ಐಪಿಎಲ್‌: ಸೂಪರ್‌ ಓವರ್‌ ರೋಮಾಂಚನ


Team Udayavani, Apr 7, 2021, 9:00 AM IST

ಐಪಿಎಲ್‌: ಸೂಪರ್‌ ಓವರ್‌ ರೋಮಾಂಚನ

ಎರಡೂ ತಂಡಗಳ ಮೊತ್ತ ಸಮನಾಗಿ ಪಂದ್ಯ ಟೈ ಆದಾಗ ಅಳವಡಿಸುವ ಟೈ ಬ್ರೇಕರ್‌ ವಿಧಾನವೇ ಸೂಪರ್‌ ಓವರ್‌. ಯಾವುದಾದರೊಂದು ತಂಡ ಸ್ಪಷ್ಟ ಗೆಲುವು ಕಾಣಬೇಕೆಂಬುದೇ ಇದರ ಉದ್ದೇಶ. ಲೀಗ್‌ ಹಂತಗಳಲ್ಲಿ ಸೂಪರ್‌ ಓವರ್‌ ಎಸೆಯದೆಯೇ ಅಂಕಗಳನ್ನು ಎರಡೂ ತಂಡಗಳಿಗೆ ಸಮನಾಗಿ ಹಂಚಬಹುದು. ಆದರೆ ನಾಕೌಟ್‌ಗಳಲ್ಲಿ ಸೂಪರ್‌ ಓವರ್‌ ಅನಿವಾರ್ಯ.

ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಹೆಚ್ಚುವರಿ ಓವರ್‌ ಎಸೆಯುವ ನಿಯಮವಿದೆ. ನಿರ್ದಿಷ್ಟ ಅವಧಿಯಲ್ಲಿ ತಂಡವೊಂದು ಗೆಲ್ಲುವ ತನಕ ಈ ಪ್ರಕ್ರಿಯೆ ಮುಂದುವರಿಯುತ್ತದೆ. ತಂಡವೊಂದರ ಕೇವಲ ಮೂವರು ಬ್ಯಾಟ್ಸ್‌ಮನ್‌ ಹಾಗೂ ಒಬ್ಬ ಬೌಲರ್‌ಗೆ ಮಾತ್ರ ಇದರಲ್ಲಿ ಕಾಣಿಸಿಕೊಳ್ಳುವ ಅವಕಾಶವಿದೆ.

ರಾಜಸ್ಥಾನ್‌ಗೆ ಮೊದಲ ಜಯ
ಐಪಿಎಲ್‌ ಇತಿಹಾಸದಲ್ಲಿ ಈ ವರೆಗೆ 12 ಪಂದ್ಯಗಳಲ್ಲಿ ಸೂಪರ್‌ ಓವರ್‌ ಮೂಲಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗಿದೆ. ಇದಕ್ಕೆ ಮೊದಲ ನಿದರ್ಶನ 2009ರ ಕೇಪ್‌ಟೌನ್‌ ಪಂದ್ಯದಲ್ಲಿ ಕಂಡುಬರುತ್ತದೆ. ಅಂದಿನ ಕೆಕೆಆರ್‌-ರಾಜಸ್ಥಾನ್‌ ಪಂದ್ಯದಲ್ಲಿ ಎರಡೂ ತಂಡಗಳು 150 ರನ್‌ ಬಾರಿಸಿದ ಕಾರಣ ಪಂದ್ಯ ಟೈ ಆಗಿತ್ತು. ಸೂಪರ್‌ ಓವರ್‌ನಲ್ಲಿ ಕೆಕೆಆರ್‌ 15 ರನ್‌ ಮಾಡಿತು. ಇದು ಕ್ರಿಸ್‌ ಗೇಲ್‌ ಅವರ 3 ಬೌಂಡರಿಗಳನ್ನು ಒಳಗೊಂಡಿತ್ತು. ರಾಜಸ್ಥಾನ್‌ ಪರ ಸಿಡಿದು ನಿಂತವರು ಯೂಸುಫ್‌ ಪಠಾಣ್‌. ಅವರು ಅಜಂತ ಮೆಂಡಿಸ್‌ ಅವರ ನಾಲ್ಕೇ ಎಸೆತಗಳಲ್ಲಿ 16 ರನ್‌ ಬಾರಿಸಿ ರಾಜಸ್ಥಾನಕ್ಕೆ ಗೆಲುವು ತಂದಿತ್ತರು.

ಎಬಿಡಿ ಸತತ 2 ಸಿಕ್ಸರ್‌
2011 ಮತ್ತು 2012ರ ಸಾಲಿನಲ್ಲಿ ಯಾವುದೇ ಟೈ ಪಂದ್ಯಗಳು ಕಂಡುಬರಲಿಲ್ಲ. 2013ರಲ್ಲಿ 2 ಪಂದ್ಯಗಳು ಟೈ ಆದವು. ಎರಡೂ ಆರ್‌ಸಿಬಿ ಪಂದ್ಯಗಳೇ ಆಗಿದ್ದವು. ಮೊದಲ ಪಂದ್ಯ ಆರ್‌ಸಿಬಿ ವರ್ಸರ್‌ ಡೆಲ್ಲಿ. ಆಗ ಸೂಪರ್‌ ಓವರ್‌ನಲ್ಲಿ ಬೆಂಗಳೂರು ಗೆಲುವಿಗೆ 12 ರನ್‌ ಅಗತ್ಯವಿತ್ತು. ಬ್ಯಾಟ್‌ ಹಿಡಿದು ಬಂದವರು ಗೇಲ್‌-ಎಬಿಡಿ. ಮೊದಲ 4 ಎಸೆತಗಳಲ್ಲಿ ಬಂದದ್ದು ಮೂರೇ ರನ್‌. ಆರ್‌ಸಿಬಿಗೆ ಸೋಲೇ ಗತಿ ಎಂದು ಅಭಿಮಾನಿಗಳು ಹತಾಶರಾಗಿದ್ದಾಗ ಎಬಿಡಿ ಸತತ 2 ಸಿಕ್ಸರ್‌ ಬಾರಿಸಿ ಅಮೋಘ ಗೆಲುವು ತಂದಿತ್ತರು!
ಅನಂತರದ ಪಂದ್ಯ ಆರ್‌ಸಿಬಿ-ಹೈದರಾಬಾದ್‌ ನಡುವೆ ನಡೆದಿತ್ತು. ಇಲ್ಲಿ 20 ರನ್‌ ಚೇಸ್‌ ಮಾಡಲು ವಿಫಲವಾದ ಆರ್‌ಸಿಬಿ ಸೋಲನುಭವಿಸಿತು.

ರಬಾಡ ಮ್ಯಾಜಿಕ್‌
2020ರ ಡೆಲ್ಲಿ-ಪಂಜಾಬ್‌ ನಡುವಿನ ದುಬಾೖ ಟೈ ಪಂದ್ಯ ಕಾಗಿಸೊ ರಬಾಡ ಅವರ ಬೌಲಿಂಗ್‌ ಮ್ಯಾಜಿಕ್‌ಗೆ ಸಾಕ್ಷಿಯಾಗಿತ್ತು. ಸ್ಕೋರ್‌ ಸಮನಾದ ಬಳಿಕ ಪಂಜಾಬ್‌ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆಯಿತು. ರಬಾಡ ಎಸೆದ ಮೊದಲ ಎಸೆತದಲ್ಲಿ ರಾಹುಲ್‌ 2 ರನ್‌ ತೆಗೆದರು. ಮುಂದಿನೆರಡು ಎಸೆತಗಳಲ್ಲಿ ರಾಹುಲ್‌ ಮತ್ತು ಪೂರಣ್‌ ವಿಕೆಟ್‌ ಉರುಳಿತು. ಡೆಲ್ಲಿ 3 ಎಸೆತಗಳಲ್ಲಿ 3 ರನ್‌ ಮಾಡಿ ಗೆದ್ದು ಬಂತು. ಇದು ಐಪಿಎಲ್‌ ಇತಿಹಾಸದ ಸಣ್ಣ ಮೊತ್ತದ ಸೂಪರ್‌ ಓವರ್‌!

