ಗುಜರಾತ್ ಟೈಟಾನ್ಸ್ ರೋಡ್ ಶೋ; ಐಪಿಎಲ್ ಬೆಸ್ಟ್ ಇಲೆವೆನ್
Team Udayavani, May 30, 2022, 11:27 PM IST
ಅಹ್ಮದಾಬಾದ್: ಐಪಿಎಲ್ ಪದಾರ್ಪಣೆಯಲ್ಲೇ ಪ್ರಶಸ್ತಿ ಗೆದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಸೋಮವಾರ ಅಹ್ಮದಾಬಾದ್‌ನಲ್ಲಿ ರೋಡ್ ಶೋ ನಡೆಸಿತು. ಸಬರ್ಮತಿ ನದಿ ಮಾರ್ಗದಲ್ಲಿ ಸಾಗಿದ ಶೋನಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಬಳಿಕ ಗುಜರಾತ್ ಮುಖ್ಯಮಂತ್ರಿ ಭುಪೇಂದ್ರಭಾಯ್ ಪಟೇಲ್ ಅವರು ವಿಜೇತ ತಂಡವನ್ನು ಸಮ್ಮಾನಿಸಿದರು.
ಅಹ್ಮದಾಬಾದ್: 15ನೇ ಆವೃತ್ತಿಯ ಐಪಿಎಲ್‌ಗೆ ತೆರೆ ಬಿದ್ದಿದೆ. ಬಹು ಕೋಟಿ ಆಟಗಾರರೆಲ್ಲ ಘೋರ ವೈಫಲ್ಯ ಅನುಭವಿಸಿದ್ದಾರೆ.
ಯಾವ ನಿರೀಕ್ಷೆಯನ್ನೂ ಮೂಡಿಸದ ಕೆಲವು ಕ್ರಿಕೆಟಿಗರು, ಯುವ ಆಟಗಾರರು ಅಮೋಘ ಸಾಧನೆಯೊಂದಿಗೆ ಬಹಳ ಎತ್ತರಕ್ಕೆ ಏರಿದ್ದಾರೆ. ಇಂಥ ಸಾಧಕರ ನ್ನೊಳಗೊಂಡ 2022ರ ಐಪಿಎಲ್ ಇಲೆವೆನ್ ಒಂದನ್ನು ರಚಿಸಲಾಗಿದೆ.
ಹನ್ನೊಂದರ ಬಳಗದ ಕ್ಯಾಪ್ಟನ್ ಬೇರೆ ಯಾರೂ ಅಲ್ಲ, ಹಾರ್ದಿಕ್ ಪಾಂಡ್ಯ. ತಂಡ ಹೀಗಿದೆ:
1 ಜಾಸ್ ಬಟ್ಲರ್ (ರಾಜಸ್ಥಾನ್): ಬರೋಬ್ಬರಿ 4 ಶತಕಗಳೊಂದಿಗೆ ಕೂಟದಲ್ಲೇ ಸರ್ವಾಧಿಕ 863 ರನ್ ಬಾರಿಸಿದ ಓಪನರ್.
2 ಕೆ.ಎಲ್. ರಾಹುಲ್ (ಲಕ್ನೋ, ವಿ.ಕೀ.): ನಾಯಕತ್ವದ ಒತ್ತಡದ ನಡುವೆಯೂ 616 ರನ್ ಪೇರಿಸಿದ ಓಪನರ್ ಕಂ ಕೀಪರ್.
3 ಲಿಯಮ್ ಲಿವಿಂಗ್‌ಸ್ಟೋನ್ (ಪಂಜಾಬ್): ಟಿ20ಯ ಬಿಗ್ ಹಿಟ್ಟರ್. 4 ಅರ್ಧ ಶತಕಗಳೊಂದಿಗೆ 437 ರನ್ ಸಾಧನೆ.
4 ರಾಹುಲ್ ತ್ರಿಪಾಠಿ (ಹೈದರಾಬಾದ್): ತಂಡ ವಿಫಲವಾದರೂ ಬ್ಯಾಟಿಂಗ್ ವಿಭಾಗಕ್ಕೆ ಘನತೆ ತಂದ ಶ್ರೇಯಸ್ಸು. 413 ರನ್ ಗಳಿಕೆ.
5 ಹಾರ್ದಿಕ್ ಪಾಂಡ್ಯ (ಗುಜರಾತ್, ನಾಯಕ): ಬ್ಯಾಟಿಂಗ್, ಬೌಲಿಂಗ್, ಕ್ಯಾಪ್ಟನ್ಸಿ… ಎಲ್ಲದರಲ್ಲೂ ಸೈ ಎನಿಸಿಕೊಂಡ ಚಾಂಪಿಯನ್ ಆಟಗಾರ.
6 ದೀಪಕ್ ಹೂಡಾ (ಲಕ್ನೋ): ಮಧ್ಯಮ ಕ್ರಮಾಂಕದ ಯಶಸ್ವಿ ಬ್ಯಾಟರ್. 451 ರನ್ ಸಾಧನೆ. ಪಾರ್ಟ್‌ಟೈಮ್ ಸ್ಪಿನ್ನರ್ ಆಗಿಯೂ ಯಶಸ್ಸು.
7 ಆ್ಯಂಡ್ರೆ ರಸೆಲ್ (ಕೆಕೆಆರ್): ಬಿಗ್ ಹಿಟ್ಟಿಂಗ್ ಆಟಗಾರ. ನಿರಂತರ ಯಶಸ್ಸು ಕಂಡಿಲ್ಲ. ಆದರೆ 335 ರನ್, 32 ಸಿಕ್ಸರ್‌ಗಳೊಂದಿಗೆ ಮಿಂಚಿದ್ದಾರೆ.
8 ಉಮ್ರಾನ್ ಮಲಿಕ್ (ಹೈದರಾಬಾದ್): ಅತೀ ವೇಗದ ಬೌಲರ್. ಈ ಸರಣಿಯ ಶೋಧ. ಕೂಟದ ಉದಯೋನ್ಮುಖ ಆಟಗಾರ.
9. ವನಿಂದು ಹಸರಂಗ (ಆರ್‌ಸಿಬಿ):ಚಹಲ್‌ಗೆ ಸರಿಸಾಟಿಯಾಗಿ ಸಾಧನೆಗೈದ ಸ್ಪಿನ್ನರ್. 26 ವಿಕೆಟ್‌ಗಳೊಂದಿಗೆ ದ್ವಿತೀಯ ಸ್ಥಾನದ ಗೌರವ.
10 ಮೊಹಮ್ಮದ್ ಶಮಿ (ಗುಜರಾತ್): ಟೈಟಾನ್ಸ್‌ನ ಪ್ರಧಾನ ವೇಗಿ. ತಂಡದ ಗೆಲುವಿನಲ್ಲಿ ಇವರ 20 ವಿಕೆಟ್‌ಗಳ ಪಾತ್ರ ದೊಡ್ಡದು.
11 ಯಜುವೇಂದ್ರ ಚಹಲ್ (ರಾಜಸ್ಥಾನ್): 16 ಪಂದ್ಯಗಳಿಂದ ಸರ್ವಾಧಿಕ ವಿಕೆಟ್ ಕೆಡವಿದ ಹೀರೋ. ಪರ್ಪಲ್ ಕ್ಯಾಪ್ ಹೋಲ್ಡರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.