ಮುಂಬೈ ಇಂಡಿಯನ್ಸ್ ಗೆಲುವು ಕಸಿದ ಲಲಿತ್-ಅಕ್ಷರ್
Team Udayavani, Mar 27, 2022, 11:44 PM IST
ಮುಂಬಯಿ: ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಜೋಡಿಯ ಅಸಾಮಾನ್ಯ ಬ್ಯಾಟಿಂಗ್ ಪರಾಕ್ರಮದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಬಂದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್‌ಗಳ ರೋಚಕ ಜಯ ಗಳಿಸಿದೆ.
ರವಿವಾರದ ಮೊದಲ ಐಪಿಎಲ್ ಮುಖಾಮುಖಿಯಲ್ಲಿಆತಿಥೇಯ ಮುಂಬೈ 5 ವಿಕೆಟಿಗೆ 177 ರನ್ ಗಳಿಸಿ ಸವಾಲೊಡ್ಡಿತು. ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಡೆಲ್ಲಿ ತೀವ್ರ ಕುಸಿತಕ್ಕೆ ಸಿಲುಕಿತು. 10 ಓವರ್ ಒಳಗೆ 72 ರನ್ನಿಗೆ 5 ವಿಕೆಟ್ ಕಳೆದುಕೊಂಡಾಗ ಡೆಲ್ಲಿಯ ಸೋಲು ಖಾತ್ರಿಯಾಗಿತ್ತು. 104ಕ್ಕೆ 6 ವಿಕೆಟ್ ಬಿತ್ತು. ಅಂತಿಮವಾಗಿ 18.2 ಓವರ್‌ಗಳಲ್ಲಿ 6 ವಿಕೆಟಿಗೆ 179 ರನ್ ಬಾರಿಸಿ ಮುಂಬೈ ಮೇಲೆ ಸವಾರಿ ಮಾಡಿಯೇ ಬಿಟ್ಟಿತು!
ಪಂದ್ಯಕ್ಕೆ ತಿರುವು ಒದಗಿಸಿದವರೆಂದರೆ, 7ನೇ ವಿಕೆಟಿಗೆ ಜತೆಗೂಡಿದ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್. ಇವರು ಕೇವಲ 30 ಎಸೆತಗಳಿಂದ 75 ರನ್ ಜತೆಯಾಟ ನಡೆಸಿ ಮುಂಬೈಯ ಗೆಲುವಿನ ಕನಸನ್ನು ಛಿದ್ರಗೊಳಿಸಿದರು. ಯಾದವ್ 38 ಎಸೆತಗಳಿಂದ ಅಜೇಯ 48 ರನ್ (4 ಫೋರ್, 2 ಸಿಕ್ಸರ್), ಪಟೇಲ್ 17 ಎಸೆತಗಳಿಂದ ಅಜೇಯ 38 ರನ್ (2 ಬೌಂಡರಿ, 3 ಸಿಕ್ಸರ್) ಬಾರಿಸಿ ಡೆಲ್ಲಿಯ ಗೆಲುವಿನ ರೂವಾರಿಗಳೆನಿಸಿದರು.
ಆರಂಭಿಕರಾದ ಪೃಥ್ವಿ ಶಾ (28)-ಟಿಮ್ ಸೀಫರ್ಟ್ (21) ಬಿರುಸಿನ ಆರಂಭ ಒದಗಿಸಿದ್ದರು. ಬಳಿಕ ಮುರುಗನ್ ಅಶ್ವಿನ್ ಮತ್ತು ಬಾಸಿಲ್ ಥಂಪಿ ಘಾತಕ ಸ್ಪೆಲ್ ನಡೆಸಿ ಮುಂಬೈಗೆ ಮೇಲುಗೈ ಒದಗಿಸಿದರು. ಕೊನೆಯಲ್ಲಿ ರೋಹಿತ್ ಪಡೆಯ ಬೌಲಿಂಗ್ ಮ್ಯಾಜಿಕ್ ನಡೆಯಲೇ ಇಲ್ಲ.
ಮಿಂಚಿದ ಇಶಾನ್ ಕಿಶನ್
ಮೆಗಾ ಹರಾಜಿನಲ್ಲಿ ಸರ್ವಾಧಿಕ 15.25 ಕೋಟಿ ರೂ. ಮೊತ್ತಕ್ಕೆ ಖರೀದಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮುಂಬೈ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆರಂಭಿಕನಾಗಿ ಬಂದು ಕೊನೆಯ ತನಕವೂ ಬ್ಯಾಟಿಂಗ್ ವಿಸ್ತರಿಸಿದ ಅವರು ಕೇವಲ 48 ಎಸೆತಗಳಿಂದ 81 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಬಿರುಸಿನ ಬ್ಯಾಟಿಂಗ್ ವೇಳೆ 11 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.
ನಾಯಕ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಸೇರಿಕೊಂಡು ಮುಂಬೈಗೆ ಭರ್ಜರಿ ಆರಂಭ ಒದಗಿಸಿದರು. 8.2 ಓವರ್‌ಗಳಿಂದ 67 ರನ್ ಹರಿದು ಬಂತು. ಇದರಲ್ಲಿ ರೋಹಿತ್ ಪಾಲು 32 ಎಸೆತಗಳಿಂದ 41 ರನ್. 4 ಫೋರ್, 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.
ಇಶಾನ್ ಕಿಶನ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದರಿಂದ ಮುಂಬೈ ಮೊತ್ತ ಬೆಳೆಯುತ್ತ ಹೋಯಿತು. ರೋಹಿತ್ ನಿರ್ಗಮನದ ಬಳಿಕ ಅವರಿಗೆ ಇನ್ನೊಂದು ತುದಿಯಿಂದ ಹೆಚ್ಚಿನ ಬೆಂಬಲ ಲಭಿಸಲಿಲ್ಲ. ಅನ್ಮೋಲ್‌ಪ್ರೀತ್ ಸಿಂಗ್ ಎಂಟೇ ರನ್ನಿಗೆ ಔಟಾದರು. ತಿಲಕ್ ವರ್ಮ 22 ರನ್ ಮಾಡಿದರು.
ಮುಂಬೈಯ ಮಧ್ಯಮ ಕ್ರಮಾಂಕದ ಮೇಲೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮತ್ತು ಎಡಗೈ ಮಧ್ಯಮ ವೇಗಿ ಖಲೀಲ್ ಅಹ್ಮದ್ ಘಾತಕವಾಗಿ ಎರಗಿದರು. ಕುಲದೀಪ್ ಅತ್ಯಂತ ಬಿಗಿಯಾದ ದಾಳಿ ಸಂಘಟಿಸಿ 18 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತರು. ಖಲೀಲ್ ಸಾಧನೆ 27ಕ್ಕೆ 2 ವಿಕೆಟ್.
ರೋಹಿತ್ ಶರ್ಮಗೆ
12 ಲಕ್ಷ ರೂ. ದಂಡ
ಮುಂಬಯಿ, ಮಾ. 27: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿದ ಕಾರಣಕ್ಕೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ಪೊವೆಲ್ ಬಿ ಕುಲದೀಪ್ 41
ಇಶಾನ್ ಕಿಶನ್ ಔಟಾಗದೆ 81
ಅನ್ಮೋಲ್‌ಪ್ರೀತ್ ಸಿಂಗ್ ಸಿ ಲಲಿತ್ ಬಿ ಕುಲದೀಪ್ 8
ತಿಲಕ್ ವರ್ಮ ಸಿ ಶಾ ಬಿ ಖಲೀಲ್ 22
ಕೈರನ್ ಪೊಲಾರ್ಡ್ ಸಿ ಸೀಫರ್ಟ್ ಬಿ ಕುಲದೀಪ್ 3
ಟಿಮ್ ಡೇವಿಡ್ ಸಿ ಮನ್‌ದೀಪ್ ಬಿ ಖಲೀಲ್ 12
ಡೇನಿಯಲ್ ಸ್ಯಾಮ್ಸ್ ಔಟಾಗದೆ 7
ಇತರ 3
ಒಟ್ಟು (5 ವಿಕೆಟಿಗೆ) 177
ವಿಕೆಟ್ ಪತನ: 1-67, 2-83, 3-117, 4-122, 5-159.
ಬೌಲಿಂಗ್:
ಶಾರ್ದೂಲ್ ಠಾಕೂರ್ 4-0-47-0
ಖಲೀಲ್ ಅಹ್ಮದ್ 4-0-27-2
ಅಕ್ಷರ್ ಪಟೇಲ್ 4-0-40-0
ಕಮಲೇಶ್ ನಾಗರಕೋಟಿ 2-0-29-0
ಕುಲದೀಪ್ ಯಾದವ್ 4-0-18-3
ಲಲಿತ್ ಯಾದವ್ 2-0-15-0
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಇಶಾನ್ ಬಿ ಥಂಪಿ 38
ಟಿಮ್ ಸೀಫರ್ಟ್ ಬಿ ಎಂ. ಅಶ್ವಿನ್ 21
ಮನ್‌ದೀಪ್ ಸಿಂಗ್ ಸಿ ತಿಲಕ್ ಬಿ ಎಂ. ಅಶ್ವಿನ್ 0
ರಿಷಭ್ ಪಂತ್ ಸಿ ಡೇವಿಡ್ ಬಿ ಮಿಲ್ಸ್ 1
ಲಲಿತ್ ಯಾದವ್ ಔಟಾಗದೆ 48
ಪೊವೆಲ್ ಸಿ ಸ್ಯಾಮ್ಸ್ ಬಿ ಥಂಪಿ 0
ಶಾರ್ದೂಲ್ ಠಾಕೂರ್ ಸಿ ರೋಹಿತ್ ಬಿ ಥಂಪಿ 22
ಅಕ್ಷರ್ ಪಟೇಲ್ ಔಟಾಗದೆ 38
ಇತರ 11
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ) 179
ವಿಕೆಟ್ ಪತನ: 1-30, 2-30, 3-32, 4-72, 5-72, 6-104.
ಬೌಲಿಂಗ್:
ಡೇನಿಯಲ್ ಸ್ಯಾಮ್ಸ್ 4-0-57-0
ಜಸ್‌ಪ್ರೀತ್ ಬುಮ್ರಾ 3.2-0-43-0
ಬಾಸಿಲ್ ಥಂಪಿ 4-0-35-3
ಮುರುಗನ್ ಅಶ್ವಿನ್ 4-0-14-2
ಟೈಮಲ್ ಮಿಲ್ಸ್ 3-0-26-1
ಪಂದ್ಯಶ್ರೇಷ್ಠ: ಕುಲದೀಪ್ ಯಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.