ರಣವೀರ್-ರೆಹಮಾನ್ ಕಾಂಬಿನೇಶನ್ ಐಪಿಎಲ್ ಜೈ ಹೋ
Team Udayavani, May 30, 2022, 12:06 AM IST
ಅಹ್ಮದಾಬಾದ್: “ಕೇಮ್ಚೊ ಅಹ್ಮದಾಬಾದ್? (ಹೇಗಿದ್ದೀರಿ, ಅಹ್ಮದಾಬಾದ್?) ಎಂದು ರವಿಶಾಸ್ತ್ರಿ ಗುಜರಾತಿಯಲ್ಲಿ ಉದ್ಘೋಷಿಸುವುರೊಂದಿಗೆ ಐಪಿಎಲ್ ಸಮಾರೋಪ ಸಮಾರಂಭ ರಂಗೇರಿಸಿಕೊಂಡಿತು.
ಬಾಲಿವುಡ್ ಹೀರೋ ರಣವೀರ್ ಸಿಂಗ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಜತೆಗೂಡಿ ಅಹ್ಮದಾಬಾದ್ ಸ್ಟೇಡಿಯಂನಲ್ಲಿ ಹೊಸತೊಂದು ಲೋಕವನ್ನು ತೆರೆದಿರಿಸಿದರು.
ಗಿನ್ನೆಸ್ ದಾಖಲೆಯ ಜೆರ್ಸಿ
ಮೊದಲು ಗಿನ್ನೆಸ್ ದಾಖಲೆಯ ಗಾತ್ರದ ಐಪಿಎಲ್ ಜೆರ್ಸಿಯ ಚಿತ್ತಾರವೊಂದು ಅಂಗಳದಲ್ಲಿ ಅರಳಿತು. ಇದು ಎಲ್ಲ ಐಪಿಎಲ್ ಫ್ರಾಂಚೈಸಿಗಳ ಲಾಂಛನವನ್ನು ಹೊಂದಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಮತ್ತು ಐಪಿಎಲ್ ಚೇರ್ಮನ್ ಬೃಜೇಶ್ ಪಟೇಲ್ ಇದನ್ನು ಅನಾವರಣಗೊಳಿಸಿ ಗಿನ್ನೆಸ್ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು. ಇತ್ತಂಡಗಳ ನಾಯಕರಾದ ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಐಪಿಎಲ್ ಟ್ರೋಫಿಯೊಂದಿಗೆ ನಿಂತು ಪೋಸ್ ಕೊಟ್ಟರು.
8 ದಶಕಗಳ ಯಶೋಗಾಥೆ
ಈ ರಂಗಾರಂಗ್ ಕಾರ್ಯಕ್ರಮದ ನಡುವೆ ಭಾರತದ 8 ದಶಕಗಳ ಕ್ರಿಕೆಟ್ ಯಶಸ್ಸಿನ ಚಿತ್ತಾರವೊಂದು ತೆರೆದು ಕೊಂಡಿತು. ಭಾರತೀಯ ಕ್ರಿಕೆಟಿನ ಎಲ್ಲ ಸಾಧನೆಗಳ ದೃಶ್ಯಾವಳಿ ಮೂಡಿಬಂತು.
1983ರ ವಿಶ್ವಕಪ್ ವಿಜಯ; ಗಾವಸ್ಕರ್, ತೆಂಡುಲ್ಕರ್, ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ಮೊದಲಾದವರ ಸಾಧನೆಯ ಯಶೋಗಾಥೆ; ಬೆನ್ಸನ್ ಆ್ಯಂಡ್ ಹೆಜಸ್ ಕಪ್, ನಾಟ್‌ವೆಸ್ಟ್ ಸೀರಿಸ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನ ಐತಿಹಾಸಿಕ ದೃಶ್ಯಗಳು ಸಮಾರೋಪ ಸಮಾರಂಭಕ್ಕೆ ವಿಶೇಷ ಆಕರ್ಷಣೆ ಒದಗಿಸಿದವು.
