“ಬಟ್ಲರ್‌ ಆರೇಂಜ್‌ ಕ್ಯಾಪ್‌ ಉಳಿಸಿಕೊಳ್ಳಲಿ, ನಮ್ಮ ವಿರುದ್ಧ ಸಿಡಿಯದಿರಲಿ’


Team Udayavani, May 25, 2022, 5:35 PM IST

“ಬಟ್ಲರ್‌ ಆರೇಂಜ್‌ ಕ್ಯಾಪ್‌ ಉಳಿಸಿಕೊಳ್ಳಲಿ, ನಮ್ಮ ವಿರುದ್ಧ ಸಿಡಿಯದಿರಲಿ’

ಕೋಲ್ಕತಾ: ಜಾಸ್‌ ಬಟ್ಲರ್‌ ಆರೇಂಜ್‌ ಕ್ಯಾಪ್‌ ಉಳಿಸಿಕೊಳ್ಳಲಿ, ಆದರೆ ನಮ್ಮ ವಿರುದ್ಧ ಸಿಡಿಯದೇ ಇರಲಿ… ಹೀಗೊಂದು ಜಾಣ ಹಾರೈಕೆ ಮಾಡಿದವರು ರಾಹುಲ್‌ ತೆವಾಟಿಯ.

ಇವರಿಬ್ಬರೂ ರಾಜಸ್ಥಾನ್‌ ರಾಯಲ್ಸ್‌ ತಂಡದ ಟೀಮ್‌ಮೇಟ್‌ ಆಗಿದ್ದವರು. ಈಗ ತೆವಾಟಿಯ ನೂತನ ಗುಜರಾತ್‌ ಟೈಟಾನ್ಸ್‌ ಪಾಲಾಗಿದ್ದಾರೆ.

ಮಂಗಳವಾರದ ಮೊದಲ ಕ್ವಾಲಿಫೈಯರ್‌ ಪಂದ್ಯಕ್ಕೂ ಮುನ್ನ ಗುಜರಾತ್‌ ಟೈಟಾನ್ಸ್‌ ಒಂದು ವೀಡಿಯೋವನ್ನು ಬಿಡುಗಡೆ ಮಾಡಿದೆ. ಈಗ ಗುಜರಾತ್‌ ತಂಡವನ್ನು ಪ್ರತಿನಿಧಿಸುತ್ತಿರುವ, ರಾಜಸ್ಥಾನ್‌ ರಾಯಲ್ಸ್‌ ತಂಡದ ಮೂವರು ಮಾಜಿ ಕ್ರಿಕೆಟಿಗರಾದ ರಾಹುಲ್‌ ತೆವಾಟಿಯ, ಡೇವಿಡ್‌ ಮಿಲ್ಲರ್‌ ಮತ್ತು ವರುಣ್‌ ಆರೋನ್‌ ಅವರ ಅನುಭವಗಳನ್ನು ಇದು ಒಳಗೊಂಡಿದೆ.

ಈ ಸಂದರ್ಭದಲ್ಲಿ ರಾಹುಲ್‌ ತೆವಾಟಿಯ ಮಾಜಿ ಸಹ ಆಟಗಾರ ಜಾಸ್‌ ಬಟ್ಲರ್‌ ಕುರಿತು ಮಾತಾಡಿದ್ದಾರೆ.

“ಜಾಸ್‌ ಬಟ್ಲರ್‌ ಈ ಕೂಟದ ಸರ್ವಾಧಿಕ ರನ್‌ ಸಾಧಕನಾಗಿ ಮೂಡಿಬರಲಿ, ಆರೇಂಜ್‌ ಕ್ಯಾಪ್‌ ಉಳಿಸಿಕೊಳ್ಳಲಿ. ಆದರೆ ಯಾವ ಕಾರಣಕ್ಕೂ ನಮ್ಮ ವಿರುದ್ಧ ದೊಡ್ಡ ಸ್ಕೋರ್‌ ದಾಖಲಿಸದಿರಲಿ…’ ಎಂದು ನಗುತ್ತ ಹೇಳಿದ್ದಾರೆ.
ಡೇವಿಡ್‌ ಮಿಲ್ಲರ್‌ ಕೂಡ ಜಾಸ್‌ ಬಟ್ಲರ್‌ ಕುರಿತೇ ಮಾತಾಡಿದ್ದಾರೆ. “ಬಟ್ಲರ್‌ ಸಾಲಿಡ್‌ ಫಾರ್ಮ್ನಲ್ಲಿದ್ದಾರೆ. ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್‌ ಅಮೋಘ ಮಟ್ಟದಲ್ಲಿದೆ’ ಎಂದಿದ್ದಾರೆ.

“ರಾಜಸ್ಥಾನ್‌ ರಾಯಲ್ಸ್‌ ತಂಡದ ಕೆಲವು ಮಹಾನ್‌ ಆಟಗಾರರೊಂದಿಗೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವ ಅದೃಷ್ಟ ನನ್ನದಾಗಿತ್ತು’ ಎಂದವರು ವರುಣ್‌ ಆರೋನ್‌. ಈ ಮೂವರೂ ರಾಜಸ್ಥಾನ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಕುರಿತು ಹೆಮ್ಮೆ, ಅಭಿಮಾನ ವ್ಯಕ್ತಪಡಿಸಿದರು.

ಉತ್ತಮ ಬಾಂಧವ್ಯ
“ರಾಜಸ್ಥಾನ್‌ ರಾಯಲ್ಸ್‌ ನನಗೆ ದೊಡ್ಡದೊಂದು ಬ್ರೇಕ್‌ ಒದಗಿಸಿದ ತಂಡ. ಸಂಜು ಸ್ಯಾಮ್ಸನ್‌ ಓರ್ವ ಗ್ರೇಟ್‌ ಕ್ಯಾಪ್ಟನ್‌. ಅತ್ಯುತ್ತಮ ಕ್ರಿಕೆಟರ್‌. ನಮ್ಮ ನಡುವೆ ಉತ್ತಮ ಬಾಂಧವ್ಯವಿತ್ತು. ಪ್ಲೇ ಆಫ್ನಲ್ಲಿ ಅವರನ್ನು ಎದುರಿಸುವುದೊಂದು ರೋಚಕ ಅನುಭವ’ ಎಂದು ರಾಹುಲ್‌ ತೆವಾಟಿಯ ಹೇಳಿದರು.

ಟಾಪ್ ನ್ಯೂಸ್

arrested

Baba Siddique ಹ*ತ್ಯೆ: ಶೂಟರ್‌ ಸೇರಿ ಮೂವರ ಬಂಧನ

pinarayi

Jamaat ಬೆಂಬಲ ಹೇಳಿಕೆ: ಪಿಣರಾಯಿ, ಪ್ರಿಯಾಂಕಾ ವಾದ್ರಾ ಮಧ್ಯೆ ವಾಕ್ಸಮರ!

Sheik Hasina

Bangladesh; ಶೇಖ್‌ ಹಸೀನಾ ಪಕ್ಷದ ಬೆಂಬಲಿಗರನ್ನು ಬಂಧಿಸಿದ ಸೇನೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Udupi: ಗೀತಾರ್ಥ ಚಿಂತನೆ 90-“ನಿನ್ನ ನೀ ಸರಿ ಮಾಡಿಕೋ’

Udupi: ಗೀತಾರ್ಥ ಚಿಂತನೆ 90-“ನಿನ್ನ ನೀ ಸರಿ ಮಾಡಿಕೋ’-ಗೀತಾ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey

Hockey; ವನಿತಾ ಏಷ್ಯಾ ಚಾಂಪಿಯನ್ಸ್‌ ಟ್ರೋಫಿ: ಭಾರತಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು

1-u-mumd

Pro Kabaddi: ಯೋಧಾಸ್‌ಗೆ ಆಘಾತವಿಕ್ಕಿದ ಮುಂಬಾ

1-qwwqe

T20;ಫಿಲ್‌ ಸಾಲ್ಟ್ ಸೆಂಚುರಿ : ಇಂಗ್ಲೆಂಡ್‌ ಜಯಭೇರಿ

1-ree

T20; 3 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ಜಯ; ಸರಣಿ ಸಮಬಲ

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

Vimana 2

Passenger ನಿಂದಲೇ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆ!

AANE 2

Madhya Pradesh; ಮರಿ ಆನೆ ಸಾ*ವು: ಒಟ್ಟು 11ಕ್ಕೆ ಏರಿಕೆ

sudha-murthy

Air travel ಅಗ್ಗದ ಟಿಕೆಟ್‌ ಖರೀದಿ: ಸುಧಾಮೂರ್ತಿ

arrested

Baba Siddique ಹ*ತ್ಯೆ: ಶೂಟರ್‌ ಸೇರಿ ಮೂವರ ಬಂಧನ

pinarayi

Jamaat ಬೆಂಬಲ ಹೇಳಿಕೆ: ಪಿಣರಾಯಿ, ಪ್ರಿಯಾಂಕಾ ವಾದ್ರಾ ಮಧ್ಯೆ ವಾಕ್ಸಮರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.