ : ಘಟಂ ವಾದಕ ಗಿರಿಧರ್ ಉಡುಪ ಮನದ ಮಾತು…
ಮರಳಿ ನಾಯಕತ್ವ ವಹಿಸಿದ ಸಮಯದಲ್ಲಿ ಧೋನಿ ಈ ಬಗ್ಗೆ ಮಾತನಾಡಿದ್ದರು. “ನೀವು ಖಂಡಿತವಾಗಿಯೂ ನನ್ನನ್ನು ಹಳದಿ ಜರ್ಸಿಯಲ್ಲಿ ನೋಡುತ್ತೀರಿ. ಈ ಹಳದಿ ಜೆರ್ಸಿಯೋ ಅಥವಾ ಇನ್ನಾವುದೋ ಹಳದಿ ಜೆರ್ಸಿಯೋ ಕಾದು ನೋಡಬೇಕು” ಎಂದು ಧೋನಿ ಮಾರ್ಮಿಕವಾಗಿ ನುಡಿದಿದ್ದರು.
ರಾಯಲ್ ಕದನ: ಈಗಾಗಲೇ ಕೂಟದಿಂದ ನಿರ್ಗಮಿಸಿರುವ ಧೋನಿ ಪಡೆಗೂ ಇದು ಕೊನೆಯ ಪಂದ್ಯ. 5ನೇ ಗೆಲುವನ್ನು ಸಂಭ್ರಮಿಸುವುದು ಚೆನ್ನೈ ಗುರಿ. ಆದರೆ ಗೆದ್ದರೂ ಸೋತರೂ ಚೆನ್ನೈ ಉಳಿಯುವುದು ಮಾತ್ರ 9ರಷ್ಟು ಕೆಳ ಸ್ಥಾನದಲ್ಲೇ.
ರಾಜಸ್ಥಾನ್ ರಾಯಲ್ಸ್ ಸಾಮಾನ್ಯ ಗೆಲುವು ಸಾಧಿಸಿದರೂ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆಯುತ್ತದೆ. ಸದ್ಯ ಅದು 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಗೆದ್ದರೆ ಉತ್ತಮ ರನ್‌ರೇಟ್ ಆಧಾರದಲ್ಲಿ ಲಕ್ನೋವನ್ನು ಮೂರಕ್ಕೆ ಇಳಿಸಲಿದೆ. ರಾಜಸ್ಥಾನ್ +0.304 ರನ್ ರೇಟ್ ಹೊಂದಿದ್ದರೆ, ಲಕ್ನೋ +0.251 ರನ್‌ರೇಟ್ ಗಳಿಸಿದೆ.
ಅಕಸ್ಮಾತ್ ಸೋತದ್ದೇ ಆದರೆ ರಾಜಸ್ಥಾನ್‌ಗೆ ನಷ್ಟವೇನೂ ಇಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಆಗ ಅದು ಮೂರರಲ್ಲೇ ಉಳಿಯಬಹುದು ಅಥವಾ ನಾಲ್ಕಕ್ಕೆ ಇಳಿಯಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.