ಎ.ಆರ್. ರೆಹಮಾನ್ ಎಂಟ್ರಿ
ರಣವೀರ್ ಶೋ ಬಳಿಕ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ “ವಂದೇ ಮಾತರಂ’ ಹಾಡಿನ ಮೂಲಕ ಎಂಟ್ರಿ ಕೊಟ್ಟರು. ಮೋಹಿತ್ ಚೌಹಾಣ್, ನೀತಿ ಮೋಹನ್, ಬ್ಲೇಜ್, ಶಿವಮಣಿ, ಸಶಾ ತ್ರಿಪಾಠಿ, ಶ್ವೇತಾ ಮೋಹನ್ ಮೊದಲಾದ ಸಂಗೀತಜ್ಞರು ಸಾಥ್ ನೀಡಿದರು.
“ಹ್ಯಾವ್ ಎ ಗ್ರೇಟ್ ಗೇಮ್. ಗಾಡ್ ಬ್ಲೆಸ್ ಯು ಆಲ್. ಜೈ ಹೋ’ ಎಂಬ ರೆಹಮಾನ್ ಹಾರೈಕೆಯೊಂದಿಗೆ ಸಮಾರೋಪ ಸಮಾರಂಭಕ್ಕೆ ತೆರೆ ಬಿತ್ತು. 3 ವರ್ಷಗಳ ದೊಡ್ಡ ಬ್ರೇಕ್ ಬಳಿಕ “ಕ್ಲೋಸಿಂಗ್ ಸೆರಮನಿ’ಗೆ ಐಪಿಎಲ್ ಸಾಕ್ಷಿಯಾಯಿತು.
ರಣವೀರ್ ಜೋಶ್
ರಣವೀರ್ ಸಿಂಗ್ ಸಮಾರೋಪ ಸಮಾರಂಭದ ಮೊದಲ ಆಕರ್ಷಣೆಯಾಗಿ ದ್ದರು. ಅವರ ಜೋಶ್‌ಗೆ ಕ್ರಿಕೆಟ್ ಪ್ರೇಮಿಗಳು ಭೋರ್ಗರೆಯುತ್ತ ಹೆಜ್ಜೆ ಹಾಕಿದರು. ತಮ್ಮದೇ “83′ ಚಿತ್ರದ “ಜೀತೇಗಾ ಜೀತೇಗಾ’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದರು. ಮರು ನಿಮಿಷದಲ್ಲೇ ತಮ್ಮ ಹಾಗೂ ಅನುಷ್ಕಾ ಶರ್ಮ ಅಭಿನಯದ “ಬ್ಯಾಂಡ್ ಬಾಜಾ ಭಾರತ್’ ರೊಮ್ಯಾಂಟಿಕ್ ಚಿತ್ರದ “ಎಂವೀ ಎಂವೀ’ ಹಾಡಿಗೆ ಸಹ ನರ್ತಕರೊಂದಿಗೆ ಹೆಜ್ಜೆ ಹಾಕಿದರು.
ವಿರಾಟ್ ಕೊಹ್ಲಿ ಕ್ರೀಸ್ ನಡುವೆ ಓಡುವಷ್ಟೇ ವೇಗದಲ್ಲಿ ಕಾಸ್ಟೂಮ್ ಬದಲಿಸಿ ಕೊಂಡ ರಣವೀರ್, ಕೆಜಿಎಫ್ ಡೈಲಾಗ್ ಮೂಲಕ ಕಿಚ್ಚೆಬ್ಬಿಸಿದರು.
“ಆರ್‌ಆರ್‌ಆರ್’ನ “ನಾಟು ನಾಟು’, “ಮಾಸ್ಟರ್’ ಚಿತ್ರದ “ವಾಥಿ ಕಮಿಂಗ್’ ಹಾಡಿಗೆ ಕುಣಿದು ಕುಪ್ಪಳಿಸಿದರು. ಸುಡುಮದ್ದಿನ ಆಕರ್ಷಕ ಚಿತ್ತಾರ ಹೊಸ ರಂಗು ತುಂಬಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.