ಐಪಿಎಲ್ ಫಸ್ಟ್ ಮ್ಯಾಚ್-2021: ಓಪನಿಂಗ್ ಮ್ಯಾಚ್: ಆರ್‌ಸಿಬಿಗೆ ಮೊದಲ ಗೆಲುವು
Team Udayavani, May 25, 2022, 6:42 AM IST
2021ರ ಐಪಿಎಲ್ ಕೂಟದ ಆರಂಭಿಕ ಪಂದ್ಯದಲ್ಲಿ ಎದುರಾದ ತಂಡಗಳೆಂದರೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು. ಪಂದ್ಯದ ತಾಣ ಬೆಂಗಳುರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ. ಈ ರೋಚಕ ಹಣಾಹಣಿಯನ್ನು ವಿರಾಟ್ ಕೊಹ್ಲಿ ಪಡೆ ಅಂತಿಮ ಎಸೆತದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಂತರ ಕೇವಲ 2 ವಿಕೆಟ್.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 9 ವಿಕೆಟಿಗೆ 159 ರನ್ ಪೇರಿಸಿದರೆ, ಆರ್‌ಸಿಬಿ ಭರ್ತಿ 20 ಓವರ್‌ಗಳಲ್ಲಿ 8 ವಿಕೆಟಿಗೆ 160 ರನ್ ಬಾರಿಸಿ ಜಯ ಸಾಧಿಸಿತು. ಇದರೊಂದಿಗೆ ಆರ್‌ಸಿಬಿ ಕೂಟದ ಉದ್ಘಾಟನಾ ಪಂದ್ಯದಲ್ಲಿ ಮೊದಲ ಸಲ ಗೆದ್ದ ಹಿರಿಮೆಗೆ ಪಾತ್ರವಾಯಿತು. ಇದಕ್ಕೂ ಮೊದಲು 2008, 2017 ಮತ್ತು 2019ರಲ್ಲಿ ಓಪನಿಂಗ್ ಮ್ಯಾಚ್ ಆಡಿದ ಬೆಂಗಳೂರು ಟೀಮ್‌ಗೆ ಸೋಲೇ ಸಂಗಾತಿಯಾಗಿತ್ತು.
ಪಟೇಲ್, ಎಬಿಡಿ ಸಾಹಸ
ಆರ್‌ಸಿಬಿ ಗೆಲುವಿನಲ್ಲಿ ಮಿಂಚಿದವರು ಇಬ್ಬರು. ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ ಮತ್ತು ಬ್ಯಾಟಿಂಗ್‌ನಲ್ಲಿ ಎಬಿ ಡಿ ವಿಲಿಯರ್. ಮುಂಬೈ ಬ್ಯಾಟಿಂಗ್ ಸರದಿಯನ್ನು ಕಾಡಿದ ಹರ್ಷಲ್ ಪಟೇಲ್ 27 ರನ್ನಿಗೆ 5 ವಿಕೆಟ್ ಉಡಾಯಿಸಿದರು. ಎಬಿಡಿ 48 ರನ್ ಬಾರಿಸಿ ಅಂತಿಮ ಎಸೆತದಲ್ಲಿ ಎಡವಿದರು.
ನಾಯಕ ವಿರಾಟ್ ಕೊಹ್ಲಿ 33, ಗ್ಲೆನ್ ಮ್ಯಾಕ್ಸ್‌ವೆಲ್ 39 ರನ್ ಬಾರಿಸಿ ಆರ್‌ಸಿಬಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಆದರೆ ತಂಡವನ್ನು ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದ ಶ್ರೇಯಸ್ಸು ಎಬಿಡಿಗೆ ಸಲ್ಲುತ್ತದೆ. ಅವರು ಅಂತಿಮ ಓವರ್‌ನ 4ನೇ ಎಸೆತದಲ್ಲಿ ಔಟಾದಾಗ ಮುಂಬೈಗೆ ಗೆಲುವಿನ ಸಾಧ್ಯತೆ ಹೆಚ್ಚಿತ್ತು.
ಅಂತಿಮ ಓವರ್, 7 ರನ್
ಮಾರ್ಕೊ ಜಾನ್ಸೆನ್ ಪಾಲಾದ ಅಂತಿಮ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 3 ವಿಕೆಟ್‌ಗಳಿಂದ ಕೇವಲ 7 ರನ್ ಅಗತ್ಯವಿತ್ತು. ಎಬಿಡಿ ಕ್ರೀಸ್‌ನಲ್ಲಿ ಇದ್ದುದರಿಂದ ಗೆಲುವಿನ ಧೈರ್ಯವಿತ್ತು. ಅವರು ಮೊದಲ ಎಸೆತದಲ್ಲೇ ಸಿಂಗಲ್ ತೆಗೆದರು. ಮುಂದಿನೆರಡು ಎಸೆತಗಳಲ್ಲಿ ಹರ್ಷಲ್ 2 ಹಾಗೂ ಒಂದು ರನ್ ಗಳಿಸಿದರು. 3 ಎಸೆತ, 3 ರನ್. ಇದು ಲೆಕ್ಕಾಚಾರ. ಆದರೆ 4ನೇ ಎಸೆತದಲ್ಲಿ ಎಬಿಡಿ ರನೌಟಾದಾಗ ಪಂದ್ಯದ ಕೌತುಕ ಮೇರೆ ಮೀರಿತು. ಮುಂಬೈ ಮೇಲುಗೈ ಸಂಭ್ರಮದಲ್ಲಿದ್ದರೆ, ಆರ್‌ಸಿಬಿ ಪಾಳೆಯದಲ್ಲಿ ಢವಢವ! ಆದರೆ ಅಲ್ಲಿ ಒಂದು ರನ್ ಪೂರ್ತಿಗೊಂಡಿತ್ತು.
5ನೇ ಎಸೆತ ಎದುರಿಸಿದ್ದು ಮೊಹಮ್ಮದ್ ಸಿರಾಜ್. ಇಲ್ಲಿ ಒಂದು ಲೆಗ್‌ಬೈ ಸಿಕ್ಕಿತು. ಅಂತಿಮ ಎಸೆತವನ್ನು ಫೈನ್ ಲೆಗ್‌ನತ್ತ ಬಾರಿಸಿದ ಹರ್ಷಲ್ ಪಟೇಲ್ ಕಣ್ಣುಮುಚ್ಚಿ ಓಡಿದರು. ಸಿರಾಜ್ ಸಾಥ್ ಕೊಟ್ಟರು. ಒಂದು ರನ್ ಸಿಕ್ಕಿಯೇ ಬಿಟ್ಟಿತು. ಬೌಲಿಂಗ್‌ನಲ್ಲಿ ಮಿಂಚಿದ ಹರ್ಷಲ್ ಪಟೇಲ್, ಗೆಲುವಿನ ರನ್ ಬಾರಿಸಿ ತಂಡದ ಹರ್ಷವನ್ನು ದ್ವಿಗುಣಗೊಳಿಸಿದರು.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ರನೌಟ್ 19
ಕ್ರಿಸ್ ಲಿನ್ ಸಿ ಮತ್ತು ಬಿ ವಾಷಿಂಗ್ಟನ್ 49
ಸೂರ್ಯಕುಮಾರ್ ಯಾದವ್ ಸಿ ಎಬಿಡಿ ಬಿ ಜೇಮಿಸನ್ 31
ಇಶಾನ್ ಕಿಶನ್ ಎಲ್‌ಬಿಡಬ್ಲ್ಯು ಪಟೇಲ್ 28
ಹಾರ್ದಿಕ್ ಪಾಂಡ್ಯ ಎಲ್‌ಬಿಡಬ್ಲ್ಯು ಪಟೇಲ್ 13
ಕೈರನ್ ಪೊಲಾರ್ಡ್ ಸಿ ವಾಷಿಂಗ್ಟನ್ ಬಿ ಪಟೇಲ್ 7
ಕೃಣಾಲ್ ಪಾಂಡ್ಯ ಸಿ ಕ್ರಿಸ್ಟಿಯನ್ ಬಿ ಪಟೇಲ್ 7
ಮಾರ್ಕೊ ಜಾನ್ಸೆನ್ ಬಿ ಪಟೇಲ್ 0
ರಾಹುಲ್ ಚಹರ್ ರನೌಟ್ 0
ಜಸ್‌ಪ್ರೀತ್ ಬುಮ್ರಾ ಔಟಾಗದೆ 1
ಇತರ 4
ಒಟ್ಟು (9 ವಿಕೆಟಿಗೆ) 159
ವಿಕೆಟ್ ಪತನ: 1-24, 2-94, 3-105, 4-135, 5-145, 6-158, 7-158, 8-158, 9-159.
ಬೌಲಿಂಗ್:
ಮೊಹಮ್ಮದ್ ಸಿರಾಜ್ 4-0-22-0
ಕೈಲ್ ಜೇಮಿಸನ್ 4-0-27-1
ಯಜುವೇಂದ್ರ ಚಹಲ್ 4-0-41-0
ಶಬಾಜ್ ಅಹ್ಮದ್ 1-0-14-0
ಹರ್ಷಲ್ ಪಟೇಲ್ 4-0-27-5
ಡೇನಿಯಲ್ ಕ್ರಿಸ್ಟಿಯನ್ 2-0-21-0
ವಾಷಿಂಗ್ಟನ್ ಸುಂದರ್ 1-0-7-1
ರಾಯಲ್ ಚಾಲೆಂಜರ್ ಬೆಂಗಳೂರು
ವಾಷಿಂಗ್ಟನ್ ಸುಂದರ್ ಸಿ ಲಿನ್ ಬಿ ಕೃಣಾಲ್ 10
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬುಮ್ರಾ 33
ರಜತ್ ಪಾಟೀದಾರ್ ಬಿ ಬೌಲ್ಟ್ 8
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಲಿನ್ ಬಿ ಜಾನ್ಸೆನ್ 39
ಎಬಿ ಡಿ ವಿಲಿಯರ್ ರನೌಟ್ 48
ಶಬಾಜ್ ಅಹ್ಮದ್ ಸಿ ಕೃಣಾಲ್ ಬಿ ಜಾನ್ಸೆನ್ 1
ಡೇನಿಯಲ್ ಕ್ರಿಸ್ಟಿಯನ್ ಸಿ ಚಹರ್ ಬಿ ಬುಮ್ರಾ 1
ಕೈಲ್ ಜೇಮಿಸನ್ ರನೌಟ್ 4
ಹರ್ಷಲ್ ಪಟೇಲ್ ಔಟಾಗದೆ 4
ಮೊಹಮ್ಮದ್ ಸಿರಾಜ್ ಔಟಾಗದೆ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 160
ವಿಕೆಟ್ ಪತನ: 1-36, 2-46, 3-98, 4-103, 5-106, 6-122, 7-152, 8-158.
ಬೌಲಿಂಗ್:
ಟ್ರೆಂಟ್ ಬೌಲ್ಟ್ 4-0-36-1
ಜಸ್‌ಪ್ರೀತ್ ಬುಮ್ರಾ 4-0-26-2
ಮಾರ್ಕೊ ಜಾನ್ಸೆನ್ 4-0-28-2
ಕೃಣಾಲ್ ಪಾಂಡ್ಯ 4-0-25-1
ರಾಹುಲ್ ಚಹರ್ 4-0-43-0
ಪಂದ್ಯಶ್ರೇಷ್ಠ: ಹರ್ಷಲ್ ಪಟೇಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.