ಐಪಿಎಲ್: ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಗೆ
Team Udayavani, May 11, 2022, 1:41 AM IST
ಪುಣೆ: ಐಪಿಎಲ್ ಅಂಕಪಟ್ಟಿಯ ಅಗ್ರ ಎರಡು ಸ್ಥಾನಗಳಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಮಂಗಳವಾರದ ಮುಖಾಮುಖಿಯಲ್ಲಿ ಲಕ್ನೋ ತಂಡವು ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 62 ರನ್ನುಗಳಿಂದ ಸೋಲನ್ನು ಕಂಡಿದೆ.
ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಗುಜರಾತ್ ತಂಡವು ಲಕ್ನೋ ಆಟಗಾರರನ್ನು ಕಟ್ಟಿಹಾಕಲು ಯಶಸ್ವಿಯಾಯಿತು. ರಶೀದ್ ಖಾನ್ ಸಹಿತ ಯಶ್ ದಯಾಳ್ ಮತ್ತು ಸಾಯಿ ಕಿಶೋರ್ ಅವರ ದಾಳಿಗೆ ತತ್ತರಿಸಿದ ಲಕ್ನೋ ತಂಡವು 13.5 ಓವರ್‌ಗಳಲ್ಲಿ ಕೇವಲ 82 ರನ್ನಿಗೆ ಆಲೌಟಾಯಿತು. ಈ ಮೊದಲು ಶುಭಮನ್ ಗಿಲ್ ಅವರ ಅಜೇಯ 63 ರನ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 4 ವಿಕೆಟಿಗೆ 144 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು.
ಅಗ್ರಸ್ಥಾನದಲ್ಲಿ ಗುಜರಾತ್
ಈ ಗೆಲುವಿನಿಂದ ಗುಜರಾತ್ ಟೈಟಾನ್ಸ್ ತಂಡವು ಆಡಿದ 12 ಪಂದ್ಯಗಳಿಂದ 9ರಲ್ಲಿ ಜಯ ಸಾಧಿಸಿ 18 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿತಲ್ಲದೇ ಪ್ಲೇ ಆಫ್ಗೆ ಅಧಿಕೃತವಾಗಿ ತೇರ್ಗಡೆಗೊಂಡಿತು. ಲಕ್ನೋ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕ್ವಿಂಟನ್ ಡಿ ಕಾಕ್, ನಾಯಕ ರಾಹುಲ್, ಕೃಣಾಲ್ ಪಾಂಡ್ಯ, ಆಯುಷ್ ಬದೋನಿ, ಕರಣ್ ಶರ್ಮ ಬ್ಯಾಟಿಂಗ್‌ನಲ್ಲಿ ಘೋರ ವೈಫಲ್ಯ ಅನುಭವಿಸಿದರು. ಕಾಕ್, ದೀಪಕ್ ಹೂಡಾ ಮತ್ತು ಆವೇಶ್ ಖಾನ್ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 27 ರನ್ ಗಳಿಸಿದ ಹೂಡಾ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮಾರಕ ದಾಳಿ ಸಂಘಟಿಸಿದ ರಶೀದ್ ಖಾನ್ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ 24 ರನ್ನಿಗೆ 4 ವಿಕೆಟ್ ಕಿತ್ತು ಗಮನ ಸೆಳೆದರು. ಯಶ್ ದಯಾಳ್ ಮತ್ತು ಸಾಯಿ ಕಿಶೋರ್ ತಲಾ ಎರಡು ವಿಕೆಟ್ ಉರುಳಿಸಿದರು.
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ಹಾರ್ದಿಕ್ ಪಾಂಡ್ಯ ಯೋಜನೆ ಕ್ಲಿಕ್ ಆಗಲಿಲ್ಲ. ಪುಣೆಯ “ಎಂಸಿಎ ಸ್ಟೇಡಿಯಂ’ ಟ್ರ್ಯಾಕ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದಂತೆ ಕಂಡುಬಂತು. ಲಕ್ನೋ ಬೌಲರ್ ಆರಂಭದಿಂದಲೇ ಬಲವಾದ ಪ್ರಹಾರವಿಕ್ಕಿದರು. ವೃದ್ಧಿಮಾನ್ ಸಾಹಾ ಐದೇ ರನ್ ಮಾಡಿ ಮೊಹ್ಸಿನ್ ಖಾನ್ ಮೋಡಿಗೆ ಸಿಲುಕಿದರು. ತಂಡಕ್ಕೆ ಮರಳಿದ ಮ್ಯಾಥ್ಯೂ ವೇಡ್ ಕೂಡ ಅವಕಾಶ ವ್ಯರ್ಥಗೊಳಿಸಿದರು. ಅವರದು ಹತ್ತೇ ರನ್ ಗಳಿಕೆ. ನಾಯಕ ಹಾರ್ದಿಕ್ ಪಾಂಡ್ಯ ಆಟ 11 ರನ್ನಿಗೆ ಮುಗಿಯಿತು. ಎರಡೂ ವಿಕೆಟ್ ಆವೇಶ್ ಖಾನ್ ಪಾಲಾಯಿತು. ಇಬ್ಬರೂ ಕೀಪರ್ ಡಿ ಕಾಕ್‌ಗೆ ಕ್ಯಾಚಿತ್ತರು.
ಪವರ್ ಪ್ಲೇಯಲ್ಲಿ 2ಕ್ಕೆ 35 ರನ್ ಗಳಿಸಿ ಪರದಾಡಿದ ಗುಜರಾತ್, 10 ಓವರ್ ಮುಕ್ತಾಯಕ್ಕೆ 3ಕ್ಕೆ 59 ರನ್ ಗಳಿಸಿತ್ತು. ಆಗ ಆರಂಭಕಾರ ಶುಭಮನ್ ಗಿಲ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದರು. ಜತೆಯಲ್ಲಿದ್ದವರು ಡೇವಿಡ್ ಮಿಲ್ಲರ್. ಇವರಿಬ್ಬರು ಸೇರಿಕೊಂಡು 16ನೇ ಓವರ್ ತನಕ ಜತೆಯಾಟ ಮುಂದುವರಿಸಿದರು. ಆದರೆ ಈ ಅವಧಿಯಲ್ಲಿ ವಿಶೇಷ ಬ್ಯಾಟಿಂಗ್ ಅಬ್ಬರವೇನೂ ಕಂಡುಬರಲಿಲ್ಲ. .
ಈ ಜೋಡಿಯನ್ನು ಬೇರ್ಪಡಿಸಿದವರು ಜೇಸನ್ ಹೋಲ್ಡರ್. 24 ಎಸೆತಗಳಿಂದ 26 ರನ್ ಮಾಡಿದ ಮಿಲ್ಲರ್ ಪೆವಿಲಿಯನ್ ಸೇರಿಕೊಂಡರು. ಇದರಲ್ಲಿ ಒಂದು ಫೋರ್ ಹಾಗೂ ಗುಜರಾತ್ ಸರದಿಯ ಏಕೈಕ ಸಿಕ್ಸರ್ ಸೇರಿತ್ತು. ಈ ನಡುವೆ ಗಿಲ್ ಅರ್ಧ ಶತಕ ಸಂಭ್ರಮದೊಂದಿಗೆ ಮುಂದುವರಿದರು.
ಸ್ಕೋರ್ ಪಟ್ಟಿ
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಾಹಾ ಸಿ ಆವೇಶ್ ಬಿ ಮೊಹ್ಸಿನ್ 5
ಶುಭಮನ್ ಗಿಲ್ ಔಟಾಗದೆ 63
ಮ್ಯಾಥ್ಯೂ ವೇಡ್ ಸಿ ಡಿ ಕಾಕ್ ಬಿ ಆವೇಶ್ 10
ಹಾರ್ದಿಕ್ ಪಾಂಡ್ಯ ಸಿ ಡಿ ಕಾಕ್ ಬಿ ಆವೇಶ್ 11
ಡೇವಿಡ್ ಮಿಲ್ಲರ್ ಸಿ ಬದೋನಿ ಬಿ ಹೋಲ್ಡರ್ 26
ರಾಹುಲ್ ತೆವಾಟಿಯ ಔಟಾಗದೆ 22
ಇತರ 7
ಒಟ್ಟು (4 ವಿಕೆಟಿಗೆ) 144
ವಿಕೆಟ್ ಪತನ: 1-8, 2-24, 3-51, 4-103.
ಬೌಲಿಂಗ್: ಮೊಹ್ಸಿನ್ ಖಾನ್ 4-0-18-1
ದುಷ್ಮಂತ ಚಮೀರ 4-0-34-0
ಆವೇಶ್ ಖಾನ್ 4-0-26-2
ಕೃಣಾಲ್ ಪಾಂಡ್ಯ 4-0-24-0
ಜೇಸನ್ ಹೋಲ್ಡರ್ 4-0-41-1
ಲಕ್ನೋ ಸೂಪರ್ ಜೈಂಟ್ಸ್
ಕ್ವಿಂಟನ್ ಡಿ ಕಾಕ್ ಸಿ ಸಾಯಿ ಬಿ ದಯಾಳ್ 11
ಕೆಎಲ್ ರಾಹುಲ್ ಸಿ ಸಾಹಾ ಬಿ ಶಮಿ 8
ದೀಪಕ್ ಹೂಡಾ ಸಿ ಶಮಿ ಬಿ ರಶೀದ್ 27
ಕರಣ್ ಶರ್ಮ ಸಿ ಮಿಲ್ಲರ್ ಬಿ ದಯಾಳ್ 4
ಕೃಣಾಲ್ ಪಾಂಡ್ಯ ಸ್ಟಂಪ್ಡ್ ಸಾಹಾ ಬಿ ರಶೀದ್ 5
ಆಯುಷ್ ಬದೋನಿ ಸ್ಟಂಪ್ಡ್ ಸಾಹಾ ಬಿ ಸಾಯಿ 8
ಮಾರ್ಕಸ್ ಸ್ಟೋಯಿನಿಸ್ ರನೌಟ್ 2
ಜೇಸನ್ ಹೋಲ್ಡರ್ ಸಿ ರಶೀದ್ ಬಿ ಸಾಯಿ 1
ದುಷ್ಮಂತ ಚಮೀರ ಔಟಾಗದೆ 0
ಆವೇಶ್ ಖಾನ್ ಸಿ ಸಾಹಾ ಬಿ ರಶೀದ್ 12
ಇತರ: 3
ಒಟ್ಟು (13.5 ಓವರ್‌ಗಳಲ್ಲಿ ಆಲೌಟ್) 82
ವಿಕೆಟ್ ಪತನ: 1-19, 2-24, 3-33, 4-45, 5-61, 6-65, 7-67, 8-70, 9-70
ಬೌಲಿಂಗ್: ಮೊಹಮ್ಮದ್ ಶಮಿ 3-0-5-1
ಹಾರ್ದಿಕ್ ಪಾಂಡ್ಯ 1-0-8-0
ಯಶ್ ದಯಾಳ್ 2-0-24-2
ಅಲ್ಜಾರಿ ಜೋಸೆಫ್ 2-0-14-0
ರಶೀದ್ ಖಾನ್ 3.5-0-24-4
ಸಾಯಿ ಕಿಶೋರ್ 2-0-7-2
ಪಂದ್ಯಶ್ರೇಷ್ಠ: ಶುಭಮನ್ ಗಿಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.