ರನ್ ಶಿಖರವೇರಿದ ಧವನ್: ಸುರೇಶ್ ರೈನಾ ದಾಖಲೆ ಮುರಿದ ಗಬ್ಬರ್
Team Udayavani, Apr 30, 2021, 8:16 AM IST
ಅಹಮದಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸುಲಭ ಜಯ ಗಳಿಸಿದೆ. ಆರಂಭಿಕರಾದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಕಾರಣದಿಂದ ಕೆಕೆಆರ್ ನೀಡಿದ್ದ ಸವಾಲನ್ನು ಪಂತ್ ಹುಡುಗರು ಅನಾಯಾಸವಾಗಿ ಜಯಿಸಿದರು.
ಶಿಖರ್ ಧವನ್ 46 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಇದೇ ವೇಳೆ ಧವನ್ ಹೊಸ ದಾಖಲೆಯೊಂದನ್ನು ಬರೆದರು. ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಧವನ್ ಎರಡನೇ ಸ್ಥಾನಕ್ಕೆ ಏರಿದರು.
ಇದನ್ನೂ ಓದಿ:ಪೃಥ್ವಿ ಶಾ ಬೌಂಡರಿಗೆ ಬೆಚ್ಚಿದ ಕೆಕೆಆರ್
ಇದುವರೆಗೆ ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದರು. ರೈನಾ 5489 ರನ್ ಗಳಿಸಿದ್ದಾರೆ. ಗುರುವಾರದ ಪಂದ್ಯದ ವೇಳೆ ಧವನ್ ಈ ದಾಖಲೆ ಮುರಿದರು. ಧವನ್ ಸದ್ಯ 5508 ರನ್ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ 6041 ರನ್ ಗಳಿಸಿದ್ದಾರೆ.
ಶಿಖರ್ ಧವನ್ ಈ ಋತುವಿನಲ್ಲಿ 311 ರನ್ ಗಳೊಂದಿಗೆ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಕೆಕೆಆರ್ ವಿರುದ್ಧ ಶಾ ಜೊತೆಗೂಡಿ ಧವನ್ 132 ರನ್ ಜೊತೆಯಾಟವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.