ಬುಮ್ರಾ ಬೊಂಬಾಟ್‌ ಬೌಲಿಂಗ್‌
ಇದು ಮುಂಬೈ-ಗುಜರಾತ್‌ ನಡುವಿನ 2017ರ ರಾಜ್‌ಕೋಟ್‌ ಪಂದ್ಯ. ಎರಡೂ ತಂಡಗಳು 153 ರನ್‌ ಬಾರಿಸಿದ ಬಳಿಕ ಪಂದ್ಯ ಸೂಪರ್‌ ಓವರ್‌ನತ್ತ ಮುಖ ಮಾಡಿತ್ತು.

ಜೇಮ್ಸ್‌ ಫಾಕ್ನರ್‌ 4-5ನೇ ಎಸೆತಗಳಲ್ಲಿ ಪೊಲಾರ್ಡ್‌ ಮತ್ತು ಬಟ್ಲರ್‌ ವಿಕೆಟ್‌ ಹಾರಿಸಿದ್ದರಿಂದ ಮುಂಬೈಗೆ 11 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಬುಮ್ರಾ ಬೌಲಿಂಗ್‌ ದಾಳಿಗಿಳಿದರು. ಮೊದಲ ಎಸೆತವೇ ನೋಬಾಲ್‌. ಬಳಿಕ ಒಂದು ಲೆಗ್‌ಬೈ. 2ನೇ ಎಸೆತ ವೈಡ್‌. ಬಳಿಕ ಡಾಟ್‌ ಬಾಲ್‌. 3ನೇ ಎಸೆತಕ್ಕೆ ಒಂದು ಬೈ. 4ನೆಯದು ಡಾಟ್‌ ಬಾಲ್‌. ಮುಂದಿನೆರಡು ಎಸೆತಗಳಿಗೆ ಬರೀ ಎರಡು ಸಿಂಗಲ್ಸ್‌. ಈ ರೀತಿಯಾಗಿ ಬೊಂಬಾಟ್‌ ಬೌಲಿಂಗ್‌ ನಡೆಸಿದ ಬುಮ್ರಾ ಫಿಂಚ್‌-ಮೆಕಲಮ್‌ ಜೋಡಿಯನ್ನು ಕಟ್ಟಿಹಾಕಿ ಮುಂಬೈಗೆ ಅಮೋಘ ಗೆಲುವು ತಂದಿತ್ತದ್ದು ಐಪಿಎಲ್‌ನ ಅಮೋಘ ಸಾಧನೆಗಳಳ್ಳಿ ಒಂದಾಗಿದೆ.

ಪಂಜಾಬ್‌ಗ ಸೂಪರ್‌ ಜಯ
ಚೆನ್ನೈ ವಿರುದ್ಧ ಪಂಜಾಬ್‌ ತನ್ನ ಮೊದಲ ಗೆಲುವು ದಾಖಲಿಸಿದ್ದೇ ಸೂಪರ್‌ ಓವರ್‌ನಲ್ಲಿ ಎಂಬುದನ್ನು ಮರೆಯುವಂತಿಲ್ಲ! ಅದು 2010ರ ಚೆನ್ನೈ ಮುಖಾಮುಖೀ. ಇತ್ತಂಡಗಳಿಂದ 136 ರನ್‌ ದಾಖಲಾಯಿತು. ಸೂಪರ್‌ ಓವರ್‌ನಲ್ಲಿ
ಪಂಜಾಬ್‌ಗ 10 ರನ್‌ ಟಾರ್ಗೆಟ್‌ ಲಭಿಸಿತು. ಬೌಲರ್‌ ಮುತ್ತಯ್ಯ ಮುರಳೀಧರನ್‌!

ಮೊದಲ ಎಸೆತವನ್ನೇ ಅವರದೇ ದೇಶದ ಜಯವರ್ಧನೆ ಸಿಕ್ಸರ್‌ಗೆ ರವಾನಿಸಿದರು. ಮುಂದಿನ ಎಸೆತದಲ್ಲಿ ಮುರಳಿ ಸೇಡು ತೀರಿಸಿಕೊಂಡರು. ಜಯವರ್ಧನ ಔಟ್‌. ಕ್ರೀಸಿಗೆ ಬಂದವರು ಯುವರಾಜ್‌. ಇವರಿಗೆ ಮೊದಲ ಎಸೆತದಲ್ಲಿ ರನ್‌ ಗಳಿಸಲಾಗಲಿಲ್ಲ. ಮುಂದಿನ ಎಸೆತಕ್ಕೆ ರಿವರ್ಸ್‌ ಸ್ವೀಪ್‌. ಚೆಂಡು ಬೌಂಡರಿ ರೇಖೆಯಾಚೆ ಚಿಮ್ಮಿತು. ಪಂಜಾಬ್‌ ಗೆದ್ದು ಸಂಭ್ರಮಿಸಿತು.

ಸೂಪರ್‌ ಓವರ್‌ ಕೂಡ ಟೈ!
ಸೂಪರ್‌ ಓವರ್‌ ಕೂಡ ಟೈ ಆಗಿ ದ್ವಿತೀಯ ಸೂಪರ್‌ ಓವರ್‌ ಮೂಲಕ ಫಲಿತಾಂಶ ನಿರ್ಧರಿಸಿದ ರೋಚಕ ಮುಖಾಮುಖೀಗೂ ಐಪಿಎಲ್‌ ಸಾಕ್ಷಿಯಾಗಿದೆ. ಇದು ಕಳೆದ ವರ್ಷ ದುಬಾೖಯಲ್ಲಿ ಆಡಲಾದ ಮುಂಬೈ-ಪಂಜಾಬ್‌ ನಡುವಿನ ಪಂದ್ಯವಾಗಿತ್ತು.
ಎರಡೂ ತಂಡಗಳು 6ಕ್ಕೆ 176 ರನ್‌ ಗಳಿಸಿದ ಬಳಿಕ ಸೂಪರ್‌ ಓವರ್‌ ಎಸೆಯಲಾಯಿತು. ಇದರಲ್ಲೂ ಇತ್ತಂಡಗಳು ಸಮಾನ ಸ್ಕೋರ್‌ ದಾಖಲಿಸಿದವು. ಪಂಜಾಬ್‌ 5 ರನ್‌ ಮಾಡಿದರೆ, ಮುಂಬೈಯನ್ನು ಕಟ್ಟಿಹಾಕಿದ ಶಮಿ ಕೂಡ ಐದೇ ರನ್‌ ನೀಡಿದರು (1, 1, 1, 0, 1, 1). ಕೊನೆಯ ಎಸೆತದಲ್ಲಿ ಎರಡನೇ ರನ್‌ ಗಳಿಸುವ ವೇಳೆ ಡಿ ಕಾಕ್‌ ರನೌಟ್‌ ಆಗುವುದರೊಂದಿಗೆ ಪಂದ್ಯ ಎರಡನೇ ಸೂಪರ್‌ ಓವರ್‌ನತ್ತ ಮುಖ ಮಾಡಿತು.

ಇಲ್ಲಿ ಮುಂಬೈ ಗಳಿಸಿದ್ದು ಒಂದಕ್ಕೆ 11 ರನ್‌. ಪಂಜಾಬ್‌ ನಾಲ್ಕೇ ಎಸೆತಗಳಲ್ಲಿ ನೋಲಾಸ್‌ 15 ರನ್‌ ಮಾಡಿ ಗೆಲುವು ಒಲಿಸಿಕೊಂಡಿತು. ಬೌಲ್ಟ್ ಅವರ ಮೊದಲ ಎಸೆತವನ್ನೇ ಗೇಲ್‌ ಸಿಕ್ಸರ್‌ಗೆ ರವಾನಿಸಿದರು. 3ನೇ ಮತ್ತು 4ನೇ ಎಸೆತಗಳನ್ನು ಅಗರ್ವಾಲ್‌ ಬೌಂಡರಿಗೆ ಬಡಿದಟ್ಟಿದